Advertisement

ಒಬಿಸಿ ಮೀಸಲಾತಿಗೆ ಕುಂಚಿಟಿಗರ ಹಕ್ಕೊತ್ತಾಯ

05:33 PM Feb 15, 2021 | Shreeraj Acharya |

ಶಿವಮೊಗ್ಗ: ಕುಂಚಿಟಿಗರ ಕೇಂದ್ರದ ಒಬಿಸಿ ಮೀಸಲಾತಿ ಬೇಡಿಕೆಗೆ ಮತ್ತಷ್ಟು ಬಲ ಬಂದಿದ್ದು ಕುಲಶಾಸ್ತ್ರ ಅಧ್ಯಯನ ವರದಿಯನ್ನು ಮುಖ್ಯಮಂತ್ರಿ
ತವರು ಕ್ಷೇತ್ರದಲ್ಲಿ ರಾಜ್ಯದ ಎಲ್ಲ ಕುಂಚಿಟಿಗರ ಮುಖಂಡರು ಬಿಡುಗಡೆ ಮಾಡಿದರು. ಅಲ್ಲದೆ ಅಧ್ಯಯನ ವರದಿ ಶಿಫಾರಸ್ಸಿನಂತೆ
ನಮಗೂ ಕೇಂದ್ರದ ಒಬಿಸಿ ಮೀಸಲಾತಿ ಜಾರಿ ಮಾಡಬೇಕೆಂದು ಹಕ್ಕೊತ್ತಾಯ ಮಂಡಿಸಿದರು.

Advertisement

ಶಿವಮೊಗ್ಗದ ಕುಂಚಿಟಿಗರ ಹಾಸ್ಟೆಲ್‌ನಲ್ಲಿ ಭಾನುವಾರ ನಡೆದ ವಿವಿಧ ಜಿಲ್ಲೆಗಳ ಕುಂಚಿಟಿಗ ಮುಖಂಡರ ಸಭೆಯಲ್ಲಿ ಈ ಒತ್ತಾಯ ಮಂಡಿಸಲಾಯಿತು. ಒಕ್ಕಲಿಗ ಜಾತಿಯ ಕುಂಚಿಟಿಗ ಬೆಡಗು ಹೊರತುಪಡಿಸಿ ಎಲ್ಲ ಉಪಜಾತಿಗಳಿಗೂ ಕೇಂದ್ರದ ಒಬಿಸಿ ಮೀಸಲಾತಿ ದೊರಕಿದೆ. ರಾಜ್ಯದಲ್ಲಿ 3- ಎ ಮೀಸಲಾತಿ ಕಲ್ಪಿಸಲಾಗಿದೆ. ಕೇಂದ್ರದ ಮೀಸಲಾತಿ ಒಬಿಸಿ ವಂಚಿತರಾಗಿರುವುದರಿಂದ ಉದ್ಯೋಗಕ್ಕಿಂತ ಮುಖ್ಯವಾಗಿ ಶೈಕ್ಷಣಿಕ ಸವಲತ್ತುಗಳಿಗೆ ತೊಂದರೆಯಾಗಿದೆ. ರ್‍ಯಾಂಕಿಂಗ್‌ ಕಡಿಮೆಯಿದ್ದ ವಿದ್ಯಾರ್ಥಿಗಳು ಮೀಸಲಾತಿ ಆಧಾರದ ಮೇಲೆ ಅನುಕೂಲ ಪಡೆಯುತ್ತಿದ್ದಾರೆ. ಕೇಂದ್ರೀಯ ವಿದ್ಯಾಲಯ ಇತರೆ ಕಡೆಯೂ ವಂಚನೆಗೆ ಒಳಗಾಗುತ್ತಿದ್ದೇವೆ ನಮ್ಮನ್ನು ಒಬಿಸಿ ಮೀಸಲಾತಿಗೆ ಸೇರಿಸಿ ಎಂದು ಒತ್ತಾಯಿಸಿದರು.

ಶಿರಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಮಗೆ ಕೇಂದ್ರದ ಒಬಿಸಿ ಮೀಸಲಾತಿ, ರಾಜ್ಯದಲ್ಲಿ ಪ್ರವರ್ಗ
2ಕ್ಕೆ ಸೇರಿಸುವ ವಾಗ್ಧಾನ ನೀಡಿದ್ದರು. ಅವರು ಕೊಟ್ಟ ಮಾತನ್ನೂ ತಪ್ಪಿಲ್ಲ. ಹೀಗಾಗಿ ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ನಂತರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಕುಂಚಿಟಿಗ ಮಹಾಸಭಾದ ಅಧ್ಯಕ್ಷ ಮುರುಳೀಧರ ಹಾಲಪ್ಪ, ಮಂಡಲ್‌ ವರದಿ, ವೆಂಕಟಸ್ವಾಮಿ
ಆಯೋಗ, ಡಾ| ನಂಜುಂಡಪ್ಪ ವರದಿಯಲ್ಲಿ ಕುಂಚಟಿಗರನ್ನು ಉಲ್ಲೇಖೀಸಲಾಗಿದೆ. 30 ವರ್ಷ ಕಳೆದರೂ ನಮಗೂ ನ್ಯಾಯ ದೊರಕಿಲ್ಲ. ನಮಗೆ
ಮೀಸಲಾತಿ ಬೇಕಿರುವುದು ಉದ್ಯೋಗಕ್ಕಾಗಿ ಮಾತ್ರವಲ್ಲ. ಕೇಂದ್ರ ಸರಕಾರದ ಶಾಲೆಗಳಲ್ಲೂ ನಮಗೆ ಅನ್ಯಾಯವಾಗಿದೆ. ಈ ಅನ್ಯಾಯದ ಬಗ್ಗೆ
ಇಷ್ಟು ವರ್ಷ ನಮಗೆ ಅರಿವಿರಲಿಲ್ಲ. ಐದಾರು ವರ್ಷಗಳ ಹಿಂದೆ ನಮ್ಮ ಸಮುದಾಯದ ಹರೀಶ್‌ ಎಂಬುವರು ಐಎಎಸ್‌ನಲ್ಲಿ ರ್‍ಯಾಂಕ್‌ ಪಡೆದಿದ್ದರೂ
ಮೀಸಲಾತಿ ಆಧಾರದ ಮೇಲೆ ಐಪಿಎಸ್‌ ಸ್ಥಾನ ದೊರೆತಿತ್ತು. ಅವರು ಈ ಅನ್ಯಾಯವನ್ನು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಪ್ರಶ್ನಿಸಿದರು. ಇದು
ದೊಡ್ಡಮಟ್ಟದಲ್ಲಿ ಚರ್ಚೆಯಾಗಿ ಕುಂಚಿಟಿಗ ಮುಖಂಡರು ದೆಹಲಿಗೆ ನಿಯೋಗ ಹೋಗಿ ವಿಚಾರಿಸಲಾಗಿ ರಾಜ್ಯ ಸರಕಾರದಿಂದ ನಮಗೆ
ಅ ಧಿಕೃತ ವರದಿ ಬೇಕು ಎಂದರು. ಅಂದಿನ ಸಿಎಂ ಸಿದ್ದರಾಮಯ್ಯನವರು ಕುಲಶಾಸ್ತ್ರ ಅಧ್ಯಯನಕ್ಕೆ ಸೂಚಿಸಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್, ಓರ್ವ ಜರ್ನಲಿಸ್ಟ್‌, ಲೀಗಲ್‌ ಅಡ್ವೆಸರ್‌, ಹಿಂದುಳಿದ ವರ್ಗಗಳ ಇಲಾಖೆ ಡಿಡಿ ಸೇರಿ ಒಂದು ವರ್ಷದ ಕಾಲಾವ ಧಿಯಲ್ಲಿ ಅಧ್ಯಯನ ಮಾಡಿ 300 ಪುಟಗಳ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಿದ್ದಾರೆ. ಈ ವರದಿ ಸಚಿವ ಸಂಪುಟದಲ್ಲಿ ಮಂಡನೆಯಾಗಿ ನಂತರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಸಭೆಯಲ್ಲಿ ಕುಂಚಿಟಿಗ ಮಹಾಸಭಾದ ಗೌರಾವಾಧ್ಯಕ್ಷ ಡಾ| ಎಂ.ಎಚ್‌. ಹಾಲಪ್ಪ, ಎಚ್‌. ಆರ್‌. ಕಲ್ಲೇಶಣ್ಣ, ಶಿವಭದ್ರಯ್ಯ, ಎಂ.ಎನ್‌. ಸುರೇಶ್‌, ಹಾಕಪ್ಪ ಜಕ್ಕಣ್ಣನವರ್‌, ಜಗದೀಶ್‌, ಲೋಕೇಶ್‌, ನರಸಿಂಹಮೂರ್ತಿ, ರಂಗೇಗೌಡ ಸೇರಿ ರಾಜ್ಯದ 17 ಜಿಲ್ಲೆಗಳ ವಿವಿಧ ಮುಖಂಡರು
ಆಗಮಿಸಿದ್ದರು.

ಓದಿ : ಶಿರ್ವ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ:ಗ್ರಾ.ಪಂ.ಅಧ್ಯಕ್ಷ ಗಾದಿ ಬಿಜೆಪಿ ತೆಕ್ಕೆಗೆ   

Advertisement

Udayavani is now on Telegram. Click here to join our channel and stay updated with the latest news.

Next