Advertisement

ಕೋವಿಡ್‌ ತಡೆಗೆ ಮುನ್ನೆಚ್ಚರಿಕೆ ಅಗತ್ಯ

06:54 PM Apr 18, 2021 | Shreeraj Acharya |

ಹೊಸನಗರ: ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಗ್ರಾಪಂನಲ್ಲಿ ಟಾಸ್ಕ್ಫೋರ್ಸ್‌ ರಚಿಸುವಂತೆ ಶಾಸಕ ಹರತಾಳು ಹಾಲಪ್ಪ ಸಲಹೆ ನೀಡಿದರು. ತಾಪಂ ಸಭಾಂಗಣದಲ್ಲಿ ಕೋವಿಡ್‌ ಮುಂಜಾಗ್ರತೆ ಕುರಿತ ಗ್ರಾಪಂ ಅಧ್ಯಕ್ಷರು, ಪಿಡಿಒ ಹಾಗೂ ಅಧಿ ಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಕೋವಿಡ್‌ ಎರಡನೇ ಅಲೆಯ ರೂಪ ವಿಭಿನ್ನ ಆಗಿದ್ದು, ಸಾವಿನ ಸಂಖ್ಯೆ ಏರುತ್ತಿರುವುದು ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ಮಾಸ್ಕ್ ಧಾರಣೆ, ಅಂತರ ಕಾಪಾಡುವುದು ಸೇರಿದಂತೆ ಸಭೆ, ಧಾರ್ಮಿಕ ಸಮಾರಂಭಗಳಿಗೆ ಹೆಚ್ಚಿನ ಜನರ ನಿರ್ಬಂಧ ಕುರಿತಂತೆ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು. ಕೊರೊನಾ ಕಾರಣದಿಂದಾಗಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತಿದೆ. ಕೂಲಿ ಕಾರ್ಮಿಕರ ಸಂಖ್ಯೆ ಸಹ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಿಡಿಒ ಗೈರಿಗೆ ಶಾಸಕರು ಗರಂ: ಕೋವಿಡ್‌ ಅಂತಹ ಮಹತ್ವದ ಸಭೆಗೆ ತಾಲೂಕಿನ 30 ಗ್ರಾಪಂನಿಂದ ಕೇವಲ 19 ಪಿಡಿಒ ಹಾಜರಾದ ಬಗ್ಗೆ ಶಾಸಕರು ಗರಂ ಆದ ಘಟನೆ ನಡೆಯಿತು. ಹಳ್ಳಿ-ಹಳ್ಳಿಗೆ ಕೋವಿಡ್‌ ಕುರಿತ ಮಹತ್ವದ ಮಾಹಿತಿ ನೀಡಬೇಕಾದ ಪಿಡಿಒಗಳು ಹಾಜರಾಗಿಲ್ಲ ಎಂಬುದು ಅತ್ಯಂತ ದುಖಃಕರ ಸಂಗತಿ.ಗೈರು ಹಾಜರಾದ ಪಿಡಿಒ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆದೇಶ ನೀಡಿದರು.

ತಾಲೂಕು ವೈದ್ಯಾಧಿ ಕಾರಿ ಡಾ| ಸುರೇಶ ಮಾಹಿತಿ ನೀಡಿ, ತಾಲೂಕಿನಲ್ಲಿ 30 ಸಾವಿರ ಲಸಿಕೆ ಗುರಿ ಹೊಂದಿದ್ದು, ಈಗಾಗಲೇ 14 ಸಾವಿರ ಜನರಿಗೆ ಸಲಿಕೆ ಹಾಕಲಾಗಿದೆ. ಲಸಿಕೆ ಕೊರತೆ ಇಲ್ಲ ಎಂದರು. ತಾಪಂ ಅಧ್ಯಕ್ಷ ಆಲವಳ್ಳಿ ವೀರೇಶ್‌, ಜಿಪಂ ಸದಸ್ಯ ಸುರೇಶ ಸ್ವಾಮಿರಾವ್‌, ಇಒ ಸಿ.ಆರ್‌.ಪ್ರವೀಣ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next