Advertisement

ಕೇಸರಿ ಧ್ವಜ ಹಾರಾಟ ಹೇಳಿಕೆ: ಕ್ರಮಕ್ಕೆ ಆಗ್ರಹ

08:04 PM Feb 13, 2022 | Adarsha |

ಶಿವಮೊಗ್ಗ: ಕೆಂಪು ಕೋಟೆಯ ಮೇಲೆ ಕೇಸರಿಧ್ವಜ ಹಾರಿಸುವುದಾಗಿ ವಿವಾದಾತ್ಮಕ ಹೇಳಿಕೆನೀಡಿ ರಾಷ್ಟÅಧ್ವಜಕ್ಕೆ ಅವಮಾನವೆಸಗಿ ಕೋಮುಗಲಭೆಗೆ ಪ್ರಚೋದನೆ ನೀಡಿರುವ ಸಚಿವಕೆ.ಎಸ್‌. ಈಶ್ವರಪ್ಪ ಅವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದಜಿಲ್ಲಾ ಪೊಲೀಸ್‌ ಅ ಧೀಕ್ಷಕರಿಗೆ ಮನವಿಸಲ್ಲಿಸಲಾಗಿದೆ.

Advertisement

ರಾಜ್ಯದಲ್ಲಿ ಹಿಜಾಬ್‌ ವಿವಾದನಡೆಯುತ್ತಿರುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯೆನೀಡುವಾಗ ಸಚಿವ ಕೆ.ಎಸ್‌. ಈಶ್ವರಪ್ಪಮುಂದೆ ಕೆಂಪು ಕೋಟೆ ಮೇಲೆ ಕೇಸರಿ ಧ್ವಜಹಾರಿಸುವುದಾಗಿ ಹೇಳಿಕೆ ನೀಡಿರುವುದುಖಂಡನೀಯವಾಗಿದೆ. ಅವರು ನೀಡಿದಇಂತಹ ಹೇಳಿಕೆ ರಾಷ್ಟÅಧ್ವಜಕ್ಕೆ ಅವಮಾನಎಸಗಿದಂತಾಗಿದೆ ಎಂದು ದೂರಿದರು.

ಪಿಂಗಳಿ ವೆಂಕಯ್ಯನವರು 30 ದೇಶಗಳಧ್ವಜಗಳ ಬಗ್ಗೆ 5 ವರ್ಷಗಳ ಕಾಲ ಅಧ್ಯಯನನಡೆಸಿ ತ್ರಿವರ್ಣ ಧ್ವಜವನ್ನು ದೇಶಕ್ಕೆಕೊಡುಗೆಯಾಗಿ ನೀಡಿದ್ದಾರೆ. ರಾಷ್ಟÅಧ್ವಜದಲ್ಲಿಕೇಸರಿ ಬಣ್ಣವು ಧೈರ್ಯ, ಶೌರ್ಯ, ಸಾಹಸ,ತ್ಯಾಗದ ಪ್ರತೀಕವಾಗಿದ್ದು, ಬಿಳಿ ಬಣ್ಣ ಸತ್ಯ,ಶಾಂತಿಯ ಸಂಕೇತವಾಗಿದೆ. ಹಸಿರು ಬಣ್ಣದೇಶದ ಸಮೃದ್ಧಿ, ಸಂತೃಪ್ತಿಯ ಪ್ರತೀಕವಾಗಿದ್ದು,ಧರ್ಮದ ಪ್ರತೀಕವಾದ ಅಶೋಕ ಚಕ್ರವನ್ನೂರಾಷ್ಟ್ರಧ್ವಜ ಒಳಗೊಂಡಿದೆ.

ದೇಶವುಸಂಪೂರ್ಣವಾಗಿ ತ್ರಿವರ್ಣ ಧ್ವಜವನ್ನು ಭಾರತದರಾಷ್ಟÅಧ್ವಜ ಎಂದು ನಿರ್ಧರಿಸಿದ್ದು, ಧ್ವಜ ಸಂಹಿತೆಪ್ರಕಾರ, ರಾಷ್ಟÅದಲ್ಲಿ ರಾಷ್ಟÅಧ್ವಜಕ್ಕಿಂತಲೂಎತ್ತರದಲ್ಲಿ ಯಾವುದೇ ಧ್ವಜವನ್ನುಹಾರಿಸುವಂತಿಲ್ಲ ಎಂದು ತಿಳಿಸಿದರು.ಹಿಜಾಬ್‌ ವಿವಾದವನ್ನು ತಿಳಿಗೊಳಿಸಿ ಶಾಂತಿ,ಸುವ್ಯವಸ್ಥೆ ಕಾಪಾಡಬೇಕಾದ ಜವಾಬ್ದಾರಿಹೊಂದಿರುವ ಕೆ.ಎಸ್‌. ಈಶ್ವರಪ್ಪ ಅವರುಮಾತಿನ ಭರದಲ್ಲಿ ರಾಷ್ಟÅಧ್ವಜ ಹಾರಾಡುವಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜಕ್ಕೆ ಬದಲಾಗಿಮುಂದಿನ ದಿನದಲ್ಲಿ ಕೇಸರಿ ಧ್ವಜ ಹಾರಿಸುವಹೇಳಿಕೆ ನೀಡಿ ಕೋಮು ಪ್ರಚೋದನೆನೀಡಿದ್ದಾರೆ.

ದೇಶದಲ್ಲಿ ಸಾಮಾನ್ಯರಿಗೊಂದು,ಸಚಿವರಿಗೊಂದು ಕಾನೂನು ಇಲ್ಲ. ಎಲ್ಲರಿಗೂಏಕರೂಪದ ಕಾನೂನು ಜಾರಿಯಲ್ಲಿದೆ.ರಾಷ್ಟÅಧ್ವಜಕ್ಕೆ ಅವಮಾನ ಮಾಡಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿಒತ್ತಾಯಿಸಲಾಯಿತು. ವೇದಿಕೆ ರಾಜ್ಯಾಧ್ಯಕ್ಷಗೋ. ರಮೇಶ್‌ ಗೌಡ, ಎಸ್‌.ವಿ. ರಾಜಮ್ಮ,ನಯನಾ, ಆಸೀಫ್‌, ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next