Advertisement

ಗಿಡಮರಗಳನ್ನುಮಕ್ಕಳಂತೆ ಪೋಷಿಸಿ

05:00 PM Jun 08, 2022 | Adarsha |

ಶಿವಮೊಗ್ಗ: ಮರಗಳು ಬೆಳೆದಂತೆ ಪರಿಸರದಮೇಲೆ ಉತ್ತಮ ಪರಿಣಾಮ ಬೀರುತ್ತದೆಎಂದು ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆಸಾಲುಮರದ ತಿಮ್ಮಕ್ಕ ಹೇಳಿದರು.ಸರ್ಜಿ ಫೌಂಡೇಷನ್‌ ಹಾಗೂ ಸೇಂಟ್‌ಜೋಸೆಫ್‌ ಅಕ್ಷರಧಾಮ ವಿದ್ಯಾಸಂಸ್ಥೆಸಹಯೋಗದೊಂದಿಗೆ ಅಕ್ಷರಧಾಮವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಅಂಗವಾಗಿ ನಡೆದ ವನಮಹೋತ್ಸವದಲ್ಲಿ ಗಿಡನೆಟ್ಟು ಅವರು ಮಾತನಾಡಿದರು.ಮರಗಿಡಗಳನ್ನು ರಕ್ಷಿಸಿದರೆ ಅದುನಿಮ್ಮ ಕುಟುಂಬವನ್ನೇ ಸಂರಕ್ಷಿಸುತ್ತದೆ.

Advertisement

ಊರು, ಕೇರಿ, ಜನ, ಕುಟುಂಬಗಳುಸಂತೋಷವಾಗಿರಬೇಕಾದರೆ ಗಿಡ,ಮರಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು.ಆಗ ಊರು ಉದ್ಧಾರವಾಗುತ್ತದೆ. ಊರಿನಲ್ಲಿಜನ ಯಾವ ರೀತಿ ಒಟ್ಟಾಗಿ ಗುಂಪಾಗಿಇರುತ್ತಾರೋ ಅದೇ ರೀತಿ ಮರಗಳನ್ನು ಕೂಡಗುಂಪು ಗುಂಪಾಗಿ ಬೆಳೆಸಬೇಕು.

ಈ ನಿಟ್ಟಿನಲ್ಲಿಒಬ್ಬರಿಗೊಬ್ಬರು ಸಹಕರಿಸಬೇಕು. ಪರಿಸರವೃದ್ಧಿಯಾದರೆ ಮಳೆ-ಬೆಳೆ ಚೆನ್ನಾಗಿ ಬರುತ್ತದೆ.ಎಲ್ಲರಿಗೂ ಸುಖ, ಸಂಪತ್ತು ದೊರೆತುಕಷ್ಟಗಳು ದೂರವಾಗುತ್ತದೆ ಎಂದರು. ಜಿಲ್ಲಾಧಿಕಾರಿ ಡಾ|ಆರ್‌. ಸೆಲ್ವಮಣಿ ಮಾತನಾಡಿ,ಪರಿಸರ ದಿನಾಚರಣೆಯನ್ನು ವರ್ಷಪೂರ್ತಿಆಚರಿಸಿದರೂ ತಪ್ಪಲ್ಲ. ಪರಿಸರ ರಕ್ಷಿಸಿದರೆಮಾತ್ರ ಮನುಷ್ಯನಿಗೆ ಉಳಿಗಾಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next