Advertisement

ಜೈನಧರ್ಮ ಪಾಲನೆಯಿಂದ ಸುಖ-ಶಾಂತಿ: ಹೊಂಬುಜ ಶ್ರೀ

07:21 PM Mar 27, 2022 | Team Udayavani |

ರಿಪ್ಪನ್‌ಪೇಟೆ: ಜೈನಧರ್ಮದಲ್ಲಿ ತೀರ್ಥಂಕರರುವೈಜ್ಞಾನಿಕವಾಗಿರುವ ಶಾಶ್ವತವಾದ ಬೋಧನೆಯನ್ನುಮಾಡಿದ್ದಾರೆ. ಅದರಂತೆ ಸಮಾಜದ ಜನರಲ್ಲಿಧರ್ಮಪಾಲನೆಯಾದರೆ ಎಂದಿಗೂ ಯುದ್ಧ,ಕ್ಷೊàಭೆ, ದುರ್ಭಿಕ್ಷೆಗಳುಘಟಿಸುವುದಿಲ್ಲ ಎಂದುಹೊಂಬುಜ ಜೈನಮಠದಸ್ವಸ್ತಿಶ್ರೀ ಡಾ| ದೇವೇಂದ್ರ ಕೀರ್ತಿಭಟ್ಟಾರಕ ಪಟ್ಟಾಚಾರ್ಯವರ್ಯಮಹಾಸ್ವಾಮಿಗಳು ತಿಳಿಸಿದರು.

Advertisement

ಹೊಂಬುಜದಲ್ಲಿ ಜರುಗುತ್ತಿರುವ ಭಗವಾನ್‌ಶ್ರೀ ಪಾರ್ಶ್ವನಾಥಸ್ವಾಮಿ ಮತ್ತು ಮಾತೆ ಯಕ್ಷಿ ಶ್ರೀಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವದನಿಮಿತ್ತ ಆಯೋಜಿಸಲಾಗಿದ್ದ ಸಿದ್ಧಾಂತ ಕೀರ್ತಿಪ್ರಶಸ್ತಿ ಪ್ರದಾನ ಹಾಗೂ ಧಾರ್ಮಿಕ ಸಭೆಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಕಳೆದಎರಡು ವರ್ಷಗಳಲ್ಲಿ ಬಾಧಿಸಿದ ಕೊರೊನಾಸೋಂಕಿನಿಂದ ಮನುಕುಲ ಬಂಧನದ ಪರಿಸ್ಥಿತಿ¿åನ್ನುಅನುಭವಿಸಿತು. ಆ ಸಂದರ್ಭದಲ್ಲಿ ಜನರು ತಮ್ಮಆರೋಗ್ಯ ರಕ್ಷಣೆಗಾಗಿ ಶುಚಿಯಾಗಿರುವುದು,ಅನಗತ್ಯ ತಿರುಗಾಟ ಮಾಡದಿರುವುದು, ದೇಹಕ್ಕೆಅಗತ್ಯವಾದ ಪೊÅàಟೀನ್‌ಯುಕ್ತ ಯೋಗ್ಯ ಆಹಾರಭಕ್ಷಣೆ, ಶುದ್ಧವಾದ ಗಾಳಿ, ನೀರು ಸೇವನೆಯನ್ನುಪಾಲಿಸಿದ್ದಾರೆ.

ಇವೆಲ್ಲವೂ ಮನುಷ್ಯನ ಆರೋಗ್ಯಯುತ ಜೀವನಕ್ಕೆ ಅಗತ್ಯವಾಗಿದೆ ಎಂದರು.ಸಿದ್ಧಾಂತ ಕೀರ್ತಿ ಪ್ರಶಸ್ತಿ ಪುರಸ್ಕೃತರಾದ ಪ್ರೊ|ಜೀವಂಧರ್‌ ಕುಮಾರ್‌ ಹೋತಪೇಟಿ ಅವರುಮಾತನಾಡಿ, ಅರಹದ್ದರಸರ ಕಾಲದಿಂದಲೂಶ್ರೀಮಠವು ಅನೇಕ ವಿದ್ವಾಂಸರಿಗೆ ಸಿದ್ಧಾಂತ ಕೀರ್ತಿಪ್ರಶಸ್ತಿ ನೀಡಿ ಗೌರವಿಸಿದೆ.

ಅಂತೆಯೇ ಈ ಪ್ರಶಸ್ತಿಯುನನಗೆ ಲಭಿಸಿರುವುದು ಸಂತೋಷವನ್ನುಂಟುಮಾಡಿದೆ. ಸಿದ್ಧಾಂತ ಕೀರ್ತಿ ಪ್ರಶಸ್ತಿಯ ಜೊತೆಗೆನೀಡಲಾದ ಮೊತ್ತವನ್ನು ಶ್ರೀಮಠದ ಸಿದ್ಧಾಂತಕೀರ್ತಿ ಗ್ರಂಥಮಾಲೆಗೆ ಅರ್ಪಿಸುತ್ತೇನೆಂದು ಇದೇಸಂದರ್ಭದಲ್ಲಿ ಘೋಷಿಸಿದರು. ಹೊಂಬುಜಮಠದಲ್ಲಿ ಪ್ರಸ್ತುತ ಸಾಲಿನಿಂದ ಜೈನಧರ್ಮದಲ್ಲಿನಿರಂತರವಾಗಿ ಸೇವೆ ಸಲ್ಲಿಸು ತ್ತಿರುವ ಗಣ್ಯರನ್ನುಪುರಸ್ಕರಿಸುವ ಉದ್ದೇಶದಿಂದ ‘ಧರ್ಮಭೂಷಣ’ಪ್ರಶಸ್ತಿ ಪದಾನ ಮಾಡುವ ಉದ್ದೇಶ ಹೊಂದಲಾಗಿದ್ದು,ಪ್ರಥಮ ವರ್ಷದಲ್ಲಿ ಅಸ್ಸಾಂನ ತಿನ್‌ಸುಖೀಯಾದಉದ್ಯಮಿ ಪವನ್‌ ಕುಮಾರ್‌ ರಾರಾ ಅವರಿಗೆ ನೀಡಿಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಇಂಪಾಲ ವಿಜಯ್‌ಪಾಟ್ನಿ,ಮನೋಜ್‌ಕುಮಾರ ಪಾಟ್ನಿ, ಗೌಹಾಟಿ ರಾಜೇಂದ್ರಛಾವಡಿ, ತಿನ್‌ಸುಕಿಯಾ ಅಸ್ಸಾಂ ಪವನಕುಮಾರ್‌ರಾರಾ, ಬೆಂಗಳೂರು ದೀಪಕ್‌ ಜೈನ್‌, ಶಿವಮೊಗ್ಗ ಜೈನಸಮಾಜದ ಪ್ರಭಾಕರ ಗೋಗಿ, ನಿವೃತ್ತ ಶಿಕ್ಷಕ ಮಂಜಪ್ಪ,ಪೂರ್ಣಿಮಾ ಜೈನ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next