Advertisement

ಸಚಿವ ಈಶ್ವರಪ್ಪ ಜನ್ಮದಿನ: ಕೆರೆ ಪುನಃಶ್ಚೇತನಕ್ಕೆ ಚಾಲನೆ

10:58 PM Jun 11, 2021 | Shreeraj Acharya |

ಶಿವಮೊಗ್ಗ: ಕೆರೆ ಪುನಃಶ್ಚೇತನ ಮಾಡುವ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು ಖುಷಿ ತಂದಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಮಲ್ಲಿಗೇನಹಳ್ಳಿಯ ಸರ್ವೇ ನಂ.25 ರಲ್ಲಿರುವ ರಾಮಿನಕಟ್ಟೆ ಕೆರೆ ಪುನಃ ಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಕೆರೆಯ ಅಭಿವೃದ್ಧಿಯ ಮೂಲಕ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಈ ಹಿಂದೆಯೇ ತಿಳಿಸಿದ್ದೆ. ಅದರಂತೆ ಈ ಕೆರೆಯ ಜಾಗದಲ್ಲಿ ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡದ ಸಹಯೋಗದೊಂದಿಗೆ ಈ ಕೆರೆಯನ್ನು ಪುನರುಜ್ಜೀವಗೊಳಿಸಲಾಗುವುದು ಮತ್ತು ಕೆರೆಯ ಸುತ್ತಲೂ ಹಸಿರು ಬೆಳೆಸಲಾಗುವುದು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಕೆರೆ ಕಟ್ಟೆಗಳು ಪ್ರಭಾವಿಗಳ ಪಾಲಾಗಿದ್ದು, ಕೆರೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಜಲ ಮೂಲಗಳು ಸರಿಯಾಗಿ ಇಲ್ಲದೆ ಇರುವುದರಿಂದ ನದಿಗಳು ಅಕಾಲಿಕವಾಗಿ ಬತ್ತುವಂತಾಗಿದೆ. ಹೀಗಾಗಿ ಕೆರೆಗಳ ಪುನಃಶ್ಚೇತನ ಇಂದು ಅನಿವಾರ್ಯವಾಗಿದೆ ಎಂದರು.

ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಹಿರಿಯರು ನಮಗೆ ಉತ್ತಮವಾದ ಪರಿಸರ ಬಿಟ್ಟು ಹೋಗಿದ್ದಾರೆ. ನಾವು ಇದನ್ನು ಮುಂದಿನ ಪೀಳಿಗೆಗೆ ಉಳಿಸುವಂತಹ ಯೋಜನೆಗಳನ್ನು ರೂಪಿಸಬೇಕೆಂದು ಹೇಳಿದರು. ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಿವಾನಂದ ಕಳವೆ ವಿಶೇಷ ಉಪನ್ಯಾಸ ನೀಡಿದರು. ಶಾಸಕ ಅಶೋಕ್‌ನಾಯ್ಕ, ವಿಧಾನ ಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ, ಎಸ್‌. ರುದ್ರೇಗೌಡ, ಆರ್‌. ಎಸ್‌.ಎಸ್‌. ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ, ಮೇಯರ್‌ ಸುನೀತಾ ಅಣ್ಣಪ್ಪ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next