ಶಿವಮೊಗ್ಗ: ಕಿಡಿಗೇಡಿಗಳ ಗುಂಪೊಂದು ಯುವಕನ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿದ ಘಟನೆ ನಗರದ ಹರಿಗೆ ಬಸ್ ನಿಲ್ದಾಣದ ಬಳಿ ಮಾ.17ರ ಭಾನುವಾರ ರಾತ್ರಿ ನಡೆದಿದೆ.
Advertisement
ಪ್ರಶಾಂತ್ ಹಲ್ಲೆಗೊಳಗಾದವನು ಎಂದು ತಿಳಿದು ಬಂದಿದೆ.
ಕಿಡಿಗೇಡಿಗಳು ಪ್ರಶಾಂತ್ ನ ತಲೆಗೆ ಲಾಂಗ್ ನಿಂದ ಹಲ್ಲೆ ಮಾಡಿದ್ದು, ಲಾಂಗ್ ತಲೆಯಲ್ಲಿ ಸಿಕ್ಕಿಕೊಂಡಿದೆ. ಸ್ಥಳೀಯರು ಲಾಂಗ್ ಹಿಡಿದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.