Advertisement

Shivamogga: ಭಾರೀ ಗಾಳಿ-ಮಳೆ; ಹಲವೆಡೆ ಮರ ಬಿದ್ದು ಮನೆಗೆ ಹಾನಿ

03:03 PM Jul 26, 2024 | Kavyashree |

ಶಿವಮೊಗ್ಗ: ಮಲೆನಾಡಲ್ಲಿ ಗಾಳಿ, ಮಳೆ ಮುಂದುವರೆದಿದ್ದು, ಭಾರೀ ಗಾಳಿ-ಮಳೆಗೆ ಮರಗಳು ಧರೆಗುರುಳಿದ ಘಟನೆ ಶಿವಮೊಗ್ಗದ ಅಶೋಕನಗರದಲ್ಲಿ ನಡೆದಿದೆ.

Advertisement

ಬೃಹತ್ ಮರ ಹಾಗೂ ವಿದ್ಯುತ್ ಕಂಬ ನರ್ಸಿಂಗ್ ಕ್ವಾಟ್ರಸ್ ಮೇಲೆ ಬಿದ್ದಿದೆ.

ಗ್ರಾಮಾಂತರ ಪೊಲೀಸ್ ಠಾಣಾ ಹಿಂಭಾಗದಲ್ಲಿ ಮರಗಳು ಬಿದ್ದ ರಭಸಕ್ಕೆ ಮನೆ ಹಾನಿಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮೆಸ್ಕಾಂ ಸಿಬ್ಬಂದಿಯಿಂದ ಮರ ತೆರವು ಕಾರ್ಯ ನಡೆಯಿತು.

ಸೊರಬ: ತಾಲೂಕಿನಲ್ಲಿ ಸುರಿದ ಗಾಳಿ ಮಳೆಗೆ ಗುಡವಿ ಗ್ರಾಮದ ಸುನಿತಾ ಕೊಂ ಸುರೇಶ್ ಗೌಡರ ಮನೆ ಮೇಲೆ ಮರ ಬಿದ್ದಿ ಮನೆ ಸಂಪೂರ್ಣ ಜಖಂಗೊಂಡಿದ್ದು,  ಅದರೆ ಯಾವುದೇ ಜೀವ ಹಾನಿಯಾಗಿಲ್ಲ.

Advertisement

ಮಾವಲಿ ಗ್ರಾಮದ ಕೇಶವ ಎಂಬವರ ಮನೆಯ ಗೋಡೆ ತಡರಾತ್ರಿ ಸುಮಾರು 12.30 ಸಮಯಕ್ಕೆ ಬಿದ್ದಿದೆ ಹಾಗೂ ಚಂದ್ರಗುತ್ತಿ ಹೋಬಳಿ ಹೊಳೆ ಜೋಳದ ಗುಡ್ಡೆ ಗ್ರಾಮದ ಸರಸ್ವತಿ ಕೋಂ ರಾಜಪ್ಪ ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next