Advertisement

ವಿವಿಗಳು ಜ್ವಲಂತ ಸಮಸ್ಯೆಗಳ ಸಂಶೋಧನೆ ಕೈಗೊಳ್ಳಲಿ

09:33 PM Jul 02, 2021 | Shreeraj Acharya |

ಶಿವಮೊಗ್ಗ: ಅಸಮಾನತೆ, ಅಭಿವೃದ್ಧಿ ಕುಂಠಿತ, ನಿರುದ್ಯೋಗದಂತಹ ಸಮಾಜದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳುವ ಮೂಲಕ ವಿಶ್ವವಿದ್ಯಾಲಯಗಳು ಮತ್ತು ಸಂಶೋಧಕರು ಸಮಾಜ ಹಿತದ ಜವಾಬ್ದಾರಿ ನಿಭಾಯಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

Advertisement

ವಿವಿಯ ಸಮಾಜಶಾಸ್ತ್ರ ವಿಭಾಗವು ಮೈಸೂರಿನ ಸಮೃದ್ಧಿ ಫೌಂಡೇಶನ್‌ ಜತೆಗೂಡಿ ಸಮಾಜ ವಿಜ್ಞಾನ ವಿಭಾಗಗಳ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನ ಕುರಿತಂತೆ ಕನ್ನಡದಲ್ಲಿ ಜುಲೆ„ 1-11ರ ವರೆಗಿನ 11 ದಿನಗಳ ಆನ್‌ಲೈನ್‌ ಕಾರ್ಯಾಗಾರ ಸರಣಿಯನ್ನು ಆಯೋಜಿಸಿದ್ದು, ಬುಧವಾರ ಈ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈಯಕ್ತಿಕ ಹಿತಾಸಕ್ತಿ ಅಥವಾ ಕೇವಲ ಕೆಲವರ ಲಾಭಕ್ಕಾಗಿ ಸಂಶೋಧನೆ ಕೈಗೊಳ್ಳುವಂತದ್ದಲ್ಲ. ವಸ್ತುನಿಷ್ಠ ಮಾದರಿಯಲ್ಲಿ ಮಾತ್ರ ನಡೆಸುವ ಸಂಶೋಧನೆಯ ಕೇಂದ್ರ ಉದ್ದೇಶವು ಸಮಾಜದ ಉದ್ಧಾರವಾಗಿರುತ್ತದೆ ಎಂದು ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖೀಸಿರುವಂತೆ ಭಾರತದಲಿ ಉನ್ನತ ಶಿಕ್ಷಣಕ್ಕೆ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಶೇ. 26 ರಷ್ಟಿದೆ. ಪಿಎಚ್‌.ಡಿ. ಸೇರಿದಂತೆ ವಿವಿಧ ಸಂಶೋಧನೆಗಳಿಗೆ ಮುಂದಾಗುವವರ ಪಾಲು ಶೇ. 5 ಎಂಬುದು ವಿಷಾದನೀಯ ಸಂಗತಿ ಎಂದರು.

ವಿಭಾಗದ ಪ್ರೊ| ಎ. ರಾಮೇಗೌಡ, ಪ್ರೊ| ಎಂ. ಗುರುಲಿಂಗಯ್ಯ, ಪ್ರೊ| ಅಂಜನಪ್ಪ, ಪ್ರೊ|ಚಂದ್ರಶೇಖರ್‌ ಹಾಗೂ ಸಮೃದ್ಧಿ ಫೌಂಡೇಶನ್‌ನ ಕಾರ್ಯದರ್ಶಿ ಡಾ| ಶಾಂತಿ ಇದ್ದರು. 11 ದಿನಗಳ ಕಾರ್ಯಾಗಾರದಲ್ಲಿ ಪ್ರೊ| ಮುಝಫರ್‌ಅಸ್ಸಾದಿ, ಪ್ರೊ| ಇಂದಿರಾ, ಡಾ| ಕೆ. ಜಿ. ಗಾಯತ್ರಿದೇವಿ, ಪ್ರೊ| ಛಾಯ ಕೆ. ದೇಗಾಂವಕರ್‌, ಪ್ರೊ| ಸಿ.ಎ. ಸೋಮಶೇಖರಪ್ಪ, ಪ್ರೊ|ಟಿ.ಬಿ.ಬಿ.ಎಸ್‌ .ವಿ. ರಮಣಯ್ಯ ಸೇರಿದಂತೆ ಸಮಾಜ ವಿಜ್ಞಾನ ವಿಷಯಗಳ 15 ಕ್ಕೂ ಹೆಚ್ಚು ತಜ್ಞರು ವಿವಿಧ ಸಂಶೋಧನಾ ವಿಷಯಗಳ ಮೇಲೆ ಉಪನ್ಯಾಸ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next