ಶಿವಮೊಗ್ಗ: ಕೋಣೆಯಲ್ಲಿ ಇರದೇ ಇರೋ ಕರಿ ಬೆಕ್ಕನ್ನು ಕಾಂಗ್ರೆಸ್‌ನವರು ಹುಡುಕುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ನಾಯಕರೇ ನಾಯಕತ್ವದ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಕೇಳಿದರೆ ತಾವು ಯಾರಿಗೂ ನನ್ನ ಬಗ್ಗೆ ಹೇಳಿ ಎಂದಿಲ್ಲ ಎನ್ನುತ್ತಿದ್ದಾರೆ. ಹಾಗೆಯೇ ನಾಯಕತ್ವದ ಬಗ್ಗೆ ಹೇಳಿಕೆ ನೀಡುವವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯನವರೇ ತಮ್ಮ ಪಕ್ಷದ ಹೈಕಮಾಂಡ್‌ಗೆ ಹೇಳಲಿ ಎಂದು ಸವಾಲು ಹಾಕಿದರು.
ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಈಗಲೇ ಈ ರೀತಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು ಮೊದಲು ಗೆದ್ದು ಬರಬೇಕು. ನಂತರ ಬಹುಮತ ಬರಬೇಕು. ಆಮೇಲೆ ಶಾಸಕರು ಸೇರಿ ತೀರ್ಮಾನ ಮಾಡಬೇಕು. ನಂತರ ಕೇಂದ್ರದ ನಾಯಕರು ಒಪ್ಪಬೇಕು. ಹೀಗಿರುವಾಗ ಕಾಂಗ್ರೆಸ್‌ನವರು ಇಲ್ಲದೇ ಇರುವ ಕರಿಬೆಕ್ಕನ್ನು ಕತ್ತಲೆ ಕೋಣೆಯಲ್ಲಿ ಹುಡುಕುವಂತಿದೆ ಎಂದು ಲೇವಡಿ ಮಾಡಿದರು.
ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಮುಂದೆಯೂ ಬಿಜೆಪಿಯೇ ಆಡಳಿತಕ್ಕೆ ಬರುತ್ತದೆ. ಇಂಥ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಜೇಬಲಿಲ್ಲ ತೆಗೆದು ಒಬ್ಬರಿಗೆ ಕೊಡೋಕೆ. ರಾಜ್ಯದ ಜನ ಕಾಂಗ್ರೆಸ್ ತಿರಸ್ಕಾರ ಮಾಡಿ ಉಪಚುನಾವಣೆ ಹಾಗೂ ಚುನಾವಣೆ ಸಂದರ್ಭದಲ್ಲಿ ಬುದ್ಧಿ ಕಲಿಸಿದ್ದಾರೆ. ಆದರೂ ಇವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಇದರಲ್ಲೇ ಗೊತ್ತಾಗುತ್ತೆ ಕಾಂಗ್ರೆಸ್‌ನವರಿಗೆ ಹೇಳ್ಳೋರು, ಕೇಳ್ಳೋರು ಯಾರೂ ಇಲ್ಲ ಅಂತ ಎಂದರು.
ಯಾರೂ ಈ ರೀತಿ ಹೇಳಿಕೆಗಳನ್ನು ನೀಡಬೇಡಿ ಎಂದುಕಾಂಗ್ರೆಸ್‌ನ ರಾಷ್ಟ್ರೀಯ ಪ್ರಭಾರಿಗಳೇ ಹೇಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷಕ್ಕೂ ಬರುತ್ತೋ, ಇಲ್ಲವೋ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಿಎಂ ಸ್ಥಾನದ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ.
ಏರ್ ಪೋರ್ಟ್ ಕಮಲ ವಿನ್ಯಾಸದಲ್ಲಿದೆ ಎಂಬ ಕಾಂಗ್ರೆಸ್ ಆರೋಪ ನಿರಾಧಾರ. ಕಮಲ ಎಂದರೆ ಅಭಿವೃದ್ಧಿಯ ಸಂಕೇತ. ಇದನ್ನು ವಿಮಾನ ನಿಲ್ದಾಣದ ಪ್ರವೇಶ ದ್ವಾರಕ್ಕೆ ಬಳಸಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಾಲಕ್ಷಿ$¾àಯ ಸಂಕೇತ. ಈ ಕಾಂಗ್ರೆಸ್ಸಿಗರು ಎಲ್ಲ ವಿಷಯಕ್ಕೂ ವಿರೋಧ ಮಾಡುತ್ತಿದ್ದಾರೆ. ಯಾವ ಒಳ್ಳೆಯ ಕೆಲಸಗಳು ಇವರಿಗೆ ಇಷ್ಟವಾಗಲ್ಲ ಎಂದರು.