ಶಿವಮೊಗ್ಗ: ಹಿಜಾಬ್ ವಿವಾದ ಬುಧವಾರಕೂಡ ಮುಂದುವರಿದಿದೆ. ಹಿಜಾಬ್‌ಧರಿಸಲು ಅವಕಾಶ ನೀಡುವಂತೆಒತ್ತಾಯಿಸಿ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ.
ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಬೆಳಗ್ಗೆಕಾಲೇಜು ಆರಂಭವಾಗುತ್ತಿದ್ದಂತೆಹಿಜಾಬ್ ಧರಿಸಿ ಅನೇಕ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದರು.ಆದರೆ ಆಡಳಿತ ಮಂಡಳಿ ಕೋರ್ಟ್‌ಆದೇಶದಂತೆ ಹಿಜಾಬ್ ತೆಗೆದು ತರಗತಿಯಲ್ಲಿ ಕೂರುವಂತೆ ಸೂಚಿಸಿತು. ಆದರೆಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರು ನಿರಾಕರಿಸಿದರು.
ಹಿಬಾಬ್ ನಮ್ಮಜನ್ಮಸಿದ್ಧ ಹಕ್ಕು. ಸಾಂವಿಧಾನಿಕ ಹಕ್ಕಾಗಿದ್ದು,ಹೈಕೋರ್ಟ್ ಆದೇಶ ಏನೇ ಇರಲಿ.ನಮಗೆ ಹಿಜಾಬ್ ಬೇಕು, ಶಿಕ್ಷಣವೂ ಬೇಕುಎಂದು ಪಟ್ಟು ಹಿಡಿದರು. ಕೋರ್ಟ್‌ಆದೇಶ ಇನ್ನೂ ಬಂದಿಲ್ಲ. ಹಾಗಾಗಿ ನಾವುಹಿಜಾಬ್ ಧರಿಸಿಯೇ ತರಗತಿಯೊಳಗೆಕೂರುವುದಕ್ಕೆ ಬಿಡಬೇಕು. ಇದೆಲ್ಲತಾರತಮ್ಯ ಯಾಕೆ ಎಂದು ಕಾಲೇಜುಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.
ವಿದ್ಯಾರ್ಥಿನಿ ಯರೊಂದಿಗೆಕಾಲೇಜಿಗೆ ಬಂದಿದ್ದ ಪೋಷಕರುಕೂಡ ಪ್ರವೇಶ ನಿರಾಕರಿಸಿದ ಕಾಲೇಜುಆಡಳಿತ ಮಂಡಳಿ ವಿರುದ್ಧ ಆಕ್ರೋಶಹೊರ ಹಾಕಿದರು. ಕಾಲೇಜು ಪ್ರವೇಶದಸಂದರ್ಭದಲ್ಲಿ ಅದು, ಇದು ಅಂತೆಲ್ಲಲಕ್ಷ ಗಟ್ಟಲೆ ಶುಲ್ಕ ತೆಗೆದುಕೊಳ್ಳುತ್ತೀರಿ.ಈಗ ಅದು ಬೇಡ, ಇದು ಬೇಡ ಎಂದುವಿದ್ಯಾರ್ಥಿಗಳ ನಡುವೆ ನೀವೇ ತಾರತಮ್ಯಸೃಷ್ಟಿ ಮಾಡುತ್ತಿದ್ದೀರಿ. ನೀವು ಸರಿಯಾದಕ್ರಮ ತೆಗೆದುಕೊಂಡರೆ ಇದೆಲ್ಲ ಆಗುತ್ತಾಎಂದು ಕಿಡಿಕಾರಿದರು.
ಇಷ್ಟಾಗಿಯೂಪ್ರವೇಶ ನೀಡದ ಹಿನ್ನೆಲೆಯಲ್ಲಿ ಡಿವಿಎಸ್‌ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದಹಲವು ವಿದ್ಯಾರ್ಥಿನಿಯರು ವಾಪಸ್‌ಮನೆಗೆ ತೆರಳಿದರು. ಡಿವಿಎಸ್ ಕಾಲೇಜುಮಾದರಿಯಲ್ಲೇ ನಗರದ ಎಟಿಎಸ್ ಸಿಸಿಕಾಲೇಜಿನಲ್ಲೂ ಬೆಳಗ್ಗೆ ಹಿಜಾಬ್ ಧರಿಸಿಕಾಲೇಜಿಗೆ ಬಂದ ಸುಮಾರು 20 ಮುಸ್ಲಿಂಸಮುದಾಯ ವಿದ್ಯಾರ್ಥಿನಿಯರನ್ನುಒಳಗೆ ಬಿಟ್ಟುಕೊಳ್ಳಲಾಯಿತು. ಆದರೆಕಾಲೇಜಿನ ತರಗತಿ ಒಳಗೆ ಪ್ರವೇಶಿಸುವಾಗಹಿಜಾಬ್ ತೆಗೆಯುವಂತೆ ಕಾಲೇಜಿನಸಿಬ್ಬಂದಿ ವಿದ್ಯಾರ್ಥಿಗಳಿಗೆ ತಿಳಿಸಿದರು.ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಮನವೊಲಿಸಲು ಪ್ರಯತ್ನಿಸಿದರೂಪ್ರಯೋಜನವಾಗಲಿಲ್ಲ.
ತರಗತಿಗಳಿಂದಹೊರ ನಡೆದರು. ಪೊಲೀಸರು ಸೆಕ್ಷನ್144 ಜಾರಿ ಯಲ್ಲಿರುವುದರಿಂದ ಗುಂಪುಗೂಡಬೇಡಿ. ಕಾಲೇಜಿಗೆ ಹೋಗಿ ಇಲ್ಲವೇಮನೆಗೆ ತೆರಳಿ ಎಂದು ತಿಳಿಸಿದರು.ಮುನ್ನೆಚ್ಚರಿಕೆ ಕ್ರಮವಾಗಿ ಬಾಪೂಜಿನಗರದ ಸರ್ಕಾರಿ ಪದವಿ ಕಾಲೇಜುಮತ್ತು ಸೈನ್ಸ್ ಮೈದಾನದಲ್ಲಿರುವ ಸರ್ಕಾರಿಪಪೂ ಕಾಲೇಜಿಗೆ ರಜೆ ಘೋಷಿಸಲಾಗಿತ್ತು.ಕಾಲೇಜಿನೊಳಗೆ ಮಾಧ್ಯಮದವರಿಗೆಪ್ರವೇಶ ನಿರಾಕರಿಸಲಾಗಿತ್ತು.ಬಿಗಿ ಪೊಲೀಸ್ ಬಂದೋಬಸ್ತ್ಏರ್ಪಡಿಸಲಾಗಿತ್ತು.