ಶಿವಮೊಗ್ಗ: ಬಾರ್ ಕ್ಯಾಶಿಯರ್ ಕೊಲೆ ಆರೋಪಿಯನ್ನು ವಶಕ್ಕೆ ಪಡೆಯುವ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ್ದು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಗುಂಡು ಹಾರಿಸಲಾಗಿದೆ.
ಆಯನೂರು ಬಾರ್‌ನಲ್ಲಿ ಕಳೆದ ರಾತ್ರಿ ಕ್ಯಾಶಿಯರ್‌ಗೆ ಚಾಕು ಚುಚ್ಚಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಸತೀಶ್ ಎಂಬಾತನನ್ನು ಪೊಲೀಸರು ಬಂಧಿಸಲು ಮುದ್ದಿನಕೊಪ್ಪ ಬಳಿ ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಪ್ರವೀಣ್ ಮತ್ತು ಶಿವರಾಜ್ ಅವರು ಆರೋಪಿ ಸತೀಶನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಸತೀಶ ಪೊಲೀಸ್ ಸಿಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಈ ವೇಳೆ ಪಿಎಸ್‌ಐ ರಾಜುರೆಡ್ಡಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಸತೀಶನಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದೂ ಸತೀಶ ಪಿಎಸ್‌ಐ ಮೇಲೆ ಚಾಕುವಿನಿಂದ ದಾಳಿಗೆ ಮುಂದಾಗಿದ್ದ. ಆಗ ಸಬ್‌ಇನ್ಸ್ಪೆಕ್ಟರ್ ಹಾರಿಸಿದ ಗುಂಡು ಸತೀಶನ ಕಾಲಿಗೆ ತಗುಲಿದೆ. ಸತೀಶ ಮತ್ತು ಗಾಯಗೊಂಡ ಪೊಲೀಸ್ ಸಿಬಂದಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ