Advertisement

ಜಾನುವಾರು ಉತ್ಪಾದಕತೆ ಹೆಚ್ಚಿಸಿ

08:56 PM Jun 24, 2022 | Adarsha |

ಶಿವಮೊಗ್ಗ: ಶಿವಮೊಗ್ಗ ಲೋಕಸಭಾಕ್ಷೇತ್ರದ ಜಾನುವಾರುಗಳಲ್ಲಿನಬಂಜೆತನವನ್ನು ನೀಗಿಸಿ ಅವುಗಳನ್ನುಅನುತ್ಪಾದಕತೆಯಿಂದ ಉತ್ಪಾದಕತೆಯತ್ತಸಾಗಿಸುವ ಯೋಜನೆಯನ್ನು 25ಕೋಟಿ ರೂ.ಗಳಿಗೆ ಏರಿಸುವಂತೆ ಕೇಂದ್ರಹೈನುಗಾರಿಕೆ, ಪಶು ಸಂಗೋಪನೆಮತ್ತು ಮೀನುಗಾರಿಕೆ, ಮೀನುಗಾರಿಕೆಸಚಿವರಾದ ಪರಮೋತ್ತಮ್‌ ರೂಪಲಾಅವರಿಗೆ ಸಂಸದ ಬಿ.ವೈ. ರಾಘವೇಂದ್ರಮನವಿ ಸಲ್ಲಿಸಿದರು.ಭಾರತ ಗೋಪ್ರಧಾನ ದೇಶ.

Advertisement

ಬಡ ರೈತರು ಅದರಲ್ಲೂ ತಾಂಡಾದಲಂಬಾಣಿ ಜನಾಂಗದವರುಗೋಮಾತೆಯ ಮೇಲೆ ಭಕ್ತಿ ಮತ್ತುಜೀವನದ ಆಸರೆ ಹೊಂದಿದ್ದಾರೆ.ಅನುತ್ಪಾದಕ ಗೋವುಗಳನ್ನುಸಾಕುವ ರೈತರು ಅನುಭವಿಸುವನಷ್ಟ ಅಪಾರ. ಈ ಹಸುಗಳನ್ನುರೈತರು ಹಾಲು ಕೊಡದಿದ್ದರೂಸಾಕಲೇಬೇಕು. ಗೋಹತ್ಯಾ ನಿಷೇಧಕಾನೂನು ಪ್ರಸಕ್ತ ಜಾರಿಯಲ್ಲಿದೆ.ಅನುತ್ಪಾದಕ ಗೋವುಗಳು ರೈತರಿಗೆಹೊರೆಯಾಗಬಾರದು.

ಈಯೋಜನೆಯಲ್ಲಿ ಅನುತ್ಪಾದಕರಾಸುಗಳನ್ನು ವಿವಿಧ ಹಳ್ಳಿಗಳಲ್ಲಿಪತ್ತೆ ಹಚ್ಚಿ, ಈ ಅನುತ್ಪಾದಕತೆಯಕಾರಣವನ್ನು ವೈಜ್ಞಾನಿಕ ವಿಧಾನದಲ್ಲಿ ಪತ್ತೆಹಚ್ಚಿ, ಇವುಗಳನ್ನು ವಿವಿಧ ಗುಂಪುಗಳಲ್ಲಿವರ್ಗೀಕರಿಸಿ ಈ ಜಾನುವಾರುಗಳಿಗೆವಿವಿಧ ಪದದ ಚಿಕಿತ್ಸೆಯನ್ನು ನೀಡಿ,ಅವುಗಳ ಸೂಕ್ತ ಅನುಸರಣೆಯನ್ನುಅವು ಗರ್ಭ ಧರಿಸುವವರೆಗೆ ಅಥವಾಹಾಲು ನೀಡುವಂತೆ ಮಾಡಿ,ಅವುಗಳ ಅನುತ್ಪಾಕತೆಯನ್ನು ನೀಗಿಸಿಉತ್ಪಾದನೆಯತ್ತ ಸಾಗುವಂತೆ ಮಾಡಿ. ಈಸಂಶೋಧನೆಯಲ್ಲಿ ಹೊರಹೊಮ್ಮುವಸಂಶೋಧನಾ ಪರಿಣಾಮವನ್ನು ಕ್ಷೇತ್ರಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಪಶುವೈದ್ಯರಿಗೆ ತಲುಪಿಸುವ ಉದ್ದೇಶವನ್ನುಈ ಯೋಜನೆಯಲ್ಲಿ ಹೊಂದಲಾಗಿದೆಎಂದು ಕೇಂದ್ರ ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next