Advertisement

ರೈತ ಆತ್ಮಹತ್ಯೆ

03:18 PM Feb 02, 2021 | Team Udayavani |

ಸಾಗರ: ತಾಲೂಕಿನ ಪಡವಗೋಡು·ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದ·ರೈತ ಉಮೇಶ್‌ ಎಂ.ಆರ್‌. ಬಿನ್‌ರಾಜಶೇಖರಪ್ಪ ಗೌಡ (60) ಕ್ರಿಮಿನಾಶಕಸೇವಿಸಿ ಮೃತಪಟ್ಟ ಘಟನೆ ನಡೆದಿದೆ.ಮರೂರು ಗ್ರಾಮದ ಉಮೇಶ್‌ಎಂ.ಆರ್‌. ಅವರು ಮೂರು ಎಕರೆತೋಟ ಮತ್ತು ಕೃಷಿಜಮೀನುಹೊಂದಿದ್ದರು. ಬೆಳೆಗಾಗಿ ರಾಷ್ಟ್ರೀಕೃತಬ್ಯಾಂಕ್‌, ಸಹಕಾರಸಂಸ್ಥೆ ಹಾಗೂಕೈಗಡ ಸಾಲಮಾಡಿಕೊಂಡಿದ್ದು,ಸಾಲ ತೀರಿಸಲಾಗದೆತೀವ್ರಚಿಂತಾಕ್ರಾಂತರಾಗಿದ್ದರು ಎನ್ನಲಾಗಿದೆ.ಮಂಗಳವಾರ ಬೆಳಗ್ಗೆ ಉಮೇಶ್‌ಎಂ.ಆರ್‌. ಅವರು ಮನೆಯಲ್ಲಿ ಇರಲಿಲ್ಲ.ಮನೆಯವರು ಹುಡುಕಿ ನೋಡಿದಾಗಮನೆಯ ಹಿಂಭಾಗದ ಖಾಲಿ ಜಾಗದಲ್ಲಿಎಂ.ಆರ್‌. ಅವರು ತೀವ್ರಅಸ್ವಸ್ಥಗೊಂಡು ಮಲಗಿದ್ದರು. ತಕ್ಷಣಅವರನ್ನು ಖಾಸಗಿ ವಾಹನದಲ್ಲಿಸಾಗರ ಉಪ ವಿಭಾಗೀಯ ಆಸ್ಪತ್ರೆಗೆಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು
ಮಾಡಲಾಗಿತ್ತು.

Advertisement

ವೈದ್ಯರು ಪ್ರಥಮಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.ಶಿವಮೊಗ್ಗಕ್ಕೆ ಕರೆದೊಯ್ಯುವಮೊದಲೆ ಉಮೇಶ್‌ ಮೃತಪಟ್ಟಿದ್ದಾರೆ.
ಮೃತ ಉಮೇಶ್‌ ಗೌಡ ಅವರು ಪತ್ನಿ,ಓರ್ವ ಪುತ್ರನನ್ನು ಅಗಲಿದ್ದಾರೆ. ಈಸಂಬಂಧ ಮೃತ ಉಮೇಶ್‌ ಎಂ.ಆರ್‌.ಅವರ ಪುತ್ರ ಅರ್ಜುನ್‌ ಗ್ರಾಮಾಂತರಠಾಣೆಗೆ ನೀಡಿದ ದೂರಿನಲ್ಲಿ ತನ್ನ ತಂದೆಕೃಷಿಗಾಗಿ ಬ್ಯಾಂಕ್‌ ಹಾಗೂ ವಿವಿಧ ಕಡೆಸಾಲ ಮಾಡಿದ್ದರು. ಸಾಲ ತೀರಿಸಲಾಗಿದೆಮಾನಸಿಕವಾಗಿ ನೊಂದು, ವಿಷ ಸೇವಿಸಿಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಓದಿ : ಹುಬ್ಬಳ್ಳಿಯಲ್ಲಿ ACB ಬೇಟೆ: ಲಕ್ಷಾಂತರ ರೂ. ಮೌಲ್ಯದ ಗರಿ ಗರಿ ನೋಟು, ಚಿನ್ನಾಭರಣ ಪತ್ತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next