Advertisement

ಕೆಎಸ್‌ಯುಆರ್‌ಎಫ್‌ ಪಟ್ಟಿಯಲ್ಲಿ ಕುವೆಂಪು ವಿವಿಗೆ 3ನೇ ಸ್ಥಾನ

06:21 PM Sep 18, 2019 | Naveen |

ಶಿವಮೊಗ್ಗ: ಉನ್ನತ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಣೀಕರಣ (ಕೆಎಸ್‌ಯುಆರ್‌ಎಫ್‌)ದ 2019ರ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮೂರನೇ ಸ್ಥಾನ ಲಭಿಸಿದೆ.

Advertisement

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು ಕುವೆಂಪು ವಿವಿಯ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಅವರಿಗೆ ಪ್ರಮಾಣ ಪತ್ರ ನೀಡಿದರು.

ಹತ್ತು ವರ್ಷಕ್ಕಿಂತ ಹೆಚ್ಚಿನ ಕಾಲಾವಧಿ ಪೂರೈಸಿರುವ ವಿವಿಗಳ ಪಟ್ಟಿಯಲ್ಲಿ ಒಂದು ಸಾವಿರಕ್ಕೆ 718 ಅಂಕ ಪಡೆದಿರುವ ಕುವೆಂಪು ವಿವಿ 2019ನೇ ಸಾಲಿನಲ್ಲಿ ಮೂರನೇ ಸ್ಥಾನ ಗಳಿಸಿದೆ. ಮೊದಲೆರಡು ಸ್ಥಾನಗಳನ್ನು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಕೆಎಲ್ಇ ವಿವಿಗಳು ಪಡೆದಿವೆ. ಸರ್ಕಾರಿ ಅನುದಾನಿತ ವಿವಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯು ಮೊದಲ ಸ್ಥಾನ ಪಡೆದು ಸಾಧನೆ ಮಾಡಿದೆ.

ಕೆಎಸ್‌ಯುಆರ್‌ಎಫ್‌ ರ್‍ಯಾಂಕಿಂಗ್‌ ಅನ್ನು ಶಿಕ್ಷಣ ಸಂಸ್ಥೆಯ ಸಂಶೋಧನೆ, ಆವಿಷ್ಕಾರ, ಭೋಧನೆ, ಮೂಲ ಸೌಕರ್ಯ ಹಾಗೂ ಸಾಮಾಜಿಕ ಪರಿಣಾಮ ಹೀಗೆ ಐದು ಮಾನದಂಡಗಳನ್ನು ಪರಿಗಣಿಸಿ ತಯಾರಿಸಲಾಗುತ್ತದೆ. ಕುವೆಂಪು ವಿವಿಯು ಸಂಶೋಧನೆ ಮತ್ತು ಬೋಧನೆ ವಿಭಾಗಗಳಲ್ಲಿ ಐದಕ್ಕೆ ಐದು ಅಂಕ ಗಳಿಸಿದ್ದು ವಿವಿಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next