Advertisement

ಬಿಇಒ ಕಚೇರಿ ಎದುರು ಪ್ರತಿಭಟನೆ

03:41 PM Feb 18, 2022 | Team Udayavani |

ಭದ್ರಾವತಿ: ಹಳೆ ನಗರದ ಸಂಚಿಹೊನ್ನಮ್ಮ ಪಪೂಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ಬಹುತೇಕವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ತರಗತಿಗೆಹಾಜರಾದರು. ಆದರೆ ಕೆಲವರು ಹಿಜಾಬ್‌ಧರಿಸಿಕೊಂಡೆ ತರಗತಿಗೆ ಪ್ರವೇಶ ನೀಡಬೇಕೆಂದುಹಠಕ್ಕೆ ಬಿದ್ದರಾದರು ಶಾಲಾ ಆಡಳಿತ ಅವರನ್ನುಒಳಗೆ ಬಿಡದ ಕಾರಣ ಆ ವಿದ್ಯಾರ್ಥಿನಿಯರುಬಿಇಒ ಕಚೇರಿ ಆವರಣದಲ್ಲಿ ಪ್ರತಿಭಟನೆಗಿಳಿದರು.

Advertisement

ನಗರಸಭಾ ಮಾಜಿ ಸದಸ್ಯ ಮುರ್ತುಝಾಖಾನ್‌ಹಾಗೂ ಕೆಲವು ಮುಖಂಡರು ಬಂದುಪ್ರತಿಭಟನಾ ನಿರತ ವಿದ್ಯಾರ್ಥಿನಿಯರಿಗೆ ತಿಳಿಹೇಳಿನ್ಯಾಯಾಲಯದ ಮಧ್ಯಂತರ ಆದೇಶ ಪಾಲಿಸಬೇಕುಎಂದು ತಿಳಿ ಹೇಳಿದರು.

ನಂತರ ಕೆಲವರು ಹಿಜಾಬ್‌ತೆಗೆದು ಶಾಲೆಯ ಹಾದಿ ಹಿಡಿದರೆ, ಮತ್ತೆ ಕೆಲವರುಮನೆಗೆ ತೆರಳಿದರು.ಕ್ಷೇತ್ರಶಿಕ್ಷಣಾ ಧಿಕಾರಿ ಸೋಮಶೇಖರ್‌ಮಾತನಾಡಿ, ಹಿಜಾಬ್‌ ವಿವಾದ ಆರಂಭಗೊಂಡನಂತರ ತಾಲುಕು ಆಡಳಿತ, ಶಾಲಾಆಡಳಿತ ಶಿಕ್ಷಣಇಲಾಖೆ ಸಂಯುಕ್ತವಾಗಿ ವಿದ್ಯಾರ್ಥಿನಿಯರಮನವೊಲಿಸಲು ಮಾಡಿದ ಪ್ರಯತ್ನದ ಫಲವಾಗಿಈಗ ಬಹುತೇಕ ವಿದ್ಯಾರ್ಥಿನಿಯರು ಹಿಜಾಬ್‌ತೆಗೆದು ತರಗತಿಗೆ ಹಾಜರಾಗುತ್ತಿದ್ದಾರೆ. ಆರಂಭದದಿನಕ್ಕಿಂತ ಈಗ ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next