Advertisement

ಶಿಲಾಯುಗ ಕಾಲದ ಬೃಹತ್‌ ನಿಲಸುಗಲ್ಲುಪತ್ತೆ

01:47 PM Feb 12, 2020 | Naveen |

ಶಿವಮೊಗ್ಗ: ಬೃಹತ್‌ ಶಿಲಾಯುಗ ಕಾಲದ ನಿಲಸುಗಲ್ಲು (ಮೆನ್ಹಿಲ್ಸ್‌ ) ಭದ್ರಾವತಿ ತಾಲೂಕಿನ ಹೊಸನಂಜಾಪುರ ಗ್ರಾಮದಲ್ಲಿ ಪತ್ತೆಯಾಗಿದೆ. ಇದು ಗ್ರಾನೈಟ್‌ ಕಲ್ಲಿನಿಂದ ಕೂಡಿದ್ದು ಏಳೂವರೆ ಅಡಿ ಎತ್ತರವಾಗಿದೆ.

Advertisement

ಬೃಹತ್‌ ಶಿಲಾಯುಗದ ಕುರುಹು: ಈ ಸಂಸ್ಕೃತಿಯ ವಿಶೇಷತೆ ಎಂದರೆ ಮಾನವ ಮೊಟ್ಟಮೊದಲ ಬಾರಿ ಕಬ್ಬಿಣದ ಬಳಕೆ ಮಾಡಿ ಬಂಡೆಗಳನ್ನು ಸೀಳಿ ಕಲ್ಲು ಚಪ್ಪಡಿಗಳನ್ನು ತಯಾರಿಸಿ ಬೃಹತ್‌ ಶಿಲಾಗೋರಿಗಳನ್ನು ನಿರ್ಮಿಸಿರುವುದು, ಕೆಲವು ಕಡೆ ಕಬ್ಬಿಣದ ಆಯುಧಗಳನ್ನು ಮಡಿಕೆಗಳನ್ನು ಬಳಸಿರುವುದು ಕಂಡುಬರುತ್ತದೆ. ಇವುಗಳನ್ನು ಸ್ಥಳೀಯರು ಪಾಂಡವರಮನೆ, ಪಾಂಡವರ ಕಲ್ಲು, ರಾಕ್ಷಸರ ಕಲ್ಲು, ಮೊರೆರ ಮನೆ (ಕಲ್ಲು), ಮೋರೆರ ಅಂಗಡಿ ಎಂದು ಕರೆಯುತ್ತಾರೆ.

ಇವುಗಳಲ್ಲಿ ನಿಲುಸುಗಲ್ಲುಗಳು, ಕಲ್ಪನೆ, ಕಲ್ಲುಪೆಗಳು, ಕಲ್ಲು ವೃತ್ತಗಳು, ಅಸ್ಥಿಮಡಿಕೆಗಳು, ಶವಪೆಟ್ಟಿಗೆಗಳು, ಸಮಾದಿಬ್ಬ, ನೆಲಕೋಣೆ, ಹೆಡೆಕಲ್ಲು, ಮಾನವಾಕೃತಿಯ ಚಪ್ಪಡಿಕಲ್ಲು ಸಮಾಧಿ, ನೆಲದಡಿ ಕಲ್ಲುಹುಹೆಗಳು ಮೊದಲಾದ ಬೃಹತ್‌ ಶಿಲಾಗೋರಿಗಳು ಕಂಡುಬರುತ್ತವೆ.

ಈ ಸಂಸ್ಕೃತಿಯ ಜನರು ಜೀವಿಸುತಿದ್ದ ಪ್ರದೇಶಗಳನ್ನು ವಾಸ್ತವ್ಯದ ನೆಲೆಗಳೆಂದು ಹಾಗೂ ಶವಸಂಸ್ಕಾರದ ಕೇಂದ್ರಗಳನ್ನು ಗೋರಿ ನೆಲೆಗಳೆಂದು ಕರೆಯಲಾಗಿದೆ. ಪತ್ತೆಯಾದ ನಿಲುಸುಗಲ್ಲು ಭದ್ರಾವತಿ ತಾಲೂಕಿನ ಹೊಸನಂಜಾಪುರ ಗ್ರಾಮದ ಹೇರೊಡ್ರಮ್‌ ಎಂಬ ಸ್ಥಳದಲ್ಲಿದ್ದು ಈ ನಿಲುಸುಗಲ್ಲನ್ನು ಸ್ಥಳೀಯರು ನಿಧಿಕಲ್ಲು ಎಂದು ಕರೆಯುತ್ತಾರೆ. ಇದು ನಿಲುಸುಗಲ್ಲಾಗಿದ್ದು ಬೃಹತ್‌ ಶಿಲಾಯುಗದ ಮಾನವನು ಸಮಾಧಿ ಮಾಡುವಾಗ ಈ ರೀತಿಯ ನಿಲಸುಗಲ್ಲನ್ನು ಅವರ ನೆನಪಿಗೋಸ್ಕಾರ ಸ್ಮಾರಕ ಶಿಲೆಯಾಗಿ ನಿಲ್ಲಿಸುತ್ತಿದ್ದರು. ಇದರಲ್ಲಿ ಯಾವುದೇ ಎಗ್ರಹ ಕೆತ್ತನೆಯಾಗಲಿ ಇಲ್ಲ.

ಈ ಸಮಾಧಿಗಳು ಆಯಾ ಪ್ರದೇಶದಲ್ಲಿರುವ ನೈಸರ್ಗಿಕ ಶಿಲಾರಚನೆ
ಗನುಸಾರವಾಗಿ ನಿರ್ಮಿತವಾಗಿರುತ್ತವೆ. ಇಲ್ಲಿಯೂ ಸಹ 10 ಅಡಿ ದೂರದಲ್ಲಿ ನೈಸರ್ಗಿಕ ಶಿಲಾ ರಚನೆಯಿರುವುದನ್ನು ಕಾಣಬಹುದು. ಇದರ ಕಾಲಮಾನವನ್ನು ಕ್ರಿ.ಪೂ 1200 ರಿಂದ ಕ್ರಿ.ಶ.200 ಎಂದು ತಿಳಿಯಬಹುದಾಗಿದೆ. ಆದ್ದರಿಂದ ಹೊಸನಂಜಾಪುರದ ಈ ನೆಲೆಯು ಕ್ರಿ.ಪೂ. 1200 ವರ್ಷಗಳಷ್ಟು ಪುರಾತನವಾಗಿದ್ದು ಇದು ಸಮಾಧಿಯ ಸ್ಥಳವೆಂದೇ ಹೇಳಬಹುದು. ಭದ್ರಾವತಿ ತಾಲೂಕಿನ ಆನವೇರಿ, ನಾಗಸಮುದ್ರ, ನಿಂಬೇಗೊಂದಿ , ವಡೇರಪುರ ಮೊದಲಾದ ಕಡೆ ಈ ಕಾಲದ ನೆಲೆಗಳನ್ನು ಕಾಣಬಹುದು.

Advertisement

ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಆರ್‌. ಶೇಜೇಶ್ವರ್‌, ಡಾ| ಮಧುಸೂದನ್‌, ಡಾ| ಅನಿಲ್‌ ಕುಮಾರ್‌ ಕ್ಷೇತ್ರ ಕಾರ್ಯ ಕೈಗೊಂಡಾಗ ಈ ನಿಲುಸುಗಲ್ಲು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next