ಸಾಗರ: ನಗರದ ವಿವಿಧ ವಾಡ್ ಗಳಲ್ಲಿ ಭಾನುವಾರ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎರಡನೆಯ ಅವಧಿಯ ಎರಡನೆಯ ವರ್ಷಾಚರಣೆ ಅಂಗವಾಗಿ ಸೇವಾ ಹಿ ಸಂಘಟನ್ ಘೋಷವಾಕ್ಯದಡಿ ವಿವಿಧ ಜನಹಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹತ್ತನೆಯ ವಾರ್ಡ್ ವ್ಯಾಪ್ತಿ ಮನೆಗಳಿಗೆ ಸಸಿ ನೀಡುವುದರ ಜತೆಗೆ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲಾಯಿತು. ನಗರಸಭಾಧ್ಯಕ್ಷೆ ಮಧುರಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಾಮ, ಸ್ಥಳೀಯ ವಾರ್ಡ್ ಸದಸ್ಯ ಕೆ.ಆರ್. ಗಣೇಶ್‌ಪ್ರಸಾದ್, ಪ್ರಮುಖರಾದ ಸತೀಶ್, ರತ್ನಾಕರ ಶೇಟ್, ಜಗನ್ನಾಥ್ ಶೇಟ್ ಮುಂತಾದವರಿದ್ದರು.
ಬಿಜೆಪಿಯ ನಗರ ಘಟಕದ ಸುಭಾಷ್ ನಗರದ ಮಹಾಸಕ್ತಿ ಕೇಂದ್ರದ ವತಿಯಿಂದ 3ನೆಯ ವಾರ್ಡ್ ವ್ಯಾಪ್ತಿ ಶ್ರೀಧರ ನಗರದ ಭಾಗದಲ್ಲಿ ಹೋಂ ಐಸೊಲೇಷನ್ ಆರೈಕೆಯಲ್ಲಿರುವ ಕೋವಿಡ್ ಸೋಂಕಿತರ ಕುಟುಂಬಗಳಿಗೆ ಬೆಳಗಿನ ಆಹಾರ ವಿತರಿಸಲಾಯಿತು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್ ಮರೂರು, ರೈತ ಮೋರ್ಚಾದ ಕಾರ್ಯದರ್ಶಿ ಮಂಜುನಾಥ ಭಟ್ಟ, ಕೆ.ಜಿ. ಸಂತೋಷ ಮುಂತಾದವರಿದ್ದರು.
ನಗರಸಭಾ ಸದಸ್ಯೆ ಸರೋಜ ಭಂಡಾರಿ ನೇತೃತ್ವದಲ್ಲಿ ಮಾಸ್ಕ್ ವಿತರಣೆ, ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೃಷ್ಣಮೂರ್ತಿ ಭಂಡಾರಿ, ಅರುಣ್ ಕುಮಾರ್, ಸಂತೋಷ್, ಪ್ರದೀಪ, ಆನಂದ್ ಮುಂತಾದವರಿದ್ದರು. ಅಣಲೆಕೊಪ್ಪ ವ್ಯಾಪ್ತಿಯ ಇನ್ನೂರು ನಿವಾಸಿಗಳಿಗೆ ನಗರಸಭಾ ಸದಸ್ಯ ಆರ್. ಶ್ರೀನಿವಾಸ್ ಮೇಸ್ತ್ರಿ ನೇತೃತ್ವದಲ್ಲಿ ಹಾಲು ವಿತರಿಸಲಾಯಿತು. ರಾಘವೇಂದ್ರ, ಕೃಷ್ಣ, ರವಿ ಶೆಟ್ಟಿ, ಯೋಗೀಶ್ ಮುಂತಾದವರಿದ್ದರು.
ಮಾರಿಕಾಂಬಾ ಮಹಾ ಶಕ್ತಿ ಕೇಂದ್ರದ ವತಿಯಿಂದ ನಗರಸಭಾ ಸದಸ್ಯ ಅರವಿಂದ್ ರಾಯ್ಕರ್ ನೇತೃತ್ವದಲ್ಲಿ ಕಾರ್ಯಕರ್ತರು ಬಡವರ ಮನೆಗೆ ಅಕ್ಕಿ ವಿತರಿಸಿದರು.