Advertisement
ವೈಯಕ್ತಿಕ ದ್ವೇಷವೇ?ಹರ್ಷ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಖಾಸಿಫ್‌ಗೂ ಹಾಗೂ ಹರ್ಷ ನಡುವೆ 2015ರಿಂದಲೂ ಹಗೆತನವಿತ್ತು. ಇದೇ ಕಾರಣಕ್ಕೆ ಖಾಸಿಫ್ ವೈಯ ಕ್ತಿಕ ಹಗೆತನ ತೀರಿಸಿಕೊಳ್ಳಲು ಸ್ನೇಹಿತರನ್ನು ಬಳಸಿಕೊಂಡನೇ ಎನ್ನುವ ಕುರಿತ ಆಯಾಮದಲ್ಲೂ ತನಿಖೆ ನಡೆಯತ್ತಿದೆ.
ನಗರದಲ್ಲಿ ಹಿಜಾಬ್ ಗಲಾಟೆ ತಾರಕಕ್ಕೇರಿತ್ತು. ಈ ವೇಳೆ ಹರ್ಷ ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ್ದ ಎಂದು ಹೇಳ ಲಾಗುತ್ತಿದೆ. ಇದೇ ಕಾರಣಕ್ಕೆ ಹರ್ಷ ಕೊಲೆ ಮಾಡಲಾಗಿದೆಯೇ, ಇದಕ್ಕಾಗಿ ಹಳೇ ದ್ವೇಷಿಗಳನ್ನು ಬಳಸಿಕೊಂಡರೆ ಎಂಬ ಬಗ್ಗೆಯೂ ತನಿಖೆ ನಡೆದಿದೆ. ಕೋಮು ವೈಷಮ್ಯವೇ?
ಕೊಲೆಯಾದ ಹರ್ಷ ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಗಲಾಟೆಯಲ್ಲಿ ಹರ್ಷ ಭಾಗಿಯಾಗಿದ್ದ. ಇದೇ ಕಾರಣದಿಂದ ಹರ್ಷ ಜೈಲಿಗೂ ಹೋಗಿ ಬಂದಿದ್ದ. ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ಹರ್ಷ ಕೊಲೆಯಾದನೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
Related Articles
ಹರ್ಷ ಹಿಂದೂ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ. ಹೀಗಾಗಿ ಈತ ಹಲವರ ವಿರೋಧವನ್ನೂ ಕಟ್ಟಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಖಾಸಿಫ್ ಹಾಗೂ ಸಹಚರರನ್ನು ಬಳಸಿಕೊಂಡು ಹರ್ಷನನ್ನು ಕೊಲೆ ಮಾಡಿಸಿದ್ದಾರಾ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.
Advertisement
ಸಂಘಟನೆಗಳ ಪಾತ್ರ? ಹರ್ಷ ಪ್ರಖರ ಹಿಂದುತ್ವವಾದಿ. ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಒಮ್ಮೆ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ್ದ. ಹೀಗಾಗಿ ಕೆಲ ಸಂಘಟನೆಗಳಿಂದ ಬೆದರಿಕೆ ಕರೆಗಳೂ ಬಂದಿದ್ದವು. ಆ ಸಂಘಟನೆಗಳು ಹರ್ಷನನ್ನು ಕೊಲೆ ಮಾಡಿಸಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಲಾಂಗ್ ತೋರಿಸಿದವ ಅರೆಸ್ಟ್
ಹರ್ಷನ ಅಂತಿಮ ಯಾತ್ರೆ ವೇಳೆ ನಡೆದ ಕಲ್ಲು ತೂರಾಟ ಸಂದರ್ಭ ಪೊಲೀಸರಿಗೆ ಲಾಂಗ್ ತೋರಿಸಿದ ಸಜ್ಜತ್‌ನನ್ನು ಬಂ ಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.