ಶಿವಮೊಗ್ಗ: ಕೊರೊನಾ ಲಸಿಕೆ ಬಗ್ಗೆ ಜಾಗೃತಿಮೂಡಿಸುವ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.
ಶಿವಮೊಗ್ಗದ ಚೈತನ್ಯ ರೂರಲ್ ಡೆವಲಪ್ಮೆಟ್ ಸೊಸೈಟಿ (ರಿ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ಮತ್ತು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಧ್ವನಿಪೌಂಡೇಶನ್ ಸಹಾಯದೊಂದಿಗೆ ಮುದ್ರಿಸಲಾದ 14900 ಬಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಬಿಡುಗಡೆಗೊಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಅರ್ಹ ಜನತೆಗೆ ಲಸಿಕೆತಲುಪಬೇಕು. ಲಸಿಕೆ ಬಗ್ಗೆ ಅರಿವು ಮೂಡಿಸುವುದರಮುಖಾಂತರ ಪ್ರತಿಯೊಬ್ಬರು ಮುಂದೆ ಬಂದು ಲಸಿಕೆ ಪಡೆಯುವಂತಾಗಬೇಕು. ಹೀಗಾಗಿ ಜಿಲ್ಲೆಯಪ್ರತಿ ಗ್ರಾಮ ಪಂಚಾಯಿತಿ ಮತ್ತು ಪಂಚಾಯಿತಿವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ಬಿತ್ತಿಪತ್ರಗಳ ಮೂಲಕಮಾಹಿತಿ ನೀಡುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್. ವೈಶಾಲಿಮಾತನಾಡಿ, ಜಿಲ್ಲೆಯ 271 ಗ್ರಾಮಪಂಚಾಯಿತಿಗಳಲ್ಲಿ ಕೋವಿಡ್‌ಕಾರ್ಯಪಡೆ ಕೆಲಸ ಮಾಡುತ್ತಿದೆ. ಗ್ರಾಮಪಂಚಾಯತ್ ಕಾರ್ಯಪಡೆಯೊಂದಿಗೆ ಸೇರಿಲಸಿಕೆಯ ನಿಗದಿತ ಗುರಿ ಮುಟ್ಟುವಂತೆ ತಿಳಿಸಿದರು.
ಕಾರ್ಯಪಡೆಯಲ್ಲಿರುವ ಎಲ್ಲಾ ಸದಸ್ಯರಿಗೆ ಅರಿವುಮೂಡಿಸುವುದರ ಮುಖಾಂತರ ತಾಲೂಕುಮಟ್ಟದ ಆರೋಗ್ಯಾಧಿಕಾರಿಗಳು ಮತ್ತು ಆಶಾಕಾರ್ಯಕರ್ತೆಯರ ಸಹಾಯದೊಂದಿಗೆ ಚೈತನ್ಯಸಂಸ್ಥೆ ಸಹ ತಾಲೂಕು ಮಟ್ಟದ ಸಂಯೋಜಕರನ್ನುನೇಮಿಸಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಂ ಸೇವಕರನ್ನು ಗುರುತಿಸಿಕೊಂಡು ಕೋವಿಡ್ ಲಸಿಕೆಯ ಬಗ್ಗೆ ಅಂದೋಲನ ನಡೆಸುತ್ತಿದೆ.
ಇಲ್ಲಿಯವರೆಗೆ 600 ಹೆಚ್ಚು ಸ್ವಯಂ ಸೇವಕರುಗಳನ್ನು ಗುರುತಿಸಿಕೊಂಡಿದ್ದು, ಈ ಕಾರ್ಯಕ್ಕೆ 2500ಕ್ಕೂ ಹೆಚ್ಚು ಸ್ವಯಂ ಸೇವಕರುಗಳನ್ನು ಗುರುತಿಸಿಕೊಂಡುಪ್ರತಿಯೊಬ್ಬರು ಮೊದಲನೇ ಮತ್ತು ಎರಡನೇಡೋಸ್ ಲಸಿಕೆಯನ್ನು ಸರಿಯಾದ ಸಮಯಕ್ಕೆಪಡೆಯುವಂತೆ ಪ್ರೇರೇಪಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯ ಆರ್‌ಸಿಎಚ್‌ನಾಗರಾಜ ನಾಯ್ಕ, ಸಿಮ್ಸ್ ನಪ್ರವೀಣ್ ಭಟ್‌ಮತ್ತುಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಸಿಇಒ ಬಿ.ಟಿ. ಭದ್ರೀಶ್ ಇದ್ದರು.