Advertisement

ಕವಲೆದುರ್ಗ ನೂತನ ಶ್ರೀಗಳ ಗುರುಪಟ್ಟಾಧಿಕಾರ ಮಹೋತ್ಸವ

11:00 PM Jul 08, 2021 | Shreeraj Acharya |

ತೀರ್ಥಹಳ್ಳಿ: ಹರ ಮುನಿದರೂ ಗುರು ಕಾಯುವನು ಎಂಬಂತೆ ಭಾರತೀಯ ಸನಾತನ ಸಂಸ್ಕ ೃತಿಯಲ್ಲಿ ಗುರು ಪರಂಪರೆ ಶ್ರೇಷ್ಠವಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ತಾಯಿಗೆ ಇರುವಷ್ಟು ಶ್ರೇಷ್ಠ ಸ್ಥಾನ ಗುರುವಿಗೂ ಇದೆ ಎಂದು ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ಕವಲೆದುರ್ಗ ಕೆಳದಿ ರಾಜಗುರು ಮಹಾ ಮಹತ್ತಿನ ಭುವನಗಿರಿ ಸಂಸ್ಥಾನ ಮಠದಲ್ಲಿ ಬುಧವಾರ ನಡೆದ ನೂತನ ಶ್ರೀಗಳ ಗುರುಪಟ್ಟಾಧಿಕಾರ ಮಹೋತ್ಸವ ಮತ್ತು ಶ್ರೀ ಜಗದ್ಗುರು ಧಾರಾಕಾಚಾರ್ಯ ಗುರುಕುಲ ಆರಂಭೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು.

ನೂತನ ಪಟ್ಟಾಧ್ಯಕ್ಷರಿಗೆ ಸಂಪುಟ ಪತ್ರ- ಕಮಂಡಲ-ಮರಳುಸಿದ್ಧ ಶಿವಾಚಾರ್ಯ ನಾಮಕರಣ ಮಾಡಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಜಗದ್ಗುರುಗಳು, ಸಮಾಜ ಎಂಬುದು ತಂದೆ-ತಾಯಿ ಇದ್ದಂತೆ. ಅದಕ್ಕೆ ಮಾರ್ಗದರ್ಶನ ಮಾಡುವ ಗುರುಗಳು ಅಗತ್ಯವಾಗಿದ್ದು, ನೂತನ ಶ್ರೀಗಳನ್ನು ತಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಅವರನ್ನು ಬೆಳೆಸುವ ಗುರುತರ ಜವಾಜಾªರಿ ಸಮಾಜದ ಮತ್ತು ಭಕ್ತರದ್ದಾಗಬೇಕು ಎಂದರು. ವೀರಶೈವ ಮಠಗಳು ಜಾತಿಗೆ ಸೀಮಿತ ವಾಗದೆ ಜಾತ್ಯತೀತ ಮಠಗಳಾಗುವ ಮೂಲಕ ಭಾರತೀಯರಲ್ಲಿ ಸಮನ್ವಯತೆ ಭಾವನೆ ಬೆಳೆಸುವ ಕೇಂದ್ರಗಳಾಗಬೇಕು ಎಂದು ತಿಳಿಸಿದರು.

ಶಾಸಕ ಆರಗ ಜ್ಞಾನೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಪುಣ್ಯ ಪುರುಷ್ಯರ ಮತ್ತು ಧರ್ಮದ ನೆಲೆವಿಡಾಗಿದೆ. ಹಿಂದೂ ಸಂಸ್ಕ ೃತಿ ಉಳಿಸುವ ಕೆಲಸದಲ್ಲಿ ಮಠಗಳ ಪಾತ್ರ ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕವಲೇದುರ್ಗ ಮಠದ ಜೀರ್ಣೋದ್ಧಾರಕ್ಕಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಶಿಲಾಮಯ ಮಠವನ್ನು ನಿರ್ಮಿಸುವ ಮೂಲಕ ಸಂಸದ ಬಿ.ವೈ.ರಾಘವೇಂದ್ರ ಅವರ ಭರವಸೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ 1.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

Advertisement

ಶೀಘ್ರದಲ್ಲಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯರು, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶ್ರೀಗಳು, ತೊಗರ್ಸಿಯ ಮಳೆ ಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ವಿಭೂತಿಮಠದ ಡಾ.ಮಹಾಂತಲಿಂಗ ಶಿವಾಚಾರ್ಯರು, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಅಭಿನವ ಚನ್ನಬಸವ ಮಹಾಸ್ವಾಮೀಜಿ, ರೆಟ್ಟಿಹಳ್ಳಿ, ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ಉದ್ಯಮಿ ಕೆ.ಆರ್‌ .ಪ್ರಕಾಶ್‌, ತ್ಯಾರಂದೂರು ಮುರುಗೇಂದ್ರ, ಕಟ್ಟೆಗದ್ದೆ ಹಾಲಪ್ಪ, ತೀರ್ಥಹಳ್ಳಿ ಪಾಂಡುರಂಗ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next