Advertisement

Shivamogga Incident: ರಾಗಿಗುಡ್ಡಕ್ಕೆ ಆತಂರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ ಭೇಟಿ

01:34 PM Oct 04, 2023 | Team Udayavani |

ಶಿವಮೊಗ್ಗ: ಶಿವಮೊಗ್ಗ ಹೊರವಲಯದ ರಾಗಿಗುಡ್ಡ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣದ ತನಿಖೆಗಾಗಿ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ ರಾಗಿಗುಡ್ಡಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Advertisement

ಅಕ್ಟೋಬರ್ 1 ರಂದು ನಗರದ ರಾಗಿಗುಡ್ಡ ಬಳಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ವೇಳೆ ಕಲ್ಲು ತೂರಾಟ ನಡೆದು ಹಲವರು ಗಾಯಗೊಂಡಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿ ಐಎಸ್ಡಿ ದಾವಣಗೆರೆ ವಿಭಾಗದ ಡಿವೈಎಸ್ಪಿ ನಾಗೇಶ್ ಐತಾಳ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ಅದರಂತೆ ಘಟನೆ ನಡೆದ ಪ್ರದೇಶಕ್ಕೆ ತಂಡ ಬಂದು ತನಿಖೆ ನಡೆಸುತ್ತಿದೆ, ಅಲ್ಲದೆ ಗಲಾಟೆಯಲ್ಲಿ ಯಾವುದಾದರೂ ಸಂಘಟನೆಯ ಕೈವಾಡ ಇದೆಯಾ ಎಂಬ ಕುರಿತು ತನಿಖೆ ನಡೆಸುತ್ತಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಜಖಂಗೊಂಡಿರುವ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಲ್ಲು ತೂರಾಟ ಪ್ರಕರಣದಲ್ಲಿ ನಿಷೇಧಿತ ಸಂಘಟನೆಗಳ ಕೈವಾಡದ ಕುರಿತು ಕೂಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: London:ಭಾರತೀಯ ರಾಯಭಾರ ಕಚೇರಿ ಹೊರಗೆ ತ್ರಿವರ್ಣ ಧ್ವಜಕ್ಕೆ ಖಲಿಸ್ತಾನಿ ಬೆಂಬಲಿಗರಿಂದ ಬೆಂಕಿ

Advertisement

Udayavani is now on Telegram. Click here to join our channel and stay updated with the latest news.

Next