Advertisement

ಸ್ಕಿಮ್ಮಿಂಗ್‌ ಮೆಶಿನ್‌ ಅಳವಡಿಸಿ ಎಟಿಎಂ ಕಳ್ಳತನ ಯತ್ನ

03:26 PM May 12, 2019 | Naveen |

ಶಿವಮೊಗ್ಗ: ಇಷ್ಟು ದಿನ ಎಟಿಎಂ ಮೆಷಿನ್‌ ಕದಿಯುತ್ತಿದ್ದ ಕಳ್ಳರು ಈಗ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಕಳ್ಳತನಕ್ಕೆ ಮುಂದಾಗಿದ್ದಾರೆ. ಇಂತಹ ಹೈಟೆಕ್‌ ಕಳ್ಳತನ ಪ್ರಕರಣ ಶಿವಮೊಗ್ಗಕ್ಕೂ ಕಾಲಿಟ್ಟಿದ್ದು ಎಟಿಎಂ ಬಳಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ.

Advertisement

ಸ್ಕಿಮ್ಮಿಂಗ್‌ ಮೆಶಿನ್‌ ಅವಳಡಿಸಿ ಎಟಿಎಂ ಕಾರ್ಡ್‌ ಮಾಹಿತಿ ಹಾಗೂ ಪಾಸ್‌ವರ್ಡ್‌ ಕದಿಯಲು ಸಂಚು ರೂಪಿಸಿದ್ದು ಹಣ ತುಂಬುವ ವೇಳೆ ವಂಚನೆ ಬಯಲಾಗಿದೆ. ಕಳೆದ ವರ್ಷ ಶಂಕರ ಮಠ ಬಳಿಯ ಎಟಿಎಂನಲ್ಲಿ ಈ ರೀತಿಯ ಪ್ರಕರಣ ಪತ್ತೆಯಾಗಿತ್ತು. ಮೇ 9ರಂದು ಬಿ.ಎಚ್. ರಸ್ತೆಯ ದುರ್ಗಾ ಲಾಡ್ಜ್ ಪಕ್ಕದ ಕೆನರಾ ಬ್ಯಾಂಕ್‌ನಲ್ಲಿ ಪತ್ತೆಯಾಗಿದೆ.

ಇದನ್ನು ಗಮನಿಸಿದ ಎಟಿಎಂ ಅಧಿಕಾರಿಗಳು ಕೂಡಲೇ ತೆರವುಗೊಳಿಸಿದ್ದಾರೆ.

ಏನಿದು ಸ್ಕಿಮ್ಮಿಂಗ್‌ ಮೆಶಿನ್‌?: ಎಟಿಎಂ ಕೀಪ್ಯಾಡ್‌ ಮೇಲೆ ಸಣ್ಣದೊಂದು ಕ್ಯಾಮೆರಾ ಮಾದರಿಯ ವಸ್ತುವಿರುತ್ತದೆ. ಇದು ಎರಡು ಬಗೆಯ ಮಾಹಿತಿಯನ್ನು ಸಂಗ್ರಹಿಸುತ್ತದೆ. 66 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ವಸ್ತುವಿನಲ್ಲಿ ವ್ಯಕ್ತಿಯ ಎಟಿಎಂನ ಮಾದರಿ, ಆತ ಬಳಸಿದ ಪಾಸ್‌ವರ್ಡ್‌ ಸಂಗ್ರಹಿಸುತ್ತದೆ. ಇದರ ಆಧಾರದಲ್ಲಿ ಖದೀಮರು ನಕಲಿ ಎಟಿಎಂ ಮಾಡಿ ನಮ್ಮ ಖಾತೆಯ ಹಣವನ್ನು ತೆಗೆಯುವ ಎಲ್ಲಾ ಸಾಧ್ಯತೆಗಳಿರುತ್ತವೆ. ಸುಮಾರು 2ರಿಂದ ಮೂರು ದಿನಗಳ ಕಾಲ ಇಂತಹ ಸ್ವಿಮ್ಮಿಂಗ್‌ ಮಿಷನ್‌ಗಳನ್ನು ಅಳವಡಿಸಿರುತ್ತಾರೆ. ಎಟಿಎಂ ಬಳಸುವ ಗ್ರಾಹಕರು ಸಂಪೂರ್ಣವಾಗಿ ಜಾಗೃತರಾಗಿರಲು ಸೈಬರ್‌ ಕ್ರೈಂ ಇನ್ಸ್‌ಪೆಕ್ಟರ್‌ ಕೆ. ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.

ಇಂತಹ ಯಾವುದೇ ಸ್ಕಿಮ್ಮಿಂಗ್‌ ಮಿಷನ್‌ಗಳು ಕಂಡು ಬಂದಲ್ಲಿ ತಮ್ಮ ವ್ಯವಹಾರಗಳನ್ನು ಕೂಡಲೇ ನಿಲ್ಲಿಸಿ ಸಂಬಂಧಪಟ್ಟ ಬ್ಯಾಂಕ್‌ಗೆ ಅಥವಾ ಸೈಬರ್‌ ಕ್ರೈಂ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಸೈಬರ್‌ ಕ್ರೈಂ ಪೊಲೀಸ್‌ ಇಲಾಖೆಯ 08182- 261426, 9480803383, 9480803300ಗೆ ಸಂಪರ್ಕಿಸಲು ಕೋರಲಾಗಿದೆ.

Advertisement

ಸೈಬರ್‌ ಕ್ರೈಂ ಜಾಗೃತಿ ಕಾರ್ಯಕ್ರಮ
ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಸೈಬರ್‌ ಅಪರಾಧಗಳನ್ನು ಮಾಡಲಾಗುತ್ತಿದ್ದು, ಈ ಬಗ್ಗೆ ವಹಿಸಬೇಕಾದ ಜಾಗರೂಕತೆಯ ಬಗ್ಗೆ ತಿಳಿ ಹೇಳುವ ಉದ್ದೇಶದಿಂದ ನಗರದ ವಿವಿಧೆಡೆ ಶನಿವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇಲ್ಲಿನ ಅಮೀರ್‌ ಅಹ್ಮದ್‌ ಸರ್ಕಲ್, ಸಿಟಿ ಸೆಂಟರ್‌ ಮಾಲ್, ಖಾಸಗಿ ಬಸ್‌ ನಿಲ್ದಾಣದಲ್ಲಿ ಜನರಿಗೆ ಕರಪತ್ರಗಳನ್ನು ಹಂಚಿ ವಹಿಸಬೇಕಾದ ಜಾಗರೂಕತೆಯ ಕುರಿತು ಮಾಹಿತಿ ನೀಡಲಾಯಿತು.ಉದ್ಯೋಗ ನೀಡುವುದಾಗಿ ಆನ್‌ಲೈನ್‌ನಲ್ಲಿ ಆಮಿಷ ಒಡ್ಡಿ ಮೋಸ ಮಾಡುವುದು, ಸಾಲ ಕೊಡುವ ಸೋಗಿನಲ್ಲಿ, ವೈವಾಹಿಕ ಜಾಲತಾಣ, ಆಮದು- ರಫ್ತು ವ್ಯವಹಾರ, ಶಾಪಿಂಗ್‌ ಮಾಲ್, ರೆಸ್ಟೋರೆಂಟ್, ಪೆಟ್ರೋಲ್ ಬಂಕ್‌, ಕಿರಾಣಿ ಅಂಗಡಿ ಮತ್ತಿತರ ಸ್ಥಳಗಳಲ್ಲಿ ಸ್ಕಿಮ್ಮರ್‌ ಬಳಕೆ ಬಗ್ಗೆ ಎಚ್ಚರ ವಹಿಸಬೇಕು. ಈ ಎಲ್ಲ ಅಂಶಗಳ ಬಗ್ಗೆ ತಿಳಿಹೇಳಲಾಯಿತು. ಸೈಬರ್‌ ಕ್ರೈಂ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ. ಕೃಷ್ಣಮೂರ್ತಿ, ಮುಖ್ಯ ಪೇದೆ ನರಸಿಂಹಮೂರ್ತಿ, ಚೂಡಾಮಣಿ, ಜಗದೀಶ್‌, ಪ್ರಕಾಶ್‌ ನಾಯ್ಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next