ಸಾಗರ: ಹಿಂದೂಧರ್ಮ ಮತ್ತು ಸಂಸ್ಕೃತಿ ಯಾವುದೇ ಸಮುದಾಯದ ವಿರೋಧಿ ಅಲ್ಲ ಎಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಪ್ರತಿಪಾದಿಸಿದರು.
ತಾಲೂಕಿನ ಹೊಸಗುಂದದ ಉಮಾಮಹೇಶ್ವರ ದೇವಾಲಯ ಮತ್ತು ಪರಿವಾರ ದೇವಾಲಯಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ನಾವು ಎಂದಿಗೂ ಮರೆಯಬಾರದು. ಭಾರತದಲ್ಲಿ ಬಹುತೇಕ ದೇವಾಲಯಗಳು ಭಕ್ತರ ನಂಬಿಕೆ ಮೇಲೆ ನಡೆಯುತ್ತಿದೆ. ಹಾಗೆಯೇ ಸರ್ಕಾರಗಳು ತಮ್ಮ ಕರ್ತವ್ಯವನ್ನು ಮಾಡಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಯಂತ್ರಗಳೇ ಇಲ್ಲದ ಕಾಲದಲ್ಲಿ ಮಾನವ ಸಂಪನ್ಮೂಲ ಬಳಸಿ ನಮ್ಮ ಪೂರ್ವಿಕರು ಕಟ್ಟಿದ ದೇವಾಲಯಗಳು ಅದ್ಭುತವಾಗಿವೆ. ಈ ತರದ ಇತಿಹಾಸಕ್ಕೆ ತೆರೆದುಕೊಳ್ಳುವ ಜತೆಯಲ್ಲಿ ಮನುಷ್ಯ ವರ್ತಮಾನದಲ್ಲಿ ಮುನ್ನಡೆಯಬೇಕು. ಗೋಹತ್ಯೆ ನಿಷೇಧ ಕಾಯ್ದೆಯು ಎಲ್ಲ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ ಎಂದರು.
ಉಮಾಮಹೇಶ್ವರ ದೇವಾಲಯದ ಮುಖ್ಯಸ್ಥ ಸಿ.ಎಂ.ಎನ್. ಶಾಸ್ತ್ರಿ ಮಾತನಾಡಿ, ಇವತ್ತು ನಾವೆಲ್ಲ ಜಲ ಮೂಲಗಳನ್ನು ಉಳಿಸಬೇಕಿದೆ. ಪರಿಸರ ಸಂರಕ್ಷಿಸಿಕೊಳ್ಳಬೇಕಿದೆ. ಸಂಸ್ಕೃತಿ, ಸಂಸ್ಕಾರದ ಮಹತ್ವವನ್ನು ಯುವ ತಲೆಮಾರಿಗೆ ತಿಳಿಸಬೇಕಿದೆ.
ಎಲ್ಲ ಕೆಲಸ ಗಳಿಗೂ ಸಾಂಘಿ ಕ ಪ್ರಯತ್ನ ಬೇಕು. ಕ್ಷಣಮಾತ್ರದಲ್ಲಿ ಎಲ್ಲ ಸಾಧಿ ಸಲು ಸಾಧ್ಯವಿಲ್ಲ. ದೇವಾಲಯಗಳ ಅಭಿವೃದ್ಧಿ ಯಲ್ಲಿ ಜನರು ಮತ್ತು ಸರ್ಕಾರದ ಸಹಕಾರ ಬಹಳ ಮುಖ್ಯ ಎಂದರು. ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್, ಉಮೇಶ್ ಅಡಿಗ, ಗಣಪತಿ ಶೆಟ್ಟಿ, ವಿನಾಯಕ್ ಹೆಗ್ಡೆ ಇತರರು ಇದ್ದರು.