Advertisement

ಸಂವಿಧಾನ ದೇಶದ ಭದ್ರ ಬುನಾದಿ: ನಯನಾ

06:50 PM Jan 27, 2021 | Shreeraj Acharya |

ಸೊರಬ: ಸ್ವಾತಂತ್ರ್ಯ ನಂತರದಲ್ಲಿ ವಿವಿಧ ಪ್ರಾಂತ್ಯಗಳಾಗಿ·ಹರಿದು ಹಂಚಿಹೋಗಿದ್ದ, ದೇಶವನ್ನು ಒಗ್ಗೂಡಿಸಲುಅನೇಕ ಮಹಾನ್‌ ನಾಯಕರು ಶ್ರಮಿಸಿದ್ದಾರೆ.ಮುಖ್ಯವಾಗಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರಸಂವಿಧಾನ ದೇಶದ ಭದ್ರ ಬುನಾದಿಯಾಗಿದೆಎಂದು ತಾಪಂ ಅಧ್ಯಕ್ಷ ನಯನಾ ಶ್ರೀಪಾದ ಹೆಗಡೆಹೇಳಿದರು.

Advertisement

ಪಟ್ಟಣದ ರಂಗ ಮಂದಿರದ ಮುಂಭಾಗದಲ್ಲಿಮಂಗಳವಾರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 72ನೇಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರದಲ್ಲಿ ದೇಶಕ್ಕೆ ಸಂವಿಧಾನಎಂಬ ಚೌಕಟ್ಟನ್ನು ನೀಡಿದ ಮಹಾನ್‌ ನಾಯಕಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ಸ್ಮರಿಸುವಜೊತೆಗೆ ಸಂವಿಧಾನದ ಆಶಯಗಳನ್ನು ಪೂರೈಸುವಜವಾಬ್ದಾರಿ ನಮ್ಮೆಲರ ಹೊಣೆಯಾಗಿದೆ. ಸಂವಿಧಾನದಮೂಲಭೂತ ಹಕ್ಕುಗಳನ್ನು ಪಡೆದ ನಾವುಗಳುಮೂಲ ಭೂತ ಕರ್ತವ್ಯಗಳನ್ನು ಪಾಲಿಸುವುದನ್ನು
ಮರೆಯಬಾರದು ಎಂದರು.

ಜಿಲ್ಲೆಯ ಭದ್ರಾವತಿಯಲ್ಲಿ ಆರ್‌ಎಎಫ್‌ ಘಟಕಸ್ಥಾಪನೆಗೆ ಈಗಾಗಲೇ ಅಡಿಗಲ್ಲು ಹಾಕಲಾಗಿದೆ.ಇದರಿಂದ ನೆರೆಹಾವಳಿ ಮತ್ತಿತರರ ತುರ್ತುಸ್ಥಿತಿಯಲ್ಲಿಜೀವ ಹಾನಿ ತಡೆಗಟ್ಟಲು ಸಾಧ್ಯವಿದೆ. ಇನ್ನು ಜಿಲ್ಲಾಕೇಂದ್ರದಲ್ಲಿ ವಿಮಾನ ನಿಲ್ದಾಣ ಕಾರ್ಯವೂ ಪ್ರಗತಿಯಲ್ಲಿ
ಸಾಗುತ್ತಿರುವುದು ಅಭಿವೃದ್ಧಿಯ ಸಂಕೇತವಾಗಿದೆ.ಜೊತೆಗೆ ರೈಲ್ವೆ ಟರ್ಮಿನಲ್‌ ಘಟಕ ಸ್ಥಾಪನೆಯಿಂದಸುಮಾರು ಐದು ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.ಹೀಗೆ ಹತ್ತು ಯೋಜನೆಗಳು ಸೇರಿದಂತೆ ಸಮಗ್ರಅಭಿವೃದ್ಧಿ ಕಾರ್ಯಗಳು ರಾಜ್ಯ ಹಾಗೂ ಕೇಂದ್ರಸರ್ಕಾರದಿಂದನಿರ್ಮಾಣವಾಗುತ್ತಿರುವುದು ಸಂತಸತಂದಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ತಾಲೂಕು ಆರೋಗ್ಯಾ ಧಿಕಾರಿ ಡಾ|ಅಕ್ಷತಾ ವಿ. ಖಾನಾಪುರ, ತಾಲೂಕು ಕಚೇರಿಯಡಿ ಗ್ರೂಪ್‌ ನೌಕರ ಶಿವಪ್ಪ, ತಲಗುಂದ ಗ್ರಾಪಂಪಿಡಿಒ ಚಿದಾನಂದ, ಬಿಆರ್‌ಸಿ ಎಚ್‌. ಆಂಜನೇಯಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿನಿಸೌಜನ್ಯ ತಾವರೆಕೊಪ್ಪ ಅವರಿಗೆ ಪ್ರತಿಭಾ ಪುರಸ್ಕಾರನೀಡಲಾಯಿತು. ತಹಶೀಲ್ದಾರ್‌ ಶಿವಾನಂದ ರಾಣೆ
ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ತಾಪಂಇಒ ನಂದಿನಿ, ತಾಪಂ ಉಪಾಧ್ಯಕ್ಷ ಸುರೇಶ್‌ಹಾವಣ್ಣನವರ್‌, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್‌,ಉಪಾಧ್ಯಕ್ಷ ಮಧುರಾಯ್‌ ಜಿ. ಶೇಟ್‌, ಸದಸ್ಯರಾದವೀರೇಶ್‌ ಮೇಸ್ತ್ರಿ, ಪ್ರೇಮಾ, ‌, ಶ್ರೀರಂಜನಿ,ಅನ್ಸರ್‌ ಆಹ್ಮದ್‌, ನಟರಾಜ್‌, ಪ್ರಭು ಮೇಸ್ತ್ರಿ, ಸುಲ್ತಾನಬೇಗಂ, ತಾಪಂ ಸದಸ್ಯ ನಾಗರಾಜ ಚಿಕ್ಕಸವಿ, ಪಿಎಸ್‌ಐಟಿ.ಬಿ. ಪ್ರಶಾಂತ್‌ ಕುಮಾರ್‌, ಶಿರಸ್ತೇದಾರ್‌ ವಿಜಯ್‌,
ಆರ್‌ಐ ದೀಪಕ್‌, ವಿನೋದ್‌ ಮತ್ತಿತರರು ಇದ್ದರು.

Advertisement

ಓದಿ :·ವಿವಿಧೆಡೆ 72ನೇ ಗಣರಾಜ್ಯೋತ್ಸವ ಸಂಭ್ರಮ

Advertisement

Udayavani is now on Telegram. Click here to join our channel and stay updated with the latest news.

Next