Advertisement

ಶಾಂತಿ ಮಂತ್ರ ಜಪಿಸಿದ ಧಾರ್ಮಿಕ ಮುಖಂಡರು

05:46 PM Mar 03, 2022 | Team Udayavani |

ಶಿವಮೊಗ್ಗ: ನಗರದ ಸರ್ಕಾರಿ ನೌಕರರಭವನದಲ್ಲಿ ಬುಧವಾರ ಶಾಂತಿಗಾಗಿ ನಾವುಸೌಹಾರ್ದ ಸಭೆ ನಡೆಯಿತು. ವಿವಿಧ ಧರ್ಮದಧಾರ್ಮಿಕ ಮುಖಂಡರು, ಜಿಲ್ಲಾ ಧಿಕಾರಿ,ಜಿಲ್ಲಾ ರಕ್ಷಣಾ ಧಿಕಾರಿ, ವಿವಿಧ ಸಂಘಟನೆಗಳಪ್ರಮುಖರು, ರೈತ ಮುಖಂಡರು ಸಭೆಯಲ್ಲಿಭಾಗವಹಿಸಿ ಶಾಂತಿಯ ಮಂತ್ರವನ್ನುಜಪಿಸಿದರು.

Advertisement

ಶಾಂತಿ ಸೌಹಾರ್ದತೆಯಧೊÂàತಕ ವಾದ ಕೇಸರಿ, ಬಿಳಿ ಮತ್ತುಹಸಿರು ಬಟ್ಟೆಗಳನ್ನು ಜೋಡಿಸುವ ಮೂಲಕಕಾರ್ಯಕ್ರಮ ಉದ್ಘಾಟಿಸಲಾಯಿತು.ಜಿಲ್ಲಾ ಧಿಕಾರಿ ಡಾ| ಆರ್‌. ಸೆಲ್ವಮಣಿಮಾತನಾಡಿ, ಭಾರತ ಸರ್ವ ಜನಾಂಗದಶಾಂತಿಯ ತೋಟವಾಗಿದೆ. ಕೆಲವರುಗಲಾಟೆ ಎಬ್ಬಿಸಿ ಗೊಂದಲ ಮೂಡಿಸುತ್ತಿದ್ದಾರೆ.ಇದು ತಪ್ಪು, ಜಿಲ್ಲಾಡಳಿತ ಈ ಬಗ್ಗೆ ಸದಾಎಚ್ಚರಿಕೆಯಿಂದ ಇರುತ್ತದೆ. ಮುಂದಿನದಿನಗಳಲ್ಲಿ ಈ ರೀತಿ ಘಟನೆಗಳುನಡೆಯಬಾರದು.

ನಾವೆಲ್ಲರೂ ಸಹೋದರಭಾವನೆಯಿಂದ ಇರಬೇಕು. ಭಾರತೀಯಸಂಸ್ಕೃತಿಯೇ ವಿಶೇಷವಾದುದು. ಆ ದಿಕ್ಕಿನತ್ತಕೆಲಸ ಮಾಡೋಣ, ಶಾಂತಿ ಕಾಪಾಡೋಣಎಂದರು.ಜಡೆ ಸಂಸ್ಥಾನದ ಡಾ| ಮಹಾಂತಸ್ವಾಮಿಮಾತನಾಡಿ, ಇಲ್ಲಿ ಎಲ್ಲ ಧರ್ಮಗಳುಒಟ್ಟಾಗಿ ಬಾಳುತ್ತಿವೆ. ಎಲ್ಲ ಧರ್ಮದಸಾರಗಳು ಮಾನವೀಯತೆಯೇ ಆಗಿದೆ.ಇಂತಹ ಭಾರತದಲ್ಲಿ ಆಗಾಗ ಶಾಂತಿಕದಡುವ ಘಟನೆಗಳು ನಡೆಯುತ್ತಿರುವುದುವಿಷಾದನೀಯ.

ಇಂತಹ ಸಂದರ್ಭದಲ್ಲಿಎಲ್ಲರೂ ಒಟ್ಟಾಗಿ ಶಾಂತಿ ಕಾಪಾಡಬೇಕಾದುದುಕರ್ತವ್ಯವಾಗಿದೆ. ಕೂಡಿ ಬಾಳಿದರೆ ಸುಖಎಂಬ ಮಂತ್ರವನ್ನು ನಾವು ತಿಳಿಯಬೇಕಾಗಿದೆ.ಆ ನಿಟ್ಟಿನತ್ತ ಹೆಜ್ಜೆ ಹಾಕೋಣ. ಎಲ್ಲಧರ್ಮದವನ್ನು ಸಮಾನವಾಗಿ ಕಾಣೋಣಎಂದರು. ಜಿಲ್ಲಾ ರಕ್ಷಣಾ ಧಿಕಾರಿ ಲಕ್ಷಿ¾àಪ್ರಸಾದ್‌ ಮಾತನಾಡಿ, ಪೊಲೀಸರೊಂದಿಗೆಸಾರ್ವಜನಿಕರು ಸಹಕಾರ ನೀಡಿದಾಗ ಮತ್ತುಸಮುದಾಯಗಳು ಸ್ಪಂದಿಸಿದಾಗ, ಇಂತಹಘಟನೆಗಳಾದಾಗ ಶಾಂತಿ ಕಾಪಾಡಲುಸಾಧ್ಯವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next