ಶಿವಮೊಗ್ಗ: ಮನುಷ್ಯನ ದೇಹ ಪ್ರಕೃತಿಯನ್ನುನಾಡಿಶಾಸ್ತ್ರದ ಮೂಲಕ ಕಂಡು ಹಿಡಿದು ಅದಕ್ಕೆತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ. ಆಲೋಪತಿಪದ್ಧತಿಯಂತೆ ಅತ್ಯಾಧುನಿಕ ಯಂತ್ರಗಳ ಮೂಲಕಪರೀಕ್ಷೆ ಮಾಡಿಸುವ ಅಗತ್ಯತೆ ಇರುವುದಿಲ್ಲ.ನಾಡಿ ಶಾಸ್ತ್ರ ವೈಜ್ಞಾನಿಕವೇಹೊರತು ಕಾಲ್ಪನಿಕವಲ್ಲ ಎಂದುಹರಪನಹಳ್ಳಿ ತೆಗ್ಗಿನಮಠಸಂಸ್ಥಾನದ ಪಟ್ಟಾಧ್ಯಕ್ಷರಾದಷ|ಬ್ರ| ಶ್ರೀ ವರಸದ್ಯೋಜಾತಶಿವಾಚಾರ್ಯರು ಹೇಳಿದರು.
ಕೇರಳದ ವೈದ್ಯ ರತ್ನಂ ಔಷಧಾ ಆಶ್ರಯದಲ್ಲಿಭಾನುವಾರ ಸುವರ್ಣ ಸಂಸ್ಕೃತಿ ಭವನದಲ್ಲಿಹಮ್ಮಿಕೊಳ್ಳಲಾಗಿದ್ದ “ನಿಮಾ ಕಾ ಅಮೃತ್ಮಹೋತ್ಸವ್’ ಎಂಬ ರಾಜ್ಯಮಟ್ಟದ ಒಂದುದಿನದ ಆಯುರ್ವೇದ ವಿಚಾರ ಸಂಕಿರಣದಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರುಮಾತನಾಡಿದರು.ಹಣದಿಂದ ಉತ್ತಮ ಹಾಸಿಗೆ ಖರೀದಿಸಬಹುದೇಹೊರತು ನಿದ್ದೆಯನ್ನಲ್ಲ. ಪುಸ್ತಕ ಖರೀದಿಸಬಹುದೇಹೊರತು ವಿದ್ಯೆಯನ್ನಲ್ಲ. ಔಷ ಧ ಖರೀದಿಸಬಹುದೇಹೊರತು ಆರೋಗ್ಯವನ್ನಲ್ಲ.
ಆರೋಗ್ಯ ಇದ್ದರೆ ಮಾತ್ರಏನನ್ನಾದರೂ ಸಾ ಧಿಸಬಹುದೆಂದರು.ಗೋಣಿಬೀಡು ಶ್ರೀಶೀಲಸಂಪಾದನಾ ಮಠದ ಡಾ|ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ,ಆಯುರ್ವೇದವೆಂದರೆ ಅಳಲೆಕಾಯಿಪಂಡಿತರು ನೀಡುವ ನಾಟಿ ಚಿಕಿತ್ಸೆಎಂಬ ತಾತ್ಸಾರ ಮನೋಭಾವದೂರವಾಗಬೇಕು. ಭಾರತೀಯ ವೈದ್ಯಪರಂಪರೆಯನ್ನು ಗೌರವಿಸಬೇಕು. ಆಯುರ್ವೇದಕೇವಲ ಔಷಧ ಪದ್ಧತಿಯಲ್ಲ, ಅದೊಂದು ಜೀವನಕ್ರಮ ಎಂದು ಹೇಳಿದರು.ನಮ್ಮ ದಿನಚರಿ, ಕರ್ಮ, ನಡೆ-ನುಡಿ, ಆಹಾರ,ಭಾವ-ಭಂಗಿ, ಮಲಗುವ ಕ್ರಮ ಮತ್ತಿತರೆಅಂಶಗಳನ್ನು ಆಯುರ್ವೇದ ತಿಳಿಸುತ್ತದೆ.
ದೇಹಮತ್ತು ಮನಸ್ಸಿನ ಸ್ವತ್ಛತೆ ಆಯುರ್ವೇದದಪರಿಕಲ್ಪನೆಯಾಗಿದೆ. ಸಮಸ್ಯೆ ಬಂದಾಗ ಮಠ-ಮಂದಿರ, ಆರೋಗ್ಯದಲ್ಲಿ ವ್ಯತ್ಯಾಸವಾದಾಗಯೋಗ, ಧ್ಯಾನ, ವ್ಯಾಯಾಮ, ವಾಕಿಂಗ್ ಮಾಡುವಬದಲು ಲಾಲಸೆಗಳಿಗೆ ಒಳಗಾಗದೆ ಆರೋಗ್ಯಕಾಪಾಡಿಕೊಂಡು ಆಯುರ್ವೇದ ಅನುಸರಿಸಿದಲ್ಲಿದೀರ್ಘಾಯುಷಿಗಳಾಗಿ ಬದುಕಬಹುದೆಂದುಹೇಳಿದರು.