Advertisement

ಮೋದಿ ಆಡಳಿತ ಮಾದರಿ: ಹರತಾಳು ಹಾಲಪ್ಪ

06:42 PM Jan 27, 2021 | Shreeraj Acharya |

ಸಾಗರ: ಒಂದೇ ಭಾರತ, ಒಂದೇ ಧ್ವಜ, ಒಂದೇ ಸಂವಿಧಾನ ಎನ್ನುವ ಸಂಕಲ್ಪಕ್ಕೆ ಬದ್ಧವಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಅತ್ಯಂತ ಮಾದರಿಯಾದದ್ದು ಎಂದು ಎಂಎಸ್‌ಐಎಲ್‌ ಅಧ್ಯಕ್ಷ ಹಾಗೂ ಶಾಸಕ ಎಚ್‌. ಹಾಲಪ್ಪ
ಹರತಾಳು ತಿಳಿಸಿದರು.

Advertisement

ಇಲ್ಲಿನ ಗಣಪತಿ ಕೆರೆ ಪಕ್ಕದ ಅಂಗಳದಲ್ಲಿ ಮಂಗಳವಾರ ನಗರಸಭೆ ವತಿಯಿಂದ ನಿರ್ಮಿಸಲಾಗಿರುವ 159 ಅಡಿ ಎತ್ತರದ ಬೃಹತ್‌ ಧ್ವಜಸ್ಥಂಭವನ್ನು ಲೋಕಾರ್ಪಣೆಗೊಳಿಸಿ, ರಾಷ್ಟ್ರಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ಕೊರೊನಾದಂತಹ ಸಂದರ್ಭದಲ್ಲಿ ದೇಶದ ಅಭಿವೃದ್ಧಿಯಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಿದ್ದರೂ, ದೇಶದ ವಿಜ್ಞಾನಿಗಳು ಇಡೀ ವಿಶ್ವಕ್ಕೆ ಮಾದರಿ ಎನ್ನುವಂತೆ ಲಸಿಕೆ ಕಂಡುಹಿಡಿದು ಗಮನ ಸೆಳೆದಿದ್ದಾರೆ.

ಸಿಗಂದೂರು ಸೇತುವೆ, ಹಸಿರುಮಕ್ಕಿ ಸೇತುವೆ, ಪಟಗುಪ್ಪ ಸೇತುವೆಯಂತಹವು ನಿರ್ಮಾಣ ಮಾಡುವುದೇ ಅಸಾಧ್ಯ ಎಂದು ಹೇಳಲಾಗುತಿತ್ತು. ಅಸಾಧ್ಯವನ್ನು ಸಾಧ್ಯವಾಗಿಸಿದ ಹೆಗ್ಗಳಿಕೆ ರಾಜ್ಯ ಸರ್ಕಾರದ್ದಾಗಿದೆ. ಪುರಾತನ ಗಣಪತಿ ಕೆರೆ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಲಾಗುತ್ತಿದೆ.
ಎಪಿಎಂಸಿಯಿಂದ ನಿರ್ಮಾಣಗೊಂಡಿರುವ ಸಂತೆ ಮಾರ್ಕೆಟ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಭಾನುವಾರ ಸಂತೆ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಸಹಾಯಕ ಆಯುಕ್ತ ಪ್ರಸನ್ನ ವಿ., ತಹಶೀಲ್ದಾರ್‌ ಚಂದ್ರಶೇಖರ್‌ ನಾಯ್ಕ, ಪೌರಾಯುಕ್ತ ಎಚ್‌.ಕೆ. ನಾಗಪ್ಪ, ನಗರಸಭೆ ಅಧ್ಯಕ್ಷೆ ಮಧುರಾ
ಶಿವಾನಂದ್‌, ಸ್ಥಾಯಿ ಸಮಿತಿ ಅಧ್ಯಕ್ಷ ತುಕಾರಾಂ, ಸದಸ್ಯರಾದ ಟಿ.ಡಿ. ಮೇಘರಾಜ್‌, ಶ್ರೀನಿವಾಸ್‌, ಲಿಂಗರಾಜ್‌, ಅರವಿಂದ ರಾಯ್ಕರ್‌, ಮೈತ್ರಿ ಪಾಟೀಲ್‌, ಸೈಯದ್‌ ಜಾಕೀರ್‌, ಮಧುಮಾಲತಿ ಇನ್ನಿತರರಿದ್ದರು.

 

Advertisement

ಓದಿ :     ಕೇಂದ್ರದಿಂದ 18 ರಾಜ್ಯಗಳಿಗೆ 12,351 ಕೋಟಿ ಅನುದಾನ ಬಿಡುಗಡೆ : ಕರ್ನಾಟಕಕ್ಕೆ 2,412 ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next