ಶಿವಮೊಗ್ಗ : ಭಜರಂಗ ಕಾರ್ಯಕರ್ತನ ಮೇಲೆ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಉದ್ರಿಕ್ತರಿಂದ ಕಾರು, ರಿಕ್ಷಾಗಳ ಗಾಜುಗಳನ್ನು ಪುಡಿಮಾಡಲಾಗಿದ್ದು ಗಲಾಟೆ ಮತ್ತಷ್ಟು ಪ್ರದೇಶಗಳನ್ನು ಆವರಿಸುವ ಲಕ್ಷಣಗಳು ಕಂಡುಬರುತ್ತಿವೆ ಎನ್ನಲಾಗಿದೆ.
ಘಟನೆ ಕುರಿತಂತೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಪ್ರಯತ್ನ ಪಡುತ್ತಿದ್ದರೂ ಗಾಂಧಿಬಜಾರ್, ರವಿವರ್ಮ ಬೀದಿ ಹಾಗೂ ಕಸ್ತೂರ್ಬಾ ರಸ್ತೆಯಲ್ಲಿ ಕಾರು ಮತ್ತು ಆಟೋ ರಿಕ್ಷಾಗಳ ಗಾಜುಗಳನ್ನು ಪುಡಿಮಾಡಲಾಗಿದೆ.
ಇದೀಗ ಗಾಂಧಿಬಜಾರ್ ನಿಂದ ಮತ್ತಷ್ಟು ಏರಿಯಾಗಳೀಗೆ ವಿಸ್ತರಿಸುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸರ ತಂಡ ಆಗಮಿಸಿದೆ.
ಇದನ್ನೂ ಓದಿ:ಆತ್ಮ ನಿರ್ಭರ ಸಾಲ ಸೌಲಭ್ಯಕ್ಕೆ ಶೇ.35 ಅರ್ಜಿಗಳು ಮಂಜೂರು
ಘಟನಾ ಸ್ಥಳಕ್ಕೆ ಪೂರ್ವವಲಯ ಐಜಿಪಿ ಎಸ್.ರವಿ ಭೇಟಿ ನೀಡಿದ್ದು ಘರ್ಷಣೆ ಕುರಿತು ಶಿವಮೊಗ್ಗ ಎಸ್ಪಿ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಬಳಿಕ ಮಾತನಾಡಿದ ಐಜಿಪಿ ಎಸ್.ರವಿ ಶಿವಮೊಗ್ಗ ನಗರದ ನಾಲ್ಕೈದು ಕಡೆಗಳಲ್ಲಿ ಅಹಿತಕರ ಘಟನೆ ನಡೆದಿದೆ. ಹಿಂದೂ-ಮುಸಲ್ಮಾನರ ಸಾಮರಸ್ಯದ ವಿಷಯವಾಗಿ ಗಲಾಟೆಯಾಗಿದೆ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬೇಡಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತೇವೆ ಎಂದು ಐಜಿಪಿ ರವಿ ಹೇಳಿದ್ದಾರೆ.