Advertisement

ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರಿ ಕೊರೊನ ಸೋಂಕು ಪತ್ತೆ

11:59 AM Dec 30, 2020 | Team Udayavani |

ಶಿವಮೊಗ್ಗ : ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದಿರುವ ನಾಲ್ವರಲ್ಲಿ ರೂಪಾಂತರಿ ಕೊರೊನ ಸೋಂಕು ಪತ್ತೆಯಾಗಿದೆ.

Advertisement

ಕಳೆದ ವಾರ ಬ್ರಿಟನ್ ನಿಂದ 23 ಮಂದಿ ಶಿವಮೊಗ್ಗಕ್ಕೆ ಬಂದಿದ್ದರು ಈ ವೇಳೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು, ಬಳಿಕ ಇವರಲ್ಲಿ ರೂಪಾಂತರಿ ಕರೋನಾ ಸೋಂಕು ಇದೆಯೇ ಎಂದು ಎಲ್ಲರ ಗಂಟಲ ದ್ರವ ಮಾದರಿ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಆದರೆ ಇಂದು ಬಂದ ವರದಿಯಲ್ಲಿ ಶಿವಮೊಗ್ಗ ಮೂಲದ ಒಂದೇ‌ ಕುಟುಂಬದ ನಾಲ್ವರಲ್ಲಿ ರೂಪಾಂತರಿ ಕರೋನಾ ಸೋಂಕು ಪತ್ತೆಯಾಗಿದೆ.

ನಾಲ್ವರಿಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಹುಬ್ಬಳ್ಳಿ: ಮತ ಎಣಿಕೆ ಕೇಂದ್ರದಲ್ಲಿನ ಅವ್ಯವಸ್ಥೆಗೆ ಅಭ್ಯರ್ಥಿಗಳ ಆಕ್ರೋಶ

Advertisement
Advertisement

Udayavani is now on Telegram. Click here to join our channel and stay updated with the latest news.

Next