ಕೆಲಸದಲ್ಲಿ ನಾವು ಮುನ್ನಡೆಯಬೇಕು. ಇಂತಹ ಕೆಲಸಕ್ಕೆ ಸಂಘಟನಾತ್ಮಕ ಶಕ್ತಿಗಳು ಕೆಲಸ ಮಾಡಬೇಕಾದ ಕಾಲ ಬಂದಿದೆ ಎಂದು
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ನಗರದ ಬ್ರಾಸಂ ಸಭಾಭವನದಲ್ಲಿ ಶನಿವಾರ ಬ್ರಾಸಮ್ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡುವ ಕೆಲಸಕ್ಕೆ ಚೌಕಟ್ಟು ಹಾಕಿಕೊಳ್ಳದೆ ಮಿತಿಗಳನ್ನು ಮೀರಿದ ಕೆಲಸ ಮಾಡಲು ಹೊರಟಾಗ ಮಾತ್ರ ಸಾಧನೆಗಳು ಸಾಧ್ಯವಾಗುತ್ತವೆ. ಎಲ್ಲ ಧರ್ಮ, ಜಾತಿ, ಪಂಗಡಗಳು ಸಂಘಟನೆಗಳ ರೂಪದಲ್ಲಿ ಕಾರ್ಯ ನಿರ್ವಹಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇತರ ಸಮುದಾಯದ ದ್ವೇಷ, ಹಾನಿ ಚಿಂತನೆ ಒಳ್ಳೆಯದೂ ಅಲ್ಲ, ಅದು ಸಮಾಜವನ್ನು ಬೆಳೆಸುವುದಿಲ್ಲ ಎಂದರು. ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ.ಶಿಕ್ಷಣದಿಂದ ಜೀವನ ದೃಷ್ಟಿಕೋನ ಸಿಗುತ್ತಿಲ್ಲ.
ಸಂಘಟನೆಗಳು ಇಂತಹ ವಿಚಾರದಲ್ಲಿ ಸೂತ್ರಧಾರನಂತೆ ನಡೆದು ಸಮಾಜದ ಮಾರ್ಗದರ್ಶಿಗಳಾಗಬೇಕು ಎಂದು ಪ್ರತಿಪಾದಿಸಿದರು. ಸಮಾಜ ಎಂಬುದು ಹವಳದ ಹಾರವಿದ್ದಂತೆ. ಇಲ್ಲಿ ಎಲ್ಲ ಜಾತಿ, ಧರ್ಮ, ಉಪಜಾತಿ, ಪಂಗಡಗಳು ಸೇರಿ ಸುಂದರ ಹಾರ ಸಾಧ್ಯವಾಗಿದೆ. ಹಾಗಾಗಿ ನಮ್ಮ ನೀತಿಗಳಲ್ಲಿ ಮಿತಿಗಳನ್ನು ಹೇರಿಕೊಳ್ಳದೆ, ಸಮಾಜಮುಖೀ ಸಂಗತಿಗಳಿಗೆ ಸ್ಪಂದಿಸಬೇಕು. ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. “ನಾವು ಹವ್ಯಕರು’ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ, ಬ್ರಾಹ್ಮಣರು ಎಂದರೆ ಬಹುಜನ ಪ್ರಿಯರು ಎನ್ನುವ ಮಾತಿದೆ. ಅದಕ್ಕೆ ಪೂರಕವಾಗಿ ತಾನೂ ಬೆಳೆಯುತ್ತಾ ಇತರೆ ಸಮುದಾಯವನ್ನು ಬೆಳೆಸುವ ಕೆಲಸವನ್ನು ಬ್ರಾಹ್ಮಣ ಸಮಾಜ ಲಾಗಾಯ್ತಿನಿಂದ ಮಾಡಿಕೊಂಡು ಬರುತ್ತಿದೆ. ಎಲ್ಲ ಕ್ಷೇತ್ರದಲ್ಲೂ ಹವ್ಯಕರಿದ್ದಾರೆ. ಆರಂಭದ ತಮ್ಮ ವೈದಿಕ ವೃತ್ತಿಯ ಜೊತೆಗೆ ಕೃಷಿ ಸೇರಿದಂತೆ ವಿವಿಧ ಕಾಯಕಗಳನ್ನು ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ನಾವು ಎಷ್ಟೇ ಆಧುನಿಕವಾಗಿ ಬದಲಾದರೂ ಮೂಲ ಬಿಟ್ಟು ಬದಕುವ ಬಗ್ಗೆ ಗಮನ ಹರಿಸಬಾರದು. ಈ ನಿಟ್ಟಿನಲ್ಲಿ ಹವ್ಯಕ ಸಾಗರ ಗ್ರಂಥವು ಹವ್ಯಕ ಸಂಸ್ಕೃತಿ, ಸಾಧಕರ
ಪರಿಚಯ, ಬ್ರಾಸಮ್ ನಡೆದು ಬಂದ ದಾರಿ ಇನ್ನಿತರೆ ವಿಷಯಗಳನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
Related Articles
ವಸುಧಾಶರ್ಮ ಪ್ರಾರ್ಥಿಸಿದರು. ಎಚ್. ಎಸ್. ಮಂಜಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಪಟೇಲ್ ಕಟ್ಟಿನಕೆರೆ ನಿರೂಪಿಸಿದರು.
Advertisement
ಓದಿ : ಅನಧಿಕೃತ ಮಾಂಸ ಮಾರಾಟ ಮಳಿಗೆ ತೆರವುಗೊಳಿಸಿ