Advertisement

ಸೂಡಾದಿಂದ ಅನಧಿಕೃತ ಲೇಔಟ್‌ಗಳ ಮೇಲೆ ದಾಳಿ

09:51 PM Jul 04, 2021 | Shreeraj Acharya |

ಶಿವಮೊಗ್ಗ: ಶಿವಮೊಗ್ಗ ನಗರಾಭಿವೃದ್ಧಿ ಪ್ರಾ ಧಿಕಾರ ಅನ ಧಿಕೃತ ಲೇ ಔಟ್‌ಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಡೆಮಾಲಿಷ್‌ ಮಾಡುವ ಕಾರ್ಯಕ್ಕೆ ಮುಂದಾಗಿದೆ. ನಗರಕ್ಕೆ ಸಮೀಪದ ಸೂಳೆಬೈಲು ಗ್ರಾಮದಲ್ಲಿ ಸರ್ವೆ ನಂ.95ರಲ್ಲಿ 3 ಎಕರೆ 32 ಗುಂಟೆ ಜಮೀನಿನಲ್ಲಿ ಅನ ಧಿಕೃತವಾಗಿ ಲೇ ಔಟ್‌ ಮಾಡಲಾಗಿದ್ದು, ಇದನ್ನು ಗಮನಿಸಿದ ಸೂಡಾ ಅಧಿ ಕಾರಿಗಳು ಹಾಗೂ ಆಡಳಿತ ಮಂಡಳಿ ಜೆಸಿಬಿ ಸಮೇತ ಸ್ಥಳಕ್ಕೆ ಧಾವಿಸಿ ಲೇಔಟ್‌ನಲ್ಲಿ ನಿರ್ಮಾಣಗೊಂಡಿದ್ದ ಚರಂಡಿ ಮತ್ತಿತರ ಕಾಮಗಾರಿಗಳನ್ನು ಡೆಮಾಲಿಷ್‌ ಮಾಡಿದರು.

Advertisement

ನಿಯಮದ ಪ್ರಕಾರ ಒಂದು ಲೇಔಟ್‌ ನಿರ್ಮಾಣ ಮಾಡಬೇಕಾದರೆ ಭೂಮಿಗೆ ಸಂಬಂಧಿ ಸಿದಂತೆ ದಾಖಲಾತಿಗಳ ಸಮೇತ ನಗರಾಭಿವೃದ್ಧಿ ಪ್ರಾ ಧಿಕಾರದ ಒಪ್ಪಿಗೆ ಪಡೆಯಬೇಕು. ನಂತರವೇ ಲೇ ಔಟ್‌ ಕಾರ್ಯಕ್ಕೆ ಮುಂದಾಗಬೇಕು. ಆದರೆ ಇದ್ಯಾವುದನ್ನೂ ಮಾಡದೆ ಏಕಾಏಕಿ ಲೇಔಟ್‌ ಮಾಡಲು ಈ ಜಮೀನಿನ ಮಾಲೀಕರು ಮುಂದಾಗಿದ್ದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಸೂಡಾ ಅಧಿ  ಕಾರಿಗಳು.

ಶಿವಮೊಗ್ಗ ನಗರದಲ್ಲಿ ಅನ ಧಿಕೃತ ಲೇಔಟ್‌ಗಳು ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುವುದು ಸ್ವಲ್ಪ ವಿಳಂಬವಾಗಿದೆ. ಗೂಗಲ್‌ ಮುಖಾಂತರ ಅನ ಧಿಕೃತ ಲೇಔಟ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಡೆಮಾಲಿಷ್‌ ಮಾಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಯೋಜನೆ ಸೂಡಾದ ಮುಂದಿದೆ. ಈಗಾಗಲೇ ಈ ಕಾರ್ಯಕ್ಕೆ ಸಂಬಂ ಧಿಸಿದಂತೆ ಕಡತಗಳ ಮೂಲಕ ಹಾಗೂ ಗೂಗಲ್‌ ಮ್ಯಾಪ್‌ಗ್ಳ ಮೂಲಕ ಅನಧಿಕೃತ ಲೇಔಟ್‌ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಸೂಡಾದಿಂದ ವ್ಯಕ್ತವಾಗುತ್ತಿದೆ.

ಅನಧಿಕೃತ ಲೇಔಟ್‌ಗಳಲ್ಲಿ ನಿವೇಶನಗಳನ್ನು ಖರೀದಿಸಿದಂತವರು ಮನೆಗಳನ್ನು ಕಟ್ಟಲಾಗದೆ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಕೆಲವರು ಪ್ರಭಾವ ಬಳಸಿ ಮನೆಗಳನ್ನು ಕಟ್ಟಿದರೂ ಅದಕ್ಕೆ ಬೇಕಾದ ವಿದ್ಯುತ್‌ ಸಂಪರ್ಕ, ನಲ್ಲಿ ಸಂಪರ್ಕ ಸೇರಿದಂತೆ ಇನ್ನು ಮುಂತಾದ ಮೂಲ ಸೌಕರ್ಯ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅನ ಧಿಕೃತ ಲೇಔಟ್‌ನ ನಿವೇಶನದಾರರೊಬ್ಬರು.

ಒಟ್ಟಾರೆ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿ ಕಾರ ಅನಧಿಕೃತ ಲೇಔಟ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲೇಔಟ್‌ಗಳು ಸೂಡಾ ಕ್ರಮಕ್ಕೆ ಒಳಪಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಸೂಳೆಬೈಲ್‌ ಲೇ ಔಟ್‌ ಡೆಮಾಲಿಷ್‌ ಸಂದರ್ಭದಲ್ಲಿ ಅಧಿಕಾರಿಗಳಾದ ಗಂಗಾಧರಪ್ಪ. ಬಾಲರಾಜ್‌, ಪ್ರಜ್ವಲ್‌ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next