Advertisement

ಕಣವಿಯವರಿಂದ ಪರಿಪಕ್ವ ಸಾಹಿತ್ಯ ಕೃಷಿ

03:58 PM Feb 18, 2022 | Adarsha |

ಶಿವಮೊಗ್ಗ: ಉತ್ತರ ಕರ್ನಾಟಕದ ದೊಡ್ಡ ಸಾಹಿತ್ಯಪರಂಪರೆಯಲ್ಲಿ ಮೂಡಿಬಂದ ನಾಡೋಜ ಡಾ|ಚೆನ್ನವೀರ ಕಣವಿಯವರು ಪರಿಪಕ್ವವಾಗಿ ಸಾಹಿತ್ಯ ಕೃಷಿಮಾಡಿದವರು. ಧಾರವಾಡದ ಸಂಪದ್ಭರಿತ ಸಾಹಿತ್ಯವಾತಾವರಣ, ಅದರ ಒಡನಾಟದಲ್ಲಿ ಕನ್ನಡ ಸಾಹಿತ್ಯವನ್ನುಶ್ರೀಮಂತ ಗೊಳಿಸಿದವರು ಎಂದು ಪ್ರಾಧ್ಯಾಪಕಡಾ|ಮೇಟಿ ಮಲ್ಲಿಕಾರ್ಜುನ್‌ ಹೇಳಿದರು.

Advertisement

ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಕರ್ನಾಟಕಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕವೇದಿಕೆಯಿಂದ ನಿವೃತ್ತ ನೌಕರರ ಭವನದಲ್ಲಿ ಏರ್ಪಡಿಸಿದ್ದನಾಡೋಜ ಡಾ| ಚೆನ್ನವೀರ ಕಣವಿ ಅವರ ನುಡಿನಮನಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಣವಿಯವರು ಎಪ್ಪತ್ತು ವರ್ಷ ಕಾವ್ಯ ಕೃಷಿಯಲ್ಲಿಅಗಾಧ ಅನುಭವ ಪಡೆದಿದ್ದರು. ಬದುಕಿನಲ್ಲಿ ಕಂಡದ್ದನ್ನುಹೊಸದಾಗಿ ನೋಡುವ ದೃಷ್ಟಿಕೋನ, ಅದರೊಂದಿಗಿನಸೂಕ್ಷ್ಮ ಸಂವೇದನೆ, ಸಮಚಿತ್ತದಿಂದ ಕನ್ನಡ ಕಾವ್ಯಪರಂಪರೆಯನ್ನು ಸಾಗರದಂತೆ ವಿಸ್ತಾರಗೊಳಿಸಿದವರುಎಂದು ವಿವರಿಸಿದರು.ಸಾಹಿತಿಗಳು, ನಿವೃತ್ತ ಪ್ರಾಂಶುಪಾಲ ಡಾ|ಎಚ್‌.ಟಿ.ಕೃಷ್ಣಮೂರ್ತಿ ಮಾತನಾಡಿ, ಚೆನ್ನವೀರ ಕಣವಿ ಹಾಗೂಹಿರಿಯ ಸಾಹಿತ್ಯಗಣ್ಯರಾದ ಭಾರ್ಗವಿ ನಾರಾಯಣಇಬ್ಬರೂ ತುಂಬು ಜೀವನ ಸಾಗಿಸಿದವರು.

ಮೃದುಮಾತಿನ ಕಣವಿ ಅವರು ಹಕ್ಕೊತ್ತಾಯ ಮಾಡುವುದಕ್ಕೆಹಿಂಜರಿದವರಲ್ಲ. ಡಾ| ಕಲುºರ್ಗಿ ಹತ್ಯೆ ವಿರುದ್ಧದಹೋರಾಟ ಸೇರಿದಂತೆ ಜನಪರ ಚಳುವಳಿಯಲ್ಲಿಸಾಮಾಜಿಕ ಕಾಳಜಿಯಿಂದ ಭಾಗವಹಿಸುತ್ತಿದ್ದರು ಎಂದುವಿವರಿಸಿದರು.ಕರ್ನಾಟಕ ಸಂಘದ ನಿರ್ದೇಶಕರು, ಸಾಹಿತಿಗಳಾದಡಾ| ಕೆ.ಎನ್‌. ಗುರುದತ್ತ ಮಾತನಾಡಿ, ಕಾವ್ಯದಲ್ಲಿವ್ಯಕ್ತಿ ಚಿತ್ರವನ್ನು ಚಿತ್ರಿಸುವಾಗ ಹದಿನಾಲ್ಕು ಸಾಲುಗಳಲ್ಲಿಚಮತ್ಕಾರ ಸೃಷ್ಟಿಸುವುದು ಅವರ ಸಾಮರ್ಥ್ಯಕ್ಕೆ ಹಿಡಿದಕನ್ನಡಿ ಎಂದರು. ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿಮಾತನಾಡಿ, ಕಣವಿ ಅವರು ಸೌಜನ್ಯದ ಕವಿ ಎಂದುಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next