Advertisement

Shivamogga: ಅಂಬ್ಯುಲೆನ್ಸ್ – ಬೈಕ್ ಅಪಘಾತ ; ಮೂವರು ಬೈಕ್ ಸವಾರರು ಸಾವು

08:09 AM Jun 29, 2024 | Team Udayavani |

ಶಿವಮೊಗ್ಗ: ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಮೂರು ಜನ ಬೈಕ್ ಸವಾರರು ಮೃತಪಟ್ಟ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ  ತರಲಘಟ್ಟ ಬಳಿ ಜೂ.29ರ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದೆ.

Advertisement

ಪ್ರಸನ್ನ (25), ಕಾರ್ತಿಕ್ (27), ಅಜಯ್ (25) ಮೃತ ದುರ್ದೈವಿಗಳು. ಮೃತಪಟ್ಟವರನ್ನು ಹೊಸ ಜೋಗದ ನಿವಾಸಿಗಳು ಎನ್ನಲಾಗುತ್ತಿದೆ.

ಶಿವಮೊಗ್ಗದಿಂದ ಹಾವೇರಿ ಕಡೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್ ಹಾಗೂ ಶಿಕಾರಿಪುರದ ಕಡೆಯಿಂದ ಹೊಸ ಜೋಗದ ಕಡೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next