Advertisement

ಕೇಂದ್ರದಲ್ಲಿರೋದು ಕಪ್ಪುಚುಕ್ಕೆ ಇಲ್ಲದ ಸರಕಾರ

06:45 PM Aug 18, 2021 | Shreeraj Acharya |

ಶಿವಮೊಗ್ಗ: ಮೋದಿ ಸರ್ಕಾರದ 7 ವರ್ಷದ ಅವ  ಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು. ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ತಾಂತ್ರಿಕತೆಯಲ್ಲಿ ದೇಶ ಸ್ವಾವಲಂಬಿಯಾಗಿದೆ. ಕೃಷಿ ಉತ್ಪಾದನೆಯಲ್ಲಿ ದೇಶ ವಿಶ್ವದಲ್ಲೇ 5 ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಸರ್ಕಾರದ ಯಾವುದೇ ಯೋಜನೆಯ 100 ರೂ.ಗಳಲ್ಲಿ ಕೇವಲ 15 ರೂ. ಮಾತ್ರ ಬಡವರಿಗೆ ಸಿಗುತ್ತಿದೆ ಎಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರುಹೇಳಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದನ್ನು ಬದಲಾಯಿಸಿದೆ.

ಪ್ರಧಾನಿ ಮೋದಿಯವರು ಜನ್‌ ಧನ್‌ ಯೋಜನೆಯಡಿ ಎಲ್ಲರಿಗೂ ಬ್ಯಾಂಕ್‌ ಖಾತೆ ತೆರೆದು ಅವರ ಖಾತೆಗೆ ನೇರವಾಗಿ ಯೋಜನೆಗಳ ಹಣವನ್ನು ವರ್ಗಾಯಿಸಿರುವುದರಿಂದ ಶೇ.100 ರಷ್ಟು ಯೋಜನೆಯ ಲಾಭ ಫಲಾನುಭವಿಗಳಿಗೆ ತಲುಪುತ್ತಿದೆ ಎಂದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 7 ವರ್ಷದ ಯೋಜನೆಗಳು ಮತ್ತು ಹಿಂದಿನ ಸರ್ಕಾರದ 60 ವರ್ಷದ ಯೋಜನೆಗಳ ತುಲನೆ ಮಾಡಿ ಅಭಿವೃದ್ಧಿಯ ವೇಗ ಗಮನಿಸಿದರೆ ಮೋದಿ ಸರ್ಕಾರದ ಸಾಧನೆ ಅರಿವಾಗುತ್ತದೆ ಎಂದರು.

ಹೊಸ ಐಡಿಯಾಲಜಿ, ಯೋಜನೆಗಳ ಜಾರಿಗೆ ಬದ್ಧತೆ, ಸಮರ್ಪಣೆ, ಸಾರ್ವಜನಿಕ ಸೇವೆ, ಸಾರ್ವಜನಿಕ ಸಂಪರ್ಕ, ಕೌಶಾಲ್ಯಾಭಿವೃದ್ಧಿ, ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ, ಆತ್ಮನಿರ್ಭರ್‌ ಯೋಜನೆಯಡಿ ಸ್ವಾವಲಂಬನೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಜನಾಶೀರ್ವಾದ ಪಡೆಯುವ ಉದ್ದೇಶದಿಂದ ಪ್ರಧಾನಿಯವರು ಎಲ್ಲ ಸಚಿವರನ್ನು ತಾವು ಆಯ್ಕೆಯಾದ ಕ್ಷೇತ್ರಗಳಿಗೆ ಕಳುಹಿಸುತ್ತಿದ್ದಾರೆ ಎಂದರು.

Advertisement

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಾಮಕಾವಸ್ತೆಗೆ ಮಂತ್ರಿಯಾಗಬಾರದು. ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎನ್ನುವ ದೃಷ್ಟಿಯಿಂದ ಪ್ರಧಾನಿಯವರು ಈ ಜನಾಶೀರ್ವಾದ ಯಾತ್ರೆಗೆ ಸೂಚನೆ ನೀಡಿದ್ದಾರೆ. ತಳಮಟ್ಟದಲ್ಲಿ ದೇಶದ ಜನರ ಅನಿಸಿಕೆ ಮತ್ತು ಅಭಿಪ್ರಾಯ ತಿಳಿಯಲು ಕೇಂದ್ರ ಸರ್ಕಾರ ಈ ವಿನೂತನ ಕಾರ್ಯಕ್ರಮ ಆರಂಭಿಸಿದೆ. ಮಲೆನಾಡಿನ ಹಳ್ಳಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದ್ದು, ಇದನ್ನು ಸರಿಪಡಿಸಲು ಕೇಂದ್ರ ಸಚಿವರು ಗಮನಹರಿಸಬೇಕು ಎಂದರು.

ಸಚಿವ ಕೆ.ಎಸ್‌. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಶಾಸಕರಾದ ಆಯನೂರು ಮಂಜುನಾಥ್‌, ಕುಮಾರ್‌ ಬಂಗಾರಪ್ಪ, ಎಸ್‌. ರುದ್ರೇಗೌಡ, ಕೆ.ಬಿ. ಅಶೋಕ್‌ ನಾಯ್ಕ ಭಾರತಿ ಶೆಟ್ಟಿ, ಸಂಜೀವ ಮಠಂದೂರು, ಮಾಜಿ ಶಾಸಕರಾದ ಎಂ.ಬಿ. ಭಾನುಪ್ರಕಾಶ್‌, ಆರ್‌.ಕೆ. ಸಿದ್ಧರಾಮಣ್ಣ, ಕೆ.ಜಿ. ಕುಮಾರಸ್ವಾಮಿ, ಪ್ರಮುಖರಾದ ಡಿ.ಎಸ್‌. ಅರುಣ್‌, ಜ್ಯೋತಿ ಪ್ರಕಾಶ್‌, ಎಸ್‌. ದತ್ತಾತ್ರಿ, ಪವಿತ್ರಾ ರಾಮಯ್ಯ, ಮೇಯರ್‌ ಸುನಿತಾ ಅಣ್ಣಪ್ಪ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next