Advertisement

ಬಿಎಸ್ ವೈ ಯೋಜನೆಗ ವೇಗ ನೀಡುವರೇ ಬೊಮ್ಮಾಯಿ ?

07:03 PM Jul 29, 2021 | Shreeraj Acharya |

ಶಿವಮೊಗ್ಗ: ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ಕೊಟ್ಟ ಶಿವಮೊಗ್ಗ ಜಿಲ್ಲೆ ಹೊಸ ಸಿಎಂ ಅವರಿಂದ ಹೊಸ ಯೋಜನೆ ನಿರೀಕ್ಷಿಸುವುದಕ್ಕಿಂತ ಘೋಷಣೆಯಾದ ಯೋಜನೆಗಳಿಗೆ ಸಕಾಲಕ್ಕೆ ಅನುದಾನ ಸಿಗುವ ನಿರೀಕ್ಷೆಯಲ್ಲಿದೆ. ನಾಲ್ಕು ಬಾರಿ ರಾಜ್ಯದ ಚುಕ್ಕಾಣಿ ಹಿಡಿದ ಜಿಲ್ಲೆಯ ಪುತ್ರ ಬಿ.ಎಸ್‌.ಯಡಿಯೂರಪ್ಪ ಅವರು ಸಿಎಂ ಆದ ಕ್ಷಣದಿಂದ ಇಲ್ಲಿವರೆಗೆ ಜಿಲ್ಲೆಗೆ ಅನೇಕ ಯೋಜನೆಗಳನ್ನು ಕೊಡುಗೆಯಾಗಗಿ ನೀಡಿದ್ದಾರೆ.

Advertisement

ಸಾವಿರಾರು ಕೋಟಿ ಅನುದಾನ ಒದಗಿಸಿದ್ದಾರೆ. ಇಡೀ ಜಿಲ್ಲೆಯ ಚಿತ್ರಣವನ್ನೇ ಬದಲಿಸಿದ್ದಾರೆ. ಶಿವಮೊಗ್ಗ ನಗರವನ್ನಂತೂ ಹೈಟೆಕ್‌ ಮಾಡುವಲ್ಲಿ ಅವರ ಶ್ರಮ ದೊಡ್ಡದು. ದಶಕದಿಂದ ಈಚೆಗೆ ಶಿವಮೊಗ್ಗದ ಅಭಿವೃದ್ಧಿ ಚಿತ್ರಣವೇ ಬದಲಾಗಿದೆ. ಹೀಗಾಗಿ ಹೊಸ ಯೋಜನೆಗಿಂತ ಈಗಾಗಲೇ ಅನುಷ್ಠಾನಗೊಂಡಿರುವ ಹಾಗೂ ಘೋಷಿಸಲಾದ ಯೋಜನೆಗಳಿಗೆ ನೂತನ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯುವರು ಅನುದಾನ ಒದಗಿಸಲಿ ಎಂಬುದು ಜನರ ನಿರೀಕ್ಷೆಯಾಗಿದೆ.

ವಾರದ ಹಿಂದಷ್ಟೇ ಸಿಎಂ ಆಗಿದ್ದ ಬಿಎಸ್‌ವೈ ಈಗ ಮಾಜಿ ಆಗಿದ್ದಾರೆ. ಅವರ ನಿರ್ಗಮನದ ನಂತರ ಜಿಲ್ಲೆಯಲ್ಲಿ ನೂರಾರು ಕೋಟಿ ವೆಚ್ಚದ ಯೋಜನೆಗಳು ಮುಕ್ತಾಯಗೊಳ್ಳುವುದೇ ಎಂಬ ಆತಂಕ ಶುರುವಾಗಿದೆ. ಆದರೆ ಬಿಎಸ್‌ವೈ ಆಪ್ತರೇ ರಾಜ್ಯದ ನೂತನ ಸಿಎಂ ಆಗಿರುವುದು ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗಲಿಕ್ಕಿಲ್ಲ ಎಂಬ ಆಶಾಭಾವ ಇದ್ದು ಕಾಮಗಾರಿಗಳು ನಿಗದಿತ ಅವ ಧಿಯಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವ ಕೆಲವೇ ದಿನಗಳ ಹಿಂದೆ ಸಾವಿರ ಕೋಟಿ ರೂ. ವೆಚ್ಚದ ಕೆಲ ಯೋಜನೆಗಳಿಗೆ ಬಿಎಸ್‌ವೈ ಚಾಲನೆ ನೀಡಿದ್ದರು. ಅವುಗಳಿಗೆ ನಿಗದಿತ ಅವ ಧಿಯಲ್ಲಿ ಅನುದಾನದ ಅಗತ್ಯವಿದೆ.

ಬಹು ಮುಖ್ಯವಾಗಿ 185 ಕೋಟಿ ರೂ.ಗಳ ವೆಚ್ಚದಲ್ಲಿ ಅಗತ್ಯ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, 100 ಕೋಟಿ ರೂ.ಗಳ ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 200 ಹಾಸಿಗೆಗಳ ಕಿದ್ವಾಯಿ ಮಾದರಿಯ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ, 120 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಜಿಲ್ಲಾಡಳಿತ ಭವನ, 15ಕೋಟಿ ರೂ.ಗಳ ವೆಚ್ಚದಲ್ಲಿ ಎನ್‌.ಜಿ.ಒ. ಕ್ವಾಟ್ರìಸ್‌ ಕಟ್ಟಡ ಕಾಮಗಾರಿ, 107.89 ಕೋಟಿ ರೂ.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ ಕಾಮಗಾರಿ, 6ಕೋಟಿ ರೂ.ಗಳ ವೆಚ್ಚದಲ್ಲಿ ಕೆ.ಇ.ಬಿ. ವೃತ್ತದಲ್ಲಿರುವ ನೌಕರರ ಸಮುದಾಯ ಭವನ ನಿರ್ಮಾಣ, 1.50ಕೋಟಿ ವೆಚ್ಚದಲ್ಲಿ ಸಾಗರ ತಾಲೂಕು ನೀರುಕೋಡು ಗ್ರಾಮದಲ್ಲಿ ಸಾರ್ವಜನಿಕ ಸಮುದಾಯ ಭವನ, 10 ಕೋಟಿ ರೂ. ಗಳ ವೆಚ್ಚದಲ್ಲಿ ಸ್ಮಾರ್ಟ್‌ರಸ್ತೆಗಳು, 20.89ಕೋಟಿ ರೂ. ಗಳ ವೆಚ್ಚದಲ್ಲಿ ಸಕ್ರೆಬೈಲಿನಲ್ಲಿ ಜೈವಿಕ ಉದ್ಯಾನವನ ಅಭಿವೃದ್ಧಿ ಕಾಮಗಾರಿ, 32ಕೋಟಿ ರೂ.ಗಳ ವೆಚ್ಚದಲ್ಲಿ ಊರಗಡೂರು ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣ, 55 ಕೋಟಿ ರೂ.ವೆಚ್ಚದಲ್ಲಿ ರಾ.ಹೆ.169ರ (ತೀರ್ಥಹಳ್ಳಿ ಪಟ್ಟಣದಲ್ಲಿ ದ್ವಿಪಥದ ಬೃಹತ್‌ ಸೇತುವೆ ಮತ್ತು ಬೈಪಾಸ್‌ ರಸ್ತೆ), ರಾ.ಹೆ.206ರಲ್ಲಿ ಸಾಗರ ನಗರ ವ್ಯಾಪ್ತಿಯಲ್ಲಿ 4ಪಥದ ರಸ್ತೆ ಕಾಮಗಾರಿಗಳಿಗೆ ವಾರದ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದು ಅವುಗಳಿಗೆ ಸಕಾಲದಲ್ಲಿ ಅನುದಾನ ಒದಗಿಸಬೇಕಿದೆಯಲ್ಲದೆ ನಿಗದಿತ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳಿಸುವ ಜವಾಬ್ದಾರಿ ಬೊಮ್ಮಾಯಿಯವರ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next