ಹೊಸನಗರ: ಅಡಕೆ ಮರಗಳಲ್ಲಿ ಎಲೆಚುಕ್ಕಿರೋಗ ವ್ಯಾಪಕವಾಗಿ ಹರಡಲು ಈ ಭಾಗದ ಮಣ್ಣಿನಲ್ಲಿ ಪೊಟ್ಯಾಸ್ ಅಂಶ ಕಡಿಮೆ ಇರುವುದೇ ಕಾರಣ ಎಂದು ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ(ಐಸಿಎಆರ್-ಸಿಪಿಸಿಆರ್‌ಐ) ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ನಿಟ್ಟೂರಿನಲ್ಲಿ ಶೋಧಾಫಾರ್ಮರ್ ಪ್ರೊಡ್ನೂಸರ್ ಕಂಪೆನಿಯಿಂದಆಯೋಜಿಸಿದ್ದ ಕಾರ್ಯಾಗಾರಕ್ಕೆ ಭೇಟಿನೀಡಿದ ಸಿಆರ್‌ಸಿಪಿಐ ವಿಜ್ಞಾನಿಗಳಾದ ಡಾ|ರವಿ ಭಟ್, ಡಾ| ವಿನಾಯಕ ಹೆಗಡೆ ನಿಟ್ಟೂರುಮತ್ತು ಶಂಕಣ್ಣ ಶಾನುಭೋಗ್ ಪ್ರದೇಶದಲ್ಲಿವಿವಿಧ ಅಡಕೆ ತೋಟಗಳ ಮಣ್ಣನ್ನುಪರಿಶೀಲಿಸಿದ ಬಳಿಕ ರೋಗ ಉಲ್ಬಣದ ಬಗ್ಗೆಮಾಹಿತಿ ನೀಡಿದರು.
ಗಾಳಿಯಲ್ಲಿ ಹರಡುತ್ತದೆ: ಎಲೆಚುಕ್ಕಿ ರೋಗದಸೋಂಕು ಗಾಳಿಯಲ್ಲಿ ಹರಡುವ ಕಾರಣವ್ಯಾಪಕವಾಗಿ ಹರಡುತ್ತಿದೆ. ಈ ಪ್ರದೇಶದಲ್ಲಿತೇವಾಂಶ ಹೆಚ್ಚಿರುವ ಕಾರಣ ಫಂಗಸ್‌ಹರಡುತ್ತಿದೆ. ಎಲ್ಲಾ ರೈತರು ಸಾಮೂಹಿಕವಾಗಿಶಿಲೀಂಧ್ರ ನಾಶಕ ಸಿಂಪಡಿಸಿದಲ್ಲಿ ಮಾತ್ರರೋಗ ತಡೆಗಟ್ಟುತ್ತದೆ. ಈ ರೋಗಒಮ್ಮೆಲೇ ಮರಗಳನ್ನು ಕೊಲ್ಲುವುದಿಲ್ಲ.ಹಂತ-ಹಂತವಾಗಿ ಸಾಯಿಸುತ್ತದೆ ಎಂದುವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದೇ ಮೊದಲಲ್ಲ: ಎಲೆಚುಕ್ಕಿ ರೋಗಬಹಳ ಹಿಂದಿನಿಂದಲೂ ಇದೆ. 5 ವರ್ಷದಹಿಂದೆ ತ್ರಿಪುರಾಗೆ ಭೇಟಿ ನೀಡಿದಾಗ ಅಲ್ಲಿಇದಕ್ಕಿಂತಲೂ ಹೆಚ್ಚು ರೋಗದ ತೀವ್ರತೆಕಂಡು ಬಂದಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿಮಾತ್ರವಲ್ಲ ಚಿಕ್ಕಮಗಳೂರು ಜಿಲ್ಲೆಯಲ್ಲಿಕೂಡ ರೋಗ ಕಂಡು ಬಂದಿದೆ. ಅಲ್ಲದೆಈ ರೋಗ ಉಲ್ಬಣಗೊಳ್ಳಲು ಕಳೆದ ಹತ್ತುವರ್ಷದಲ್ಲಾದ ಬದಲಾವಣೆಯೂ ಕಾರಣ.ಇಲ್ಲಿಯ ಮಣ್ಣಿನಲ್ಲಿ ಪೊಟ್ಯಾಶ್ ಕಡಿಮೆ ಇದೆ.ರಂಜಕ ಹೆಚ್ಚಿದೆ. ಮಣ್ಣು ಅಕ್ಷಯ ಪಾತ್ರೆಯಲ್ಲ.ಪ್ರತಿ ಬೆಳೆ ಬರುತ್ತಿದ್ದಂತೆ ಮಣ್ಣಿನಲ್ಲಿ ಪೌಷ್ಟಿಕಾಂಶ ಕಡಿಮೆಯಾಗುತ್ತಿದೆ. ಯಾವ ಅಂಶಕಡಿಮೆಯಾಗುತ್ತದೆ. ಅದನ್ನು ನಿರಂತರವಾಗಿನೀಡುತ್ತಾ ಬರಬೇಕು ಎಂದರು.
ಮಾರ್ಗೋಪಾಯ: ಮೊದಲನೆಯದಾಗಿಮಣ್ಣು ಪರೀಕ್ಷೆ ಮಾಡಿಸಿ. ಮಣ್ಣಿನಲ್ಲಿರುವಅಂಶದ ಆಧಾರದ ಮೇಲೆ ಶಿಲೀಂಧ್ರ ನಾಶಕಸಿಂಪಡಿಸಬೇಕು. ಅಲ್ಲದೆ ಶಿಲೀಂಧ್ರ ನಾಶಕವನ್ನುಸಾಮೂಹಿಕವಾಗಿ ಸಿಂಪಡಿಸಬೇಕು.ತುರ್ತಾಗಿ ಪರಿಹಾರೋಪಾಯವನ್ನುಅಳವಡಿಸಿಕೊಂಡಲ್ಲಿ ಅಡಕೆ ಮರಗಳನ್ನುಉಳಿಸಿಕೊಳ್ಳಬಹುದು ಎಂದಿದ್ದಾರೆ.ಸರ್ಕಾರ ವಿಶೇಷ ಆಸಕ್ತಿ ತೋರಲಿ: ವಿಜ್ಞಾನಿಗಳುಮಹತ್ವದ ಸಲಹೆ ನೀಡಿದ್ದಾರೆ. ಇದುಸಾಕಾರಗೊಳ್ಳಲು ಸರ್ಕಾರ ವಿಶೇಷ ಆಸಕ್ತಿತೋರಬೇಕು. ಈ ಭಾಗದಲ್ಲಿ ಪೊಟ್ಯಾಶ್‌ಪೂರೈಕೆ ಕಡಿಮೆ ಇದೆ. ಇದನ್ನು ತುರ್ತಾಗಿಒದಗಿಸಬೇಕು ಎಂದು ಶೋಧಾ ಫಾರ್ಮರ್ಪ್ರೊಡ್ನೂಸರ್ ಕಂಪೆನಿ ಅಧ್ಯಕ್ಷ ಪುರುಷೋತ್ತಮಬೆಳ್ಳಕ್ಕ ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ವರದಿ: ತೋಟಗಾರಿಕಾಇಲಾಖೆಯ ಉಪ ನಿರ್ದೇಶಕ ಕೆ.ರಾಮಚಂದ್ರಮಾತನಾಡಿ, ಎಲೆಚುಕ್ಕಿ ರೋಗ ಪ್ರತಿವರ್ಷಇರುತ್ತದೆ. ಈ ಬಾರಿ ಉಲ½ಣಗೊಂಡಿರುವುದುಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆ ನವಿಲೆಕೃಷಿ ವಿಜ್ಞಾನಿಗಳನ್ನು ಕರೆಸಿ ಅಧ್ಯಯನಮಾಡಿಸಲಾಗಿತ್ತು. ಇದೀಗ ಶೋಧಾಫಾರ್ಮರ್ ಪ್ರೊಡ್ನೂಸರ್ ಕಂಪೆನಿ ನೇತೃತ್ವದಲ್ಲಿಕೇಂದ್ರ ಸರ್ಕಾರದ ಅಡಿಯಲ್ಲಿರುವ ಸಂಸ್ಥೆಯವಿಜ್ಞಾನಿಗಳಿಂದ ಅಧ್ಯಯನ ಮಾಡಲಾಗಿದೆ.ಅವರು ನೀಡುವ ಮಾರ್ಗೋಪಾಯದಆಧಾರದ ಮೇಲೆ ಸರ್ಕಾರಕ್ಕೆ ಸಮಗ್ರ ವರದಿನೀಡಲಾಗುವುದು. ಶಾಸಕ ಹರತಾಳು ಹಾಲಪ್ಪವಿಶೇಷ ಮುತುವರ್ಜಿ ತೆಗೆದುಕೊಂಡಿದ್ದುಸರ್ಕಾರದ ಮಟ್ಟಕ್ಕೆ ಸಲ್ಲಿಸಲು ಅವರಗಮನಕ್ಕೂ ತರಲಾಗುವುದು ಎಂದರು.ತಾಲೂಕು ತೋಟಾಗಾರಿಕಾಅಧಿಕಾರಿ ಪುಟ್ಟನಾಯ್ಕ, ಪ್ರಮುಖರಾದಸತ್ಯನಾರಾಯಣ ಭಟ್, ಪರಮೇಶ್ವರ್,ದೇವರಾಜ್, ವಿನಾಯಕ ಚಕ್ಕಾರು ಇತರರುಇದ್ದರು