Advertisement

ಒಂದಾದ ಭದ್ರಾವತಿ ಹಾಲಿ- ಮಾಜಿ ಶಾಸಕರು

04:23 PM Apr 21, 2019 | Team Udayavani |

ಶಿವಮೊಗ್ಗ: ಭದ್ರಾವತಿಯ ಶಾಸಕ ಬಿ.ಕೆ.
ಸಂಗಮೇಶ್ವರ್‌ ಹಾಗೂ ಮಾಜಿ ಶಾಸಕ ಅಪ್ಪಾಜಿ
ಗೌಡರ ನಡುವಿನ ಅಸಮಾಧಾನವನ್ನು
ಉಪಶಮನಗೊಳಿಸಿರುವ ಟ್ರಬಲ್‌ ಶೂಟರ್‌
ಡಿ.ಕೆ. ಶಿವಕುಮಾರ್‌ ಇಬ್ಬರೂ ಒಟ್ಟಾಗಿದ್ದಾರೆ
ಎಂದು ಶುಕ್ರವಾರ ರಾತ್ರಿ ಇಲ್ಲಿನ ಖಾಸಗಿ
ಹೊಟೇಲ್‌ವೊಂದರಲ್ಲಿ ಕರೆಯಲಾಗಿದ್ದ
ತುರ್ತು ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

Advertisement

ಹಾವು ಮುಂಗುಸಿಯಂತಿದ್ದ ಭದ್ರಾವತಿ
ಶಾಸಕ, ಕಾಂಗ್ರೆಸ್‌ನ ಸಂಗಮೇಶ್ವರ್‌,
ಜೆಡಿಎಸ್‌ನ ಅಪ್ಪಾಜಿ ಗೌಡ ನಡುವ
ಸ್ನೇಹ ಕುದುರಿಸುವಲ್ಲಿ ಸಫಲರಾಗಿದ್ದಾರೆ.
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಕಾರಣಕ್ಕೆ
ಮಾಜಿ ಹಾಲಿ ಶಾಸಕರು ಒಟ್ಟಿಗೆ ಪ್ರಚಾರ
ನಡೆಸಲು ತೀರ್ಮಾನಿಸಿದ್ದಾರೆ. ಇನ್ನು ಮುಂದೆ
ಕ್ಷೇತ್ರದಲ್ಲಿ ಜಂಟಿ ಪ್ರಚಾರ ಮಾಡಲಿದ್ದಾರೆ.
ಕಾರ್ಯಕರ್ತರು, ನಾಯಕರ ನಡುವೆ
ಒಟ್ಟಿಗೆ ಸಾಗಲು ತೀರ್ಮಾನಿಸಿದ್ದಾರೆ ಎಂದು
ಡಿಕೆಶಿ ತಿಳಿಸಿದರು.

ಭದ್ರಾವತಿ ಹಾಗೂ ಗ್ರಾಮಾಂತರ ಪ್ರದೇಶದ ಹತ್ತು ಕಡೆ ಶನಿವಾರ ಜಂಟಿ ಪ್ರಚಾರ ಮಾಡಲಿದ್ದು, ಚುನಾವಣೆ ದೃಷ್ಟಿಕೋನದಿಂದ ಇದು ಉತ್ತಮ ಸಂಕೇತವಾಗಿದೆ. ಭದ್ರಾವತಿಯಿಂದ ಕನಿಷ್ಠ 1 ಲಕ್ಷ ಮತಗಳ ಲೀಡ್‌ ಸಿಗುವ ನಿರೀಕ್ಷೆ ಇದೆ. ಎರಡೂ
ಪಕ್ಷದ ಮಂತ್ರಿಗಳು, ಶಾಸಕರು ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿರುವ ಹಾಲಿ, ಮಾಜಿ ಶಾಸಕರಿಬ್ಬರೂ ಮೈತ್ರಿಕೂಟದವರೇ ಆಗಿರುವುದರಿಂದ ಗೆಲ್ಲಲು ಪ್ರಬಲ ಅವಕಾಶಗಳಿವೆ. ಇರುವ ಎರಡು ದಿನ ಬಿರುಸಿನ ಪ್ರಚಾರ ಮಾಡಲಾಗುವುದು. ಭದ್ರಾವತಿಯಲ್ಲಿ ಮೋದಿ ಹವಾ ಇಲ್ಲ ಎಂದು ಡಿಕೆಶಿ ಪುನರುತ್ಛಸಿದರು.

ಶಾಸಕ ಬಿ.ಕೆ. ಸಂಗಮೇಶ್ವರ್‌ ಮಾತನಾಡಿ,’ನನ್ನ ಹಾಗೂ ಅಪ್ಪಾಜಿ ಗೌಡರ ನಡುವೆ ಭಿನ್ನಾಭಿಪ್ರಾಯವಿತ್ತು. ಅದನ್ನು ಬದಿಗೊತ್ತಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ನೀಡುತ್ತೇವೆ. ಸಚಿವ ಡಿ.ಕೆ. ಶಿವಕುಮಾರ್‌ ಸಂಧಾನಕ್ಕೆ ನಾವು ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಿದ್ದೇವೆ. ಒಂದು ಒಪ್ಪಂದಕ್ಕೆ ಬಂದಿದ್ದೇವೆ. ನಾಳಿನ ಉಳಿವಿಗಾಗಿ ಮತ
ಯಾಚಿಸಲಿದ್ದೇವೆ. ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.

ಡಿಕೆಶಿ ಸಂಧಾನದಲ್ಲಿ ಅರ್ಥವಿದೆ. ಮತದಾನಕ್ಕೆ ಇನ್ನೂ 78 ಗಂಟೆ ಕಾಲಾವಕಾಶವಿದ್ದು, ಮಧು ಗೆಲುವು ದೇಶಕ್ಕೆ ಸುದ್ದಿಯಾಗುವಂತೆ ಕೆಲಸ ಮಾಡುತ್ತೇವೆ. ರಾಜ್ಯ ನಾಯಕರ ಅಪೇಕ್ಷೆಯಂತೆ
ಕಾರ್ಯಕರ್ತರು ವೈಮನಸ್ಸನ್ನು ದೂರವಿಟ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಅಪ್ಪಾಜಿಗೌಡ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next