Advertisement

ಸಂಕಷ್ಟದಲ್ಲಿ ನೆರವಾಗಲು 30 ಸಾವಿರ ದಿನಸಿ ಕಿಟ್‌ ವಿತರಣೆ

10:43 PM May 31, 2021 | Shreeraj Acharya |

ಶಿವಮೊಗ್ಗ: ಕೋವಿಡ್‌ ಸಂಕಷ್ಟದಲ್ಲಿ ಸಾವು-ನೋವು ಉಂಟಾಗಿದೆ. ಸಮಾಜದ ಎಲ್ಲರೂ ಹಲವಾರು ಸವಾಲು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಮಾಜದ ವಿವಿಧ ವಿಭಾಗದಲ್ಲಿ ಕೆಲಸ ಮಾಡುತ್ತಿರುವರಿಗೆ, ಬಡವರಿಗೆ ನೆರವಾಗುವ ಉದ್ದೇಶದಿಂದ ಸುಮಾರು 30 ಸಾವಿರ ದಿನಸಿ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

ಅವರು ಪಾಲಿಕೆ ಆವರಣದಲ್ಲಿ ಸೇವಾ ಭಾರತಿ, ಪ್ರೇರಣಾ ಎಜ್ಯುಕೇಷನಲ್‌ ಟ್ರಸ್ಟ್‌ ವತಿಯಿಂದ ಕೊರೊನಾ ವಾರಿಯರ್ಸ್‌ ಮತ್ತು ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೊರೊನಾ ಹಬ್ಬುವುದನ್ನು ತಡೆಯಲು ಒಂದು ವಾರದ ಕಟ್ಟುನಿಟ್ಟಿನ ಲಾಕ್‌ ಡೌನ್‌ ಇದೆ. ಹೀಗಾಗಿ ಸಾಂಕೇತಿಕವಾಗಿ ದಿನಸಿ ಕಿಟ್‌ ನೀಡುತ್ತಿದ್ದು ಜೂನ್‌ 7 ರವರೆಗೆ ನಿಗದಿ ಪಡಿಸಿದ ಕಿಟ್‌ ವಿತರಣೆ ಕಾರ್ಯಕ್ರಮವನ್ನು ರದ್ದುಗೊಳಿಸಿ ಜೂನ್‌ 7 ರ ಕಠಿಣ ಲಾಕ್‌ಡೌನ್‌ ನಂತರ ವಿತರಿಸಲಾಗುವುದು ಎಂದರು.

ಕಿಟ್‌ ವಿತರಿಸುವ ಸಂದರ್ಭದಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಮಾತನಾಡಿ, ಸಮಾಜದ ಋಣ ತೀರಿಸುವ ಕೆಲಸವನ್ನು ಸಂಸದ ಬಿ.ವೈ. ರಾಘವೇಂದ್ರ ಮಾಡುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಸಮಾಜದ ಎಲ್ಲರ ಹಸಿವು ನೀಗಿಸಲು ತಮ್ಮಿಂದಾದ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಭಾನುವಾರ ಪಾಲಿಕೆ ಆವರಣದಲ್ಲಿ ಪೌರಕಾರ್ಮಿಕರಿಗೆ ಬಳಿಕ ಅಂಗನವಾಡಿ ಶಿಕ್ಷಕರು, ಸಹಾಯಕರಿಗೆ, ವೀರಶೈವ ಕಲ್ಯಾಣ ಮಂದಿರ ಪಕ್ಕ ನಿಜಲಿಂಗಪ್ಪ ಸಭಾಂಗಣದಲ್ಲಿ ಕಿಟ್‌ ವಿತರಣೆ ನಡೆಯಿತು.

ಮಾಂಗಲ್ಯ ಮಂದಿರದಲ್ಲಿ ಬಾಣಸಿಗರು ಹಾಗೂ ಅರ್ಚಕರಿಗೆ, ಪ್ರಸ್‌ ಟ್ರಸ್ಟ್‌ನಲ್ಲಿ ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿಧಿಗಳು, ಪತ್ರಿಕಾ ವಿತರಕರು, ಫೋಟೋ ಗ್ರಾಫರ್‌ ಗಳಿಗೆ ಕಿಟ್‌ ವಿತರಿಸಲಾಯಿತು. ಸಂಜೆ ನಿಜಲಿಂಗಪ್ಪ ಸಭಾಭವನದಲ್ಲಿ ರಿಕರು, ಬಸ್‌ ಏಜೆಂಟರು, ಡೈವರ್‌ ಗಳಿಗೆ ಡಿಎಆರ್‌ ಗ್ರೌಂಡ್‌ ನಲ್ಲಿ ಪೊಲೀಸ್‌ ಸಿಬ್ಬಂದಿ, ಹೋಮ್‌ ಗಾರ್ಡ್‌ ಗಳಿಗೆ, ಮೆಡಿಕಲ್‌ ಕಾಲೇಜಿನಲ್ಲಿ ಅರೋಗ್ಯ ಇಲಾಖೆ ಸಿಬ್ಬಂದಿಗೆ ಕಿಟ್‌ ಹಂಚಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next