ಸಾಗರ: ತಾಲೂಕಿನ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರಿಗೆ ಭಾನುವಾರ ಅವಕಾಶ ಇಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ, ಮಾಹಿತಿ ಇಲ್ಲದೆ ಸಾವಿರಾರು ಜನ ಜೋಗಕ್ಕೆ ತೆರಳಿ ನಿರಾಶರಾದ ಘಟನೆ ನಡೆದಿದೆ.
ಮಲೆನಾಡಿನಲ್ಲಿ ಮಳೆಗಾಲ ತುಸು ಬಿಡುವು ಕೊಟ್ಟಿರುವುದು, ಐಟಿಬಿಟಿಗಳಿಗೆ ವಾರಾಂತ್ಯ ರಜೆ ಕಳೆಯುವುದಕ್ಕೆ ಪ್ರವಾಸವೇ ಮದ್ದು ಎಂಬ ಮನೋಭಾವ ಇದ್ದಿರುವ ಹಿನ್ನೆಲೆಯಲ್ಲಿ ನೂರಾರು ಕಾರುಗಳು ಜೋಗದತ್ತ ಭಾನುವಾರ ಧಾವಿಸಿವೆ.
ಆದರೆ ಜೋಗ ಅಭಿವೃದ್ಧಿ ಪ್ರಾ ಧಿಕಾರ ಮೈಸೂರು ಬಂಗ್ಲೆ ಹಾಗೂ ಬ್ರಿಟಿಷ್ ಬಂಗ್ಲೆ ಸ್ಥಳದಲ್ಲಿ ಜಲಪಾತದ ದೃಶ್ಯ ನೋಡುವುದಕ್ಕೆ ಗೇಟ್‌ಗೆ ಬೀಗ ಹಾಕಿ ನಿರ್ಬಂ ಧಿಸಿದೆ. ಇದರಿಂದ ನಿರಾಶರಾದ ಪ್ರವಾಸಿಗರು ಖಾಸಗಿ ಜಾಗಗಳಲ್ಲಿ ಕಾಣುವ ಜೋಗ ಜಲಪಾತದ ಬೇರೆ ಬೇರೆ ಕೋನಗಳ ಸಣ್ಣ ಝಲಕ್ ಅನ್ನು ನೋಡಿ ತೃಪ್ತಿಪಡುವಂತಾಯಿತು.
ಲಾಕ್ ಡೌನ್ ನಿಯಮ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಾರಾಂತ್ಯದ ಕರ್ಫ್ಯೂ ಕಾರಣದಿಂದಾಗಿ ಭಾನುವಾರ ವೀಕ್ಷಣೆ ನಿರ್ಬಂ ಧಿಸಲಾಗಿದೆ ಎಂದು ಇಲಾಖೆಯ ಅ ಧಿಕಾರಿಗಳು ತಿಳಿಸಿದ್ದು, ಮತ್ತೆ ಸೋಮವಾರದಿಂದ ವೀಕ್ಷಣೆಗೆ ಅವಕಾಶ ಲಭಿಸಲಿದೆ.
ಈಗಾಗಲೇ ಸರ್ಕಾರ ಲಾಕ್ ಡೌನ್‌ನ ಮೂರನೇ ಹಂತದ ರಿಯಾಯ್ತಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ವಾರಾಂತ್ಯದ ಕರ್ಫ್ಯೂ ಇಲ್ಲದ ಕಾರಣ ಜು.10, 11ರ ವಾರಾಂತ್ಯದ ದಿನಗಳಲ್ಲಿ ಜೋಗ ಪ್ರವಾಸಿಗರಿಗೆ ತೆರೆದಿರಲಿದೆ ಎಂದು ಭಾವಿಸಲಾಗಿದೆ. ಈ ಬಗ್ಗೆ ಈವರೆಗೆ ಪ್ರವಾಸೋದ್ಯಮ ಇಲಾಖೆ ಅ ಧಿಕೃತ ಪ್ರಕಟಣೆ ಹೊರಡಿಸಿಲ್ಲ.