ಶರತ್ ಭದ್ರಾವತಿ
ಶಿವಮೊಗ್ಗ: ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಅಪ್ರಾಪ್ತೆಯರ ಮೇಲಿನ ದೌರ್ಜನ್ಯದ ಪ್ರಮಾಣ ಏರಿಕೆ ಹಾದಿಯಲ್ಲಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗಿರುವ ಪ್ರಮಾಣ ತುಂಬಾ ಕಡಿಮೆ ಹಾಗೂ ನಿಧಾನ. 2015ರಲ್ಲಿ ಮಹಿಳಾ ದೌರ್ಜನ್ಯದ 28 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಎರಡು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಒಂದು ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಲಾಗಿದೆ. 1 ಪ್ರಕರಣ ತನಿಖೆ ಹಂತದಲ್ಲಿದೆ. 1 ಪ್ರಕರಣ ಪತ್ತೆಯಾಗಿಲ್ಲ.
9 ಪ್ರಕರಣ ಕೋರ್ಟ್‌ನಲ್ಲಿದೆ. 14 ಪ್ರಕರಣ ಖುಲಾಸೆಗೊಂಡಿವೆ. 2016ರಲ್ಲಿ 32 ಪ್ರಕರಣ ದಾಖಲಾಗಿದ್ದು 14 ಪ್ರಕರಣ ಖುಲಾಸೆಗೊಂಡಿದ್ದು, 15 ಪ್ರಕರಣಗಳು ಕೋರ್ಟ್‌ನಲ್ಲಿವೆ. 2017ರಲ್ಲಿ 15 ಪ್ರಕರಣ ದಾಖಲಾಗಿದ್ದು 11 ಪ್ರಕರಣ ಕೋರ್ಟ್ ನಲ್ಲಿವೆ. 3 ದೂರು ವಜಾಗೊಂಡಿವೆ. 2018ರಲ್ಲಿ 18 ದೂರು ದಾಖಲಾಗಿದ್ದು 16 ಪ್ರಕರಣ ವಿಚಾರಣೆ ಹಂತದಲ್ಲಿದೆ. 1 ತನಿಖೆ ಹಂತದಲ್ಲಿದೆ. 1 ವಜಾಗೊಂಡಿದೆ. 2019ರಲ್ಲಿ 10 ಪ್ರಕರಣ ದಾಖಲಾಗಿದ್ದು 4 ಕೋರ್ಟ್‌ನಲ್ಲಿದ್ದು 6 ದೂರು ತನಿಖೆ ಹಂತದಲ್ಲಿವೆ.
ಮಕ್ಕಳ ಮೇಲಿನ ದೌರ್ಜನ್ಯ: 2015ರಲ್ಲಿ 65 ಪ್ರಕರಣ ದಾಖಲಾಗಿದ್ದು 1 ಪ್ರಕರಣ ಫೇಕ್ ಎಂದು ಸಾಬೀತಾಗಿದ್ದು, 14 ಪ್ರಕರಣ ಸಂಧಾನದ ಮೂಲಕ ಬಗೆಹರಿಸಲಾಗಿದೆ. 42 ಪ್ರಕರಣಗಳು ಖುಲಾಸೆಗೊಂಡಿವೆ. ಐದು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 2016ರಲ್ಲಿ 75 ಪ್ರಕರಣ ದಾಖಲಾಗಿದ್ದು 37 ವಿಚಾರಣೆ ಹಂತದಲ್ಲಿವೆ.
33 ಖುಲಾಸೆಗೊಂಡಿವೆ. ಒಂದು ನಕಲಿ ಎಂದು ಕೈ ಬಿಡಲಾಗಿದೆ. 2017ರಲ್ಲಿ 59 ದೂರು ದಾಖಲಾಗಿದ್ದು 1 ನಕಲಿ, 19 ವಜಾಗೊಂಡಿವೆ. 33 ಕೋರ್ಟ್ ವಿಚಾರಣೆ ಹಂತದಲ್ಲಿವೆ. ಮೂರು ಜನ ಆರೋಪಿಗಳು ಮೃತಪಟ್ಟಿದ್ದಾರೆ. ಎರಡು ಪ್ರಕಣಗಳಲ್ಲಿ ಶಿಕ್ಷೆಯಾಗಿದೆ. 2018ರಲ್ಲಿ 77 ಪ್ರಕರಣ ದಾಖಲಾಗಿದ್ದು 55 ಕೋರ್ಟ್ ವಿಚಾರಣೆಯಲ್ಲಿದೆ.
17 ವಜಾಗೊಂಡಿವೆ. ಇಬ್ಬರು ಆರೋಪಿಗಳು ಸಾವಿಗೀಡಾಗಿದ್ದಾರೆ. 2019ರಲ್ಲಿ ಡಿ.7ರವರೆಗೆ 85 ಪ್ರಕರಣ ದಾಖಲಾಗಿದ್ದು 51 ಪ್ರಕರಣ ಕೋರ್ಟ್ ವಿಚಾರಣೆಯಲ್ಲಿದೆ. 30 ಪ್ರಕರಣ ತನಿಖೆ ಹಂತದಲ್ಲಿದೆ.