ಸಾಗರ: ಮನುಷ್ಯನಿಗೆ ಇಂದ್ರಿಯಗಳ ಕ್ಷಣಿಕ ಭೋಗ ಸುಖಕ್ಕಿಂತ ಮೋಕ್ಷ ಕಲ್ಯಾಣದಂತಹ ಶಾಶ್ವತ ಸುಖದತ್ತ ಹೆಜ್ಜೆ ಹಾಕಿದಾಗ ಸಾರ್ಥಕವಾಗುತ್ತದೆ. ಧರ್ಮಾಚರಣೆಯಿಂದ ಭಕ್ತಿ ಮತ್ತು ಶ್ರದ್ಧೆಯ ಮಾರ್ಗದಲ್ಲಿ ಕರ್ಮಗಳ ನಿವಾರಣೆಯಾಗುತ್ತದೆ ಎಂದು ಸೋಂದಾ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕರೂರು ಹೋಬಳಿಯ ಚನ್ನಗೊಂಡ ಗ್ರಾಪಂ ವ್ಯಾಪ್ತಿಯ ವಗೆಕೆರೆ ಪಾರ್ಶ್ವನಾಥ ಬಸದಿ ಆವರಣದಲ್ಲಿ ವಗೆಕೆರೆ ಪಾರ್ಶ್ವನಾಥ ದಿಗಂಬರ ಜೈನ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜೈನ್‌ಮಿಲನ್, ಸ್ವಸ್ತಿಶ್ರೀ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಿಕುಂಡ ಆರಾಧನೆ ಮತ್ತು ಸಾಮೂಹಿಕ ವ್ರತೋಪದೇಶ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಜನ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ಧರ್ಮಮಾರ್ಗ ಅನುಸರಿಸಬೇಕು. ಧರ್ಮ- ಕರ್ಮಗಳ ಜೊತೆಗೆ ಆಚರಣೆಯ ಕುರಿತು ಅರಿವು ಮೂಡಿದಾಗ ಪರಿಪೂರ್ಣ ವ್ಯಕ್ತಿಯಾಗಿ ಮಾರ್ಗದರ್ಶಕರಾಗಬಹುದು. ಸಮಾಜದಲ್ಲಿ ಸಂಘಟನಾ ಶಕ್ತಿಯಿಂದ ಕ್ರಿಯಾಶೀಲರಾಗಬೇಕು. ವಿಶಾಲ ಮನೋಭಾವನೆಯಿಂದ ವಿಸ್ತಾರಗೊಳ್ಳಬೇಕು. ಸಂಕುಚಿತಗೊಳ್ಳದೆ ಸಮಾಜಮುಖೀಯಾಗಿ= ನಾಯಕತ್ವದ ಗುಣಗಳಿಂದ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಯಬೇಕು ಎಂದು ಕರೆ ನೀಡಿದರು.
20 ಮಕ್ಕಳಿಗೆ ವ್ರತೋಪದೇಶ ನೀಡಲಾಯಿತು. ಜನಪ್ರತಿನಿಧಿ ಗಳಾದ ನಾಗರಾಜ್ ಜೈನ್ ಮುತ್ತತ್ತಿ, ಪಾರ್ಶ್ವನಾಥ ಜೈನ್ ಕಟ್ಟಿನಕಾರು, ನಾಗರಾಜ್ ಜೈನ್ ಬೊಬ್ಬಿಗೆ, ಮೋಹನ್‌ಕುಮಾರ್ ಜೈನ್ ಹಾಳಸಸಿ, ಪದ್ಮರಾಜ್ ಜೈನ್ ಚಪ್ಪರಮನೆ, ರವಿಕುಮಾರ್ ಜೈನ್ ಕುಣಜೆ, ಪ್ರೇಮಾ, ಸಂತೋಷ್ ಜೈನ್ ಬಾನುಕೊಳ್ಳಿ, ಜ್ಯೋತಿ ಮೇಘರಾಜ್ ಜೈನ್ ಹೆಗ್ಗರಸೆ, ಸುಜಾತ ಗಿಡ್ಡಯ್ಯ ಜೈನ್ ಅವರನ್ನು ಅಭಿನಂದಿಸಿದರು.
ಕೆ.ಡಿ. ತೇಜಪ್ಪ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುಭಾಶ್ಚಂದ್ರ ಜೈನ್ ಬಂಟ್ವಾಳ, ಭಾರತೀಯ ಜೈನ್ ಮಿಲನ್ ಕಾರ್ಯದರ್ಶಿ, ತಾಪಂ ಸದಸ್ಯೆ ಸವಿತಾ ದೇವರಾಜ್ ಜೈನ್, ಬಬಿತಾ ಪ್ರೇಮ್‌ಕುಮಾರ್ ಜೈನ್, ಬಿದರೂರು ಜೈನ ಬಸದಿ ಅಧ್ಯಕ್ಷ ವಜೇಯೇಂದ್ರ ಜೈನ್ ಚೊಕ್ಕೋಡು, ತಾಲೂಕು ಕಸಾಪ ಅಧ್ಯಕ್ಷ ಎಸ್.ವಿ. ಹಿತಕರ ಜೈನ್, ಪ್ರಧಾನ ಅರ್ಚಕ ವೃಷಭರಾಜ್ ಇಂದ್ರ ವಗೆಕೆರೆ, ಕೆ.ಎಸ್. ಓಂಕಾರ ಜೈನ್ ಕಂದೊಳ್ಳಿ, ಮಂಜಯ್ಯ ಜೈನ್ ಸಂಸೆ, ಎಂ.ಪಿ. ಲೋಕರಾಜ್ ಜೈನ್, ಶೋಭಾ ಜಟ್ಟಯ್ಯ ಜೈನ್ ಬಿಣಚಗೋಡು, ನಾಗರತ್ನ ಪಾಶ್ವನಾಥ ಜೈನ್, ಎಸ್.ಡಿ. ಧನಪಾಲ್ ಜೈನ್, ಜೈನ್‌ಮಿಲನ್ ವಗೆಕೆರೆ ಇತರರು ಇದ್ದರು.
ದೇವರಾಜ್ ಕುಪ್ಪಡಿ ಸ್ವಾಗತಿಸಿದರು. ಬಿ.ಸಿ. ತೇಜಪ್ಪ ಜೈನ್ ಬಣಚಗೋಡು ವಂದಿಸಿದರು. ಯಶೋಧರಾ ಇಂದ್ರ ನಿರ್ವಹಿಸಿದರು.