Advertisement

“ಅಮೃತ್‌ ನೋನಿ’ಹೆಸರಿನ ನಕಲಿ ಉತ್ಪನ್ನ ಮಾರಾಟ: ಪೊಲೀಸರ ದಾಳಿ

06:48 PM Oct 05, 2021 | Team Udayavani |

ಶಿವಮೊಗ್ಗ: “ಅಮೃತ್‌ ನೋನಿ’ಸಂಸ್ಥೆ ಹೆಸರಿನಲ್ಲಿ ನಕಲಿ ಉತ್ಪನ್ನಮಾರುತ್ತಿರುವುದು ಬೆಳಕಿಗೆ ಬಂದಿದ್ದು,ಪೊಲೀಸರು ದಾಳಿ ನಡೆಸಿದ್ದಾರೆ.

Advertisement

“ಅಮೃತ್‌ ನೋನಿ’ಯ ಬಾಟಲಿಹಾಗೂ ಪ್ಯಾಕಿಂಗ್‌ನ್ನೇ ಹೋಲುವಂತೆ ನಕಲಿ ಪ್ಯಾಕಿಂಗ್‌ ಮಾಡಿ ಜ್ಯೂಸ್‌ಮಾರಾಟ ಮಾಡುತ್ತಿರುವುದನ್ನುಪೊಲೀಸರು ಪತ್ತೆ ಹಚ್ಚಿದ್ದಾರೆ.”ಅಮೃತ್‌ ನೋನಿ’ ಮಾರಾಟಮಾಡುತ್ತಿರುವ “ವ್ಯಾಲ್ಯೂ ಪ್ರಾಡೆಕ್ಟ್’ಕಂಪನಿ ನೀಡಿದ ದೂರಿನ ಆಧಾರದಮೇಲೆ ಪೊಲೀಸರು ಶಿವಮೊಗ್ಗದ ಮಾರ್ನಮಿ ಬೈಲಿನಲ್ಲಿರುವ ಫಾರ್ಮಾಸಂಸ್ಥೆಯೊಂದರ ಮೇಲೆ ದಾಳಿ ನಡೆಸಿ 31ಬಾಕ್ಸ್‌ ನಕಲಿ “ಅಮೃತ್‌ ನೋನಿ’ಯನ್ನುವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ ವೇಳೆ”ಅಮೃತ್‌ ನೋನಿ’ಯನ್ನೇ ಹೋಲುವಂತೆಪ್ಯಾಕಿಂಗ್‌ ಮಾಡಿರುವ ಬಾಟಲಿಗಳುಪತ್ತೆಯಾಗಿವೆ. ಮಾರುಕಟ್ಟೆಯಲ್ಲಿ ನಕಲಿಉತ್ಪನ್ನ ಮಾರುತ್ತಿರುವ ಬಗ್ಗೆ “ವ್ಯಾಲ್ಯೂಪ್ರಾಡೆಕ್ಟ್’ ಸಂಸ್ಥೆಗೆ ಗ್ರಾಹಕರು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸ್‌ ದೂರುನೀಡಲಾಗಿತ್ತು.ನಕಲಿ ಬಾಟಲಿಗಳನ್ನು ವಶಕ್ಕೆಪಡೆದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next