ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷಹತ್ಯೆ ನಂತರದ ಉದ್ವಿಗ್ನ ಪರಿಸ್ಥಿತಿ ಶಿವಮೊಗ್ಗ ನಗರವನ್ನುಸ್ಥಬ್ಧಗೊಳಿಸಿದೆ. ಗಾಂಧಿ ಬಜಾರ್ ವರ್ತಕರ ಪಾಲಿಗಂತೂಈ ಘಟನೆ ಗಾಯದ ಮೇಲೆ ಬರೆ ಎಳೆದಿದೆ. ವ್ಯಾಪಾರ,ವ್ಯವಹಾರ ಕುದುರುವ ಹೊತ್ತಿಗೆ ವಾರಗಟ್ಟಲೆ ಅಂಗಡಿಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಮ್ಮ ವಹಿವಾಟು ಪುನಃ ಹಳಿಗೆ ಬರಲು ಇನ್ನುಒಂದು ವರ್ಷ ಕಾಯಬೇಕಾದ ದುಸ್ಥಿತಿ ವ್ಯಾಪಾರಿಗಳಿಗೆಎದುರಾಗಿದೆ. ವಾರಗಟ್ಟಲೆ ಗಾಂಧಿ ಬಜಾರ್ ಬಂದ್‌ಆಗುವುದರಿಂದ ಜಿಲ್ಲೆಯ ವ್ಯಾಪಾರ- ವಹಿವಾಟಿನಮೇಲೂ ಪರಿಣಾಮ ಬೀರಲಿದೆ.ಶೇ.40ರಷ್ಟು ವಹಿವಾಟು: ಗಾಂಧಿ ಬಜಾರ್‌ನಲ್ಲಿವಿವಿಧ ವ್ಯಾಪಾರ, ವಹಿವಾಟು ನಡೆಸುವ 500ಕ್ಕೂ ಹೆಚ್ಚುಮಳಿಗೆಗಳಿವೆ.
ನಗರದ ಒಟ್ಟು ವಹಿವಾಟಿನ ಶೇ.40ರಷ್ಟುಭಾಗ ಇಲ್ಲಿಯೇ ನಡೆಯಲಿದೆ. ಲಕ್ಷಾಂತರ ಮಂದಿಗಾಂಧಿ ಬಜಾರ್‌ನ ವ್ಯಾಪಾರ, ವಹಿವಾಟಿನ ಮೇಲೆಅವಲಂಬಿತವಾಗಿದ್ದಾರೆ.ಎಲ್ಲಾ ಪ್ರಮುಖ ಹೋಲ್‌ಸೇಲ್ ವ್ಯಾಪಾರಿಗಳುಗಾಂಧಿ ಬಜಾರ್‌ನಲ್ಲಿದ್ದಾರೆ. ನಗರ ಮತ್ತು ಜಿಲ್ಲೆಯವಿವಿಧೆಡೆಯ ರಿಟೇಲ್ ವ್ಯಾಪಾರಿಗಳು ಇಲ್ಲಿ ಬಂದುವಸ್ತುಗಳನ್ನು ಖರೀದಿಸುತ್ತಾರೆ. ಗಾಂ ಧಿ ಬಜಾರ್ ಬಂದ್‌ಆಗುವುದರಿಂದ ಜಿಲ್ಲೆಯ ವಿವಿಧೆಡೆಯ ರಿಟೇಲ್‌ವ್ಯಾಪಾರಿಗಳು, ಗ್ರಾಹಕರಿಗೆ ಸಮಸ್ಯೆ ಉಂಟಾಗಲಿದೆ.
ಬೀದಿ ಬದಿ ವ್ಯಾಪಾರಿಗಳು: ಗಾಂಧಿ ಬಜಾರ್‌ನಲ್ಲಿನೂರಾರು ಬೀದಿ ವ್ಯಾಪಾರಿಗಳಿದ್ದಾರೆ. ರಸ್ತೆ ಪಕ್ಕದಲ್ಲಿಬುಟ್ಟಿ ಇಟ್ಟುಕೊಂಡು ವ್ಯಾಪಾರ ಮಾಡುವವರು,ತಳ್ಳುಗಾಡಿಯಲ್ಲಿ ಹಣ್ಣು, ತರಕಾರಿ ಸೇರಿದಂತೆ ಇತರೆವಸ್ತುಗಳ ಮಾರಾಟ ಮಾಡುವವರು ಇದ್ದಾರೆ. ಇವರಿಗೆಲ್ಲಆಯಾ ದಿನದ ದುಡಿಮೆಯಲ್ಲೇ ಜೀವನ ನಡೆಯುತ್ತದೆ.ಇನ್ನು, ನೂರಾರು ಕೂಲಿ ಕಾರ್ಮಿಕರು ಕೂಡ ಗಾಂಧಿಬಜಾರ್ ಮೇಲೆ ಅವಲಂಬಿತರಾಗಿದ್ದಾರೆ.