Advertisement

Shivamogga; ಕೆರೆಗೆ ಧುಮುಕಿದ ಕಾರು: ಮಹಿಳೆಯರು ಸೇರಿ ಮೂವರು ಪಾರು

04:16 PM Nov 18, 2023 | Vishnudas Patil |

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಧುಮುಕಿದ ಘಟನೆ ಶನಿವಾರ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಮತ್ತು ಮಹಿಳೆಯರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಬೆಂಗಳೂರಿನಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಸೊನಲೆಗೆ ತೆರಳುತಿದ್ದ ಕಾರು ಹೊಸನಗರ ರಸ್ತೆಯಲ್ಲಿರುವ ತಾವರೆಕೆರೆಗೆ ಬಿದ್ದಿದ್ದು,ಸಕಾಲಕ್ಕೆ ನೆರವಿಗೆ ಆಗಮಿಸಿದ ಸ್ಥಳಿಯರು ಸಹಕರಿಸಿ ಪ್ರಯಾಣಿಕರನ್ನು ಹೊರಕ್ಕೆ ತಂದಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಿಪ್ಪನಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next