ಶಿವಮೊಗ್ಗ: ಜಿಲ್ಲೆಯ ಕಾಂಗ್ರೆಸ್ ನಾಯಕರು ರೈತರಪರ ಹೋರಾಟ ಮರೆತ ಕಾರಣ ಅರಣ್ಯಇಲಾಖೆ ಶೋಷಣೆಗೆ ಇಳಿದಿದೆ ಎಂದುತೀ.ನಾ.ಶ್ರೀನಿವಾಸ್ ನಿಜವನ್ನೇ ಹೇಳಿದ್ದಾರೆ.
ಅವರಿಗೆ ಈಗ ಪಶ್ಚಾತ್ತಾಪವಾಗಿದೆ. ಹಾಗಾಗಿಅವರು ನಮ್ಮ ಮನೆ ಮುಂದೆ ಹೋರಾಟಮಾಡುವ ಬದಲು ಕಾಂಗ್ರೆಸ್ ನಾಯಕರಮನೆ ಮುಂಭಾಗದಲ್ಲಿ ಸಂತಾಪದಪಾದಯಾತ್ರೆ ಮಾಡಿಕೊಳ್ಳಲಿ ಎಂದು ಸಂಸದಬಿ.ವೈ. ರಾಘವೇಂದ್ರ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಎರಡು ವಾರದಿಂದ ಮಲೆನಾಡುಭಾಗದ ಸಮಸ್ಯೆಯಾದ ಬಗರ್ ಹುಕುಂ,ಅರಣ್ಯ ಹಕ್ಕು, ಮುಳುಗಡೆ ಸಂತ್ರಸ್ತರು ಈವಿಷಯದಲ್ಲಿ ಚರ್ಚೆಗಳು ಶುರುವಾಗಿದೆ.
ನಮ್ಮ ಪಕ್ಷದ ಮುಖಂಡರು, ನಾಯಕರನೇತೃತ್ವದಲ್ಲಿ ಸ್ಪಂದಿಸುವ ಕೆಲಸಗಳು ಕೂಡನಡೆದಿದೆ. ಕಾಂಗ್ರೆಸ್ ಮುಂಖಂಡರಾದತಿ.ನಾ. ಶ್ರೀನಿವಾಸ್ ಒಂದು ಹೋರಾಟಸಮಿತಿ ಮಾಡಿಕೊಂಡು 7ನೇ ತಾರೀಕುಶಿಕಾರಿಪುರದಲ್ಲಿ ಸಂಸದರ ಮನೆ ಮುತ್ತಿಗೆಹಾಕುವ ತಿರ್ಮಾನ ಕೈಗೊಂಡಿದ್ದಾರೆ ಎಂಬವಿಷಯ ಮಾಧ್ಯಮಗಳ ಮೂಲಕ ತಿಳಿದಿದೆಎಂದರು.
ಕೆಲವು ರೈತರು, ಪರಿಸರವಾದಿಗಳುಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಯಾವುದೇ ರೈತರನ್ನುಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಉಳಿದಅರ್ಜಿ ವಿಲೇವಾರಿ ಮಾಡಲು ಹೆಚ್ಚುಸಮಯ ನೀಡಬೇಕೆಂದು ಸಮಾಜಕಲ್ಯಾಣ ಸಚಿವರ ನೇತೃತ್ವದಲ್ಲಿ ಸರ್ಕಾರನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಸಂಸತ್‌ಸದಸ್ಯನಾಗಿ ಪಾರ್ಲಿಮೆಂಟ್ ನಲ್ಲಿ ಈವಿಷಯ ಮುಂದಿಟ್ಟು ಚರ್ಚೆ ಮಾಡಿ ಕರ್ತವ್ಯನಿರ್ವಹಿಸಿದ್ದೇನೆ. ಜಿಲ್ಲೆಯ ಸಚಿವರು,ಶಾಸಕರು ಕೇಂದ್ರ ಸರ್ಕಾರಕ್ಕೆ ಈ ವಿಷಯದತೀವ್ರತೆ ಅರ್ಥಮಾಡಿಸಿ ಕೇಂದ್ರ ಸಚಿವರಾದಅರ್ಜುನ್ ಮುಂಡ ಹಾಗೂ ಭೂಪೇಂದ್ರಯಾದವ್ ಅವರ ಗಮನಕ್ಕೆ ತರಲಾಗಿದೆಎಂದರು.