Advertisement

ಹೆಣ್ಣು -ಗಂಡು ವರ್ಗೀಕರಿಸುವ ಧೋರಣೆ ಬದಲಾಗಲಿ

05:12 PM Mar 09, 2022 | Adarsha |

ಶಿವಮೊಗ್ಗ: ಉತ್ತಮ ಶಿಕ್ಷಣ, ವಿಚಾರ, ಮಾಹಿತಿ ಮತ್ತುವಿವೇಕವನ್ನು ಪಡೆದ ಮಹಿಳೆಯೇ ಸಬಲಳು ಎಂದು ಸಹ್ಯಾದ್ರಿವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ವೀಣಾ.ಎಂ.ಕೆಹೇಳಿದರು.ಮಹಾನಗರಪಾಲಿಕೆ ವತಿಯಿಂದ ಮಂಗಳವಾರ ಕುವೆಂಪುರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟಿÅàಯಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಜನ್ಮತಃ ಮಗು ಹೆಣ್ಣು ಅಥವಾ ಗಂಡು ಎಂಬ ಧೋರಣೆಇರುವುದಿಲ್ಲ.

Advertisement

ಬದಲಾಗಿ ಮಗುವಿನ ಬೆಳವಣಿಗೆಯಲ್ಲಿಸಮಾಜ ಹೆಣ್ಣು, ಗಂಡು ಎಂದು ವರ್ಗೀಕರಿಸಿ ಬೆಳೆಸುತ್ತದೆ.ಸಮಾಜದ ಈ ಧೋರಣೆ ಬದಲಾಗಬೇಕು. ಪ್ರತಿಯೊಬ್ಬರಿಗೂತನ್ನದೇ ಆದ ಅಸ್ಮಿತೆ ಇರುತ್ತದೆ. ಹೆಣ್ಣು ತನ್ನ ಶಿಕ್ಷಣ, ಆಯ್ಕೆಗಳು,ಸ್ವಾತಂತ್ರÂ, ಮತ್ತು ತನ್ನ ತೀರ್ಮಾನಗಳಿಂದ ಅದನ್ನುಉಳಿಸಿಕೊಳ್ಳಬೇಕು. ಆಗ ಯಾರೂ ಕೂಡ ಹೆಣ್ಣನ್ನು ಕೀಳಾಗಿಕಾಣಲು ಸಾಧ್ಯವಿಲ್ಲ ಎಂದರು.

“ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಇದು 2022ರಅಂತಾರಾಷ್ಟಿÅàಯ ಮಹಿಳಾ ದಿನಾಚರಣೆ ಘೋಷವಾಕ್ಯ.ಹೀಗಾಹಿ ಲಿಂಗ ಅಸಮಾನತೆಯನ್ನು ಹೋಗಲಾಡಿಸುವನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ. ಹೆಣ್ಣು ಕಟ್ಟುಪಾಡುಗಳನ್ನುಲೆಕ್ಕಿಸದೇ ಶಿಕ್ಷಣ, ವಿವೇಕದಿಂದ ತನ್ನತನ ಬೆಳೆಸಿಕೊಳ್ಳಬೇಕಿದೆಎಂದರು.ಅಂತಾರಾಷ್ಟಿÅàಯ ಮಹಿಳಾ ದಿನಾಚರಣೆ ಅಂಗವಾಗಿಪಾಲಿಕೆಯು ಸಾಮಾಜಿಕ ಸೇವೆ, ಆರೋಗ್ಯ ಮತ್ತು ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಕೆಳದಿಚೆನ್ನಮ್ಮನ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದುಅತ್ಯಂತ ಸ್ತುತ್ಯಾರ್ಹ ಮತ್ತು ಅಭಿನಾಂದರ್ಹ ಕಾರ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next