ಸಾಗರ: ಗಣಪತಿ ಕೆರೆ ವಿಸ್ತೀರ್ಣ ಸುಮಾರು 25 ಎಕರೆ ಇದೆ. ಹಾಲಿ ಧ್ವಜಸ್ತಂಭ ಮತ್ತು ಉದ್ಯಾನವನ ನಿರ್ಮಾಣ ಮಾಡುತ್ತಿರುವುದು ಹಿಂದಿನ ಅವಧಿಯಲ್ಲಿ ಖಾಸಗಿಯವರಿಂದ ವಶಪಡಿಸಿಕೊಂಡ 4.16 ಎಕರೆ ಜಾಗದಲ್ಲಿ ಮಾತ್ರ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.
ಓದಿ : ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಶನಿವಾರ ನಡೆದ ಗಣಪತಿ ಕೆರೆ ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಪತ್ರಕರ್ತರ ಜೊತೆ ಮಾತನಾಡಿದ ಅವರು, ಕೆಲವರು ಕೆರೆ ಜಾಗದಲ್ಲಿ ಧ್ವಜಸ್ತಂಭ, ಉದ್ಯಾನವನಗಳನ್ನು ಕೈಗೊಳ್ಳಲಾಗಿದೆ ಎಂದು ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆ. ಕೆರೆ ಜಾಗದಲ್ಲಿ ಧjಜಸ್ತಂಭ ನಿರ್ಮಾಣ ಮಾಡುತ್ತಿಲ್ಲ. ಗಣಪತಿ ಕೆರೆಯನ್ನು ಹತ್ತಾರು ಬಾರಿ ಸರ್ವೇ ಮಾಡಲಾಗಿದೆ. ಒಂದೊಂದು ಬಾರಿಯೂ ಒಂದೊಂದು ಸರ್ವೇ ಅಳತೆ ಬರುತ್ತಿದೆ. ಈಚೆಗೆ ನಡೆದ ಸರ್ವೇಯಲ್ಲಿ ಗಣಪತಿ ಕೆರೆ 27 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ ಎನ್ನುವ ವರದಿ ಬಂದಿದೆ. ಕೆರೆ ಅಳತೆಗೆ ಸಂಬಂಧಪಟ್ಟ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಒಂದೊಮ್ಮೆ ಅಳತೆಯಲ್ಲಿ ಮಸೀದಿ, ರಾಘವೇಂದ್ರ ಮಠ, ಶಂಕರಮಠ ಅಥವಾ ಖಾಸಗಿಯವರು ಒತ್ತುವರಿ ಮಾಡಿದ್ದರೆ ಅದನ್ನು ಕಾನೂನು ಪ್ರಕಾರ ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು.
ಜ. 26ರಂದು ರಾಜ್ಯದ ಎರಡನೇ ಬೃಹತ್ ರಾಷ್ಟ್ರಧ್ವಜ ಸ್ತಂಭವನ್ನು ಲೋಕಾರ್ಪಣೆಗೊಳಿಸಲಾಗುತ್ತದೆ. ಬೆಳಗ್ಗೆ 8-15ಕ್ಕೆ ಬೃಹತ್ ರಾಷ್ಟ್ರಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನಡೆಸಲಾಗುತ್ತದೆ. ಕಾರ್ಯಕ್ರಮದಲ್ಲಿ ಕ್ಷೇತ್ರದ ನಿಕಟಪೂರ್ವ ಶಾಸಕ ಕಾಗೋಡು ತಿಮ್ಮಪ್ಪ ಅವರು ಭಾಗವಹಿಸುವಂತೆ ಮನವಿ ಮಾಡಲಾಗಿದೆ. ನಂತರ ಖಾಸಗಿ ಬಸ್ ನಿಲ್ದಾಣ ಲೋಕಾರ್ಪಣೆ, ತಾಲೂಕು ಕಚೇರಿ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ರಾಷ್ಟ್ರಧ್ವಜಾರೋಹಣದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ೊತೆಗೆ ಆಹಾರ ಮೇಳ, ಪ್ರೋ ಬಡ್ಡಿ ಪಂದ್ಯಾವಳಿ ಇರುತ್ತದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ತಾಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಪ್ರಮುಖರಾದ ಯು.ಎಚ್.ರಾಮಪ್ಪ, ಸಂತೋಷ್ ಶೇಟ್, ಸತೀಶ್ ಮೊಗವೀರ ಇತರರು ಇದ್ದರು.
ಓದಿ : ಘಾಟ್‌ಕೋಪರ್ ಶ್ರೀ ಭವಾನಿ ಶನೀಶ್ವರ ದೇವಸ್ಥಾನ: ವಾರ್ಷಿಕ ಮಹಾಪೂಜೆ