Advertisement

ಸರಕಾರದ ವಿರುದ್ಧ ಅನ್ನದಾತರ ಆಕ್ರೋಶ

06:00 PM Feb 07, 2021 | Shreeraj Acharya |

ಶಿವಮೊಗ್ಗ: ರೈತ ವಿರೋ ಧಿ ಕಾಯ್ದೆ ತಿದ್ದುಪಡಿ·ಹಿಂಪಡೆಯುವಂತೆ ಆಗ್ರಹಿಸಿ ಹಾಗೂ ದೆಹಲಿಗಡಿ ಭಾಗದಲ್ಲಿ ನಡೆಯುತ್ತಿರುವ ರೈತರ ಚಳವಳಿ
ಬೆಂಬಲಿಸಿ ಶನಿವಾರ ರೈತ ಸಂಘಟನೆಗಳು ಹೆದ್ದಾರಿತಡೆ ನಡೆಸಿದವು.

Advertisement

ಸಾಗರ ರಸ್ತೆಯಲ್ಲಿರುವ ನಂಜಪ್ಪ ಲೈಫ್‌ಕೇರ್‌ ಬಳಿ ರಾಷ್ಟ್ರೀಯ ಯ ಹೆದ್ದಾರಿ ತಡೆದು ರೈತರುಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಮಾಡಬೇಕಿರುವ ಸರಕಾರ ಕಾಯ್ದೆಗಳಿಗೆತಿದ್ದುಪಡಿ ತಂದು ರೈತರ ಮೇಲೆ ಪ್ರಹಾರಮಾಡುತ್ತಿದೆ. ದೆಹಲಿ ಗಡಿಭಾಗದ ಹೆದ್ದಾರಿಗಳಲ್ಲಿಕಾಂಕ್ರೀಟ್‌ ಗೋಡೆಗಳನ್ನು ನಿರ್ಮಿಸಿದ್ದೂ ಅಲ್ಲದೆಕಬ್ಬಿಣದ ಮೊಳೆಗಳನ್ನು ರಸ್ತೆಗೆ ಅಳವಡಿಸಿ ಹೇಡಿತನಪ್ರದರ್ಶಿಸುತ್ತಿದೆ ಎಂದು ಪ್ರತಿಭಟನಾಕಾರರುಆಕ್ರೋಶ ವ್ಯಕ್ತಪಡಿಸಿದರು.
ಜ.26 ರ ರೈತರ ಹೋರಾಟದ ದಿನ ಸರಕಾರಿ

ಪ್ರಾಯೋಜಿತ ಕಿಡಿಗೇಡಿಗಳು ಕೆಂಪು ಕೋಟೆಮೇಲೆ ಅನ್ಯ ಧ್ವಜ ಹಾರಿಸುವ ಮೂಲಕ ರೈತಚಳವಳಿಗೆ ಕಳಂಕ ತರುವ ಕೆಲಸ ಮಾಡಿರುವುದು
ಖಂಡನೀಯ. ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಂದ ಈ ಘಟನೆ ತನಿಖೆ ನಡೆಸಬೇಕು.ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಬಂಧಿಸಿರುವ ಅಮಾಯಕ ರೈತರನ್ನು ಬಿಡುಗಡೆಮಾಡಬೇಕೆಂದು ಒತ್ತಾಯಿಸಿದರು.ಹೆದ್ದಾರಿ ತಡೆಯಿಂದಾಗಿ ಶಿವಮೊಗ್ಗ-ಸಾಗರರಸ್ತೆ ಸಂಪೂರ್ಣ ಬಂದ್‌ಆಗಿತ್ತು. ಪರ್ಯಾಯರಸ್ತೆ ಮೂಲಕ ಸಂಚಾರಕ್ಕೆ ಅನುವುಮಾಡಲಾಗಿತ್ತು. ಖಾಸಗಿ ಹಾಗೂ ಸರಕಾರಿಬಸ್‌ಗಳ ಸಂಚಾರವನ್ನು ಸ್ವಲ್ಪ ಸಮಯ ತಡೆಹಿಡಿಯಲಾಗಿತ್ತು.

ಸ್ಥಳದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ಮಾಡಿ ಯಾವುದೇ ಅಹಿತಕರ ಘಟನೆನಡೆಯದಂತೆ ಕ್ರಮ ಕೈಗೊಳ್ಳಲಾಗಿತ್ತು.ಚಳವಳಿಯಲ್ಲಿ ರೈತ ಮುಖಂಡ ಎಚ್‌.ಆರ್‌. ಬಸವರಾಜಪ್ಪ, ಕೆ. ರಾಘವೇಂದ್ರ, ಇ.ಬಿ.ಜಗದೀಶ್‌, ಎಸ್‌. ಶಿವಮೂರ್ತಿ, ಸಿ. ಚಂದ್ರಪ್ಪ,ಕಸಟ್ಟಿ ರುದ್ರೇಶ್‌, ಹಿಟ್ಟೂರು ರಾಜು, ಕಾಂಗ್ರೆಸ್‌ಮುಖಂಡ ಎನ್‌. ರಮೇಶ್‌, ಡಿಎಸ್‌ಎಸ್‌ನಟಿ.ಎಚ್‌. ಹಾಲೇಶಪ್ಪ, ಜನಶಕ್ತಿ ಸಂಘಟನೆಯಕೆ.ಎಲ್‌. ಅಶೋಕ್‌, ಶಿವಕುಮಾರ್‌ ಮತ್ತಿತರರುಭಾಗವಹಿಸಿದ್ದರು.

ಓದಿ : ಉತ್ತರಾಖಂಡದಲ್ಲಿ ಹಿಮಸ್ಪೋಟ: 10 ಮೃತದೇಹ ಪತ್ತೆ, 150 ಮಂದಿ ಕಣ್ಮರೆ, 16 ಜನರ ರಕ್ಷಣೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next