ಶಿಕಾರಿಪುರ ತಾಲೂಕಿನ ಶಾಶ್ವತ ನೀರಾವರಿ ಅಭಿವೃದ್ಧಿ ವಿಚಾರದಲ್ಲಿ ಸಮಯ ಕೊಡುವುದಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.
Advertisement
ತಾಲೂಕು ಜೆಡಿಎಸ್ ಹಾಗೂ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಶಿಕಾರಿಪುರ ತಾಲೂಕು ಅಭಿವೃದ್ಧಿಪಡಿಸಿದ್ದು ಇವರು ಅಭಿವೃದ್ಧಿಯಾಗಲು. ಈಗ ಮತ್ತೆ ಮುಖ್ಯಮಂತ್ರಿಯಾಗಲು ಹಂಬಲಿಸುತ್ತಿರುವುದು ಮತ್ತೆ ಅವರ ಕುಟುಂಬ ಅಭಿವೃದ್ಧಿಯಾಗಲು. ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ತಾಲೂಕಿನ ನೀರಾವರಿ ವಿಚಾರವಾಗಿ ಡಿ.ಕೆ. ಶಿವಕುಮಾರ್ ಬಳಿ
ಮನವಿ ಮಾಡಿದ್ದೇನೆಂದು ಸುಳ್ಳು ಹೇಳುತ್ತಾರೆ.
Advertisement
ಯಡಿಯೂರಪ್ಪನವರು ಡಿ.ಕೆ. ಶಿವಕುಮಾರ ಮನೆಗೆ ತೆರಳಿದಾಗ ಡೈರಿಯಲ್ಲಿನ ಮಾಹಿತಿಯನ್ನು ಪ್ರಸ್ತಾಪ ಮಾಡಬೇಡಿ ಎಂದು ತಿಳಿಸಿದ್ದರು ಎಂದು ಆರೋಪಿಸಿದರು. ತಾಲೂಕಿನ ಜನತೆಗೆ ಕೇಂದ್ರ ಸರ್ಕಾರದ ಹಣ ಮಂಜೂರು ಮಾಡಿಸಿ ನೀರಾವರಿ ಮಾಡಿಸುವುದಾಗಿ ಸುಳ್ಳು ಹೇಳುವ ನೀವು ತಾಲೂಕಿನ ಜನತೆಯಲ್ಲಿಗೊಂದಲ ಮೂಡಿಸುತ್ತಿದ್ದೀರಿ. ಚುನಾವಣೆ ಮುಗಿದ ನಂತರ 6 ತಿಂಗಳ ಒಳಗೆ ಸಂಪೂರ್ಣ ನೀರಾವರಿ ಕಾಮಗಾರಿ ಮುಗಿಸಿ ಕೊಡುವುದಾಗಿ ಹೇಳಿದರು . ನಮ್ಮ ಸರ್ಕಾರದಿಂದ ಕೇವಲ ರೈತರಿಗಷ್ಟೇ ಅಲ್ಲದೆ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದೇವೆ. ಸಿದ್ದರಾಮಯ್ಯನವರ ಸರ್ಕಾರದ ಯೋಜನೆಗಳು ಹಾಗೂ ನಮ್ಮ ಮೈತ್ರಿ ಸರ್ಕಾರದ ಯೋಜನೆಗಳು ಉತ್ತಮವಾಗಿದ್ದು ಅದನ್ನು ರಾಜ್ಯದ ಜನತೆ ಸದುಪಯೋಗ ಪಡೆಯಬೇಕು ಎಂದರು. ಮಾಜಿ ಶಾಸಕರೊಬ್ಬರ ಹೇಳಿಕೆಗೆ ಪತ್ರಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಹೌದು ನಾವು ಮೋದಿಯವರ ತರಹ ಮುಖಕ್ಕೆ ವ್ಯಾಕ್ಸಿನ್, ಸೇಂಟ್, ಪೌಡರ್ ಮುಂತಾದವುಗಳನ್ನು
ಬಳಸುವುದಿಲ್ಲ. ನಾವು ಮುಟ್ಟಿ ಮಾತನಾಡುವ ಸಾರ್ವಜನಿಕರ ಕೈಗಳ ಬೇವರು ನಮಗೆ ಆಶೀರ್ವಾದವಿದ್ದಂತೆ. ಬೇರೆಯವರು
ಮುಟ್ಟಿದರೆ ಡೆಟಾಲ್‌ನಿಂದ ಕೈ ತೊಳೆಯುತ್ತಾರೆ ಎಂದು ಎದುರೇಟು ನೀಡಿದರು. ರಾಜ್ಯದಲ್ಲಿ ಮೇ 23ಕ್ಕೆ ಫಲಿತಾಂಶ 24 ಕ್ಕೆ ಯಡಿಯೂರಪ್ಪ ಸರ್ಕಾರ ರಚನೆಯೆಂದು ಯಾವ ಜೋತಿಷ್ಯಗಳ
ಬಳಿ ಸಮಯ ನಿಗದಿಪಡಿಸಿದ್ದಾರೆಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಉಚಿತ ಕರೆಂಟ್ ನೀಡಿದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವ ಪುತ್ರರಾದ ಮಧು ಬಂಗಾಪ್ಪನವರಿಗೆ ಈ ಬಾರಿ
ಆಶೀರ್ವದಿಸಿ ಎಂದು ಮನವಿ ಮಾಡಿದರು. ನಂತರ ಮಾತನಾಡಿದ ಅಭ್ಯರ್ಥಿ ಮಧು ಬಂಗಾರಪ್ಪ, ತಾಲೂಕಿನಲ್ಲಿ ಬಂಗಾರಪ್ಪ ಅಭಿಮಾನಿಗಳು ಇದ್ದು ಈ ಬಾರಿ ನನಗೆ ಆಶೀವಾದ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯವರ
ಸಹಿ ಸುಳ್ಳು ನಡೆಯುವುದಿಲ್ಲ. ಕಳೆದ ಬಾರಿ 3.50.000 ಅಂತರದಿಂದ ಕೇವಲ 52 ಸಾವಿರಕ್ಕೆ ತಂದ ಜಿಲ್ಲೆಯ ಜನ ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು. ನನ್ನನ್ನು ಇಂಪೋರ್ಟೆಡ್ ಎಂದು ಹೇಳುವ ರಾಘವೇಂದ್ರ ಅವರನ್ನು ತಾಲೂಕಿನ ಜನ ಎಕ್ಸ್‌ಪೋರ್ಟ್ ಮಾಡಿ ಎಂದು ಹೇಳಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಎಂ. ಮಂಜುನಾಥ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಸುಂದರೇಶ್, ಕಾಡಾ ಮಾಜಿ ಅಧ್ಯಕ್ಷ ಮಹಾದೇವಪ್ಪ, ಮಾಜಿ ಶಾಸಕರಾದ ಶಾಂತವೀರಪ್ಪ ಗೌಡ, ಮಹಾಲಿಂಗಪ್ಪ, ಮುಖಂಡರಾದ ಗೋಣಿ ಮಾಲತೇಶ್,
ಎಚ್. ಟಿ. ಬಳಿಗಾರ್, ಮಾರವಳ್ಳಿ ಉಮೇಶ್, ಉಳ್ಳಿ ದರ್ಶನ್ ಮತ್ತಿತರರು ಇದ್ದರು.